ETV Bharat / state

ಕದ್ರಾ ಜಲಾಶಯದಿಂದ ಕಾಳಿನದಿಗೆ ನೀರು... ರಕ್ಷಿಸಿ ಅಂತಾ ಗೋಗರಿಯುತ್ತಿರುವ ಮಹಿಳೆಯರು

ಕದ್ರಾ ಜಲಾಶಯದಿಂದ ನಿರಂತರವಾಗಿ ನೀರು ಹೊರಬಿಡಲಾಗುತ್ತಿದ್ದು, ಕಾಳಿ ನದಿಯಂಚಿನ ಗ್ರಾಮಗಳು ಸಂಪೂರ್ಣ ಜಲಾವೃತಗೊಂಡಿವೆ. ಜನಜೀವನ ಅಸ್ತವ್ಯಸ್ತಗೊಂಡಿದ್ದು, ತಮ್ಮನ್ನು ರಕ್ಷಿಸಿ ನಿರಾಶ್ರಿತರು ಕಣ್ಣೀರು ಹಾಕುತ್ತಿದ್ದಾರೆ.

ಕದ್ರಾ ಜಲಾಶಯದಿಂದ ನಿರಂತರವಾಗಿ ನೀರು...ರಕ್ಷಣೆಗಾಗಿ ಗೋಗರಿಯುತ್ತಿರುವ ಜನರು
author img

By

Published : Aug 8, 2019, 5:36 PM IST

Updated : Aug 8, 2019, 7:18 PM IST

ಕಾರವಾರ: ಕದ್ರಾ ಜಲಾಶಯದಿಂದ ನಿರಂತರವಾಗಿ ನೀರು ಹೊರಬಿಡುತ್ತಿದ್ದು, ಕಾಳಿ ನದಿಯಂಚಿನ ಗ್ರಾಮಗಳು ಸಂಪೂರ್ಣ ಜಲಾವೃತವಾಗಿವೆ. ಹೀಗಾಗಿ ಜನಜೀವನ ಅಸ್ತವ್ಯಸ್ತಗೊಂಡಿದ್ದು, ತಮ್ಮನ್ನು ರಕ್ಷಿಸಿ ಎಂದು ಮಹಿಳೆಯರು ಜಿಲ್ಲಾಡಳಿತಕ್ಕೆ ಮೊರೆಯಿಟ್ಟಿದ್ದಾರೆ.

ಕದ್ರಾ ಜಲಾಶಯದಿಂದ ಕಾಳಿನದಿಗೆ ನೀರು... ರಕ್ಷಿಸಿ ಅಂತಾ ಗೋಗರಿಯುತ್ತಿರುವ ಮಹಿಳೆಯರು

ಕದ್ರಾ, ಕೊಡಸಳ್ಳಿ ಜಲಾನಯನ ಪ್ರದೇಶದಲ್ಲಿ ನಿರಂತರವಾಗಿ ಮಳೆಯಾಗುತ್ತಿರುವ ಕಾರಣ, ಕದ್ರಾ ಜಲಾಶಯದಿಂದ 1.5 ಲಕ್ಷ ಕ್ಯೂಸೆಕ್ ನೀರನ್ನು ಕಾಳಿ ನದಿಗೆ ಹರಿಸಲಾಗುತ್ತಿದೆ. ಇದರಿಂದಾಗಿ ಕಾರವಾರದ ಕಾಳಿ ನದಿಯಂಚಿನ ಕಿನ್ನರ ಖಾರ್ಗೆಜೂಗ, ಭರತವಾಡ ಸೇರಿದಂತೆ ಸುಮಾರು 30 ಹಳ್ಳಿಗಳಲ್ಲಿ ನೆರೆಹಾವಳಿ ಸೃಷ್ಟಿಯಾಗಿದೆ. ಕಳೆದ ನಾಲ್ಕು ದಿನಗಳಿಂದ ಈ ಭಾಗದಲ್ಲಿ ನಿರೀಕ್ಷೆಗೂ ಮೀರಿ ನೆರೆ ಬಂದಿದ್ದು, ಸುಮಾರು 400 ಮನೆಗಳು ಮುಳುಗಡೆಯಾಗಿವೆ. ಜನರನ್ನು ಸ್ಥಳೀಯರು, ಪೊಲೀಸರು ದೋಣಿಗಳ ಮೂಲಕ ತರಲು ಹರಸಾಹಸ ಪಡುತ್ತಿದ್ದಾರೆ.

ಕಿನ್ನರದಲ್ಲಿ ಸುಮಾರು 30 ಜನರು ನೀರಿನ ಮಧ್ಯದಲ್ಲಿ ಸಿಲುಕಿಕೊಂಡಿದ್ದು, ವಾಹನಗಳು ಬಾರದ ಹಿನ್ನೆಲೆ ಬೋಟ್​ಗಾಗಿ ಅಂಗಲಾಚಿದ್ದಾರೆ. ನೀರು ಬರುವ ಬಗ್ಗೆ ಯಾವುದೇ ಮುನ್ಸೂಚನೆ ನೀಡದೆ ಇರುವುದೇ, ಇಷ್ಟೊಂದು ತೊಂದರೆಗೆ ಕಾರಣ. ಕಳೆದ ಮೂರು ದಿನಗಳಿಂದ ಒಂದೇ ಬಟ್ಟೆಯಲ್ಲಿ ಕಾಲ ಕಳೆಯುತ್ತಿದ್ದೇವೆ. ಊಟ ಬಿಟ್ಟು ಗಂಜಿ ಕೇಂದ್ರದಲ್ಲಿ ಬೇರೆನೂ ಸಿಗುತ್ತಿಲ್ಲ. ದನಕರುಗಳನ್ನು ಕಾಡಿನಲ್ಲಿ ಕಟ್ಟಿದ್ದು, ಅವುಗಳಿಗೆ ‌ಮೇವು ನೀಡುವುದಕ್ಕೂ ಆಗುತ್ತಿಲ್ಲ. ನಮ್ಮ ಸಂಕಷ್ಟಕ್ಕೆ ಯಾರು ಕೂಡ ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು ಸಂತ್ರಸ್ತರು ಕಣ್ಣೀರು ಹಾಕುತ್ತಿದ್ದಾರೆ.

ಸಮಸ್ಯೆ ಆಲಿಸಲು ಸ್ಥಳ್ಕಕಾಗಮಿಸಿದ್ದ ಶಾಸಕಿ ರೂಪಾಲಿ ‌ನಾಯ್ಕ ಅವರು, ನೆರೆ ಸಂತ್ರಸ್ತರಿಗೆ ಅಗತ್ಯ ವಸ್ತುಗಳನ್ನು ಪೂರೈಸಲಾಗುತ್ತಿದೆ. ಆದರೆ ಇನ್ನು ಕೆಲವೊಂದಿಷ್ಟು ವಸ್ತುಗಳು ಬರುತ್ತಿದ್ದು, ಮಾರ್ಗಮಧ್ಯ ರಸ್ತೆ ಬಂದಾಗಿರುವ ಕಾರಣ ವಿಳಂಬವಾಗುತ್ತಿದೆ. ತಾಲೂಕಿನ ಸುಮಾರು ಹಳ್ಳಿಗಳು ಮುಳುಗಿದ್ದು, ಎಲ್ಲ ಜನರಿಗೂ ಗಂಜಿ ಕೇಂದ್ರದಲ್ಲಿ ಅಗತ್ಯ ಮೂಲಭೂತ ಸೌಕರ್ಯ ಕಲ್ಪಿಸುವುದಾಗಿ ಅಭಯ ನೀಡಿದ್ದಾರೆ.

Intro:ರಕ್ಷಣೆಗಾಗಿ ಗೋಗರಿಯುತ್ತಿರುವ ಜನ... ಶಾಸಕಿ, ಅಧಿಕಾರಿಗಳಿಗೆ ಮುತ್ತಿಗೆ ಹಾಕಿ ಆಕ್ರೋಶ

ಕಾರವಾರ: ಕದ್ರಾ ಜಲಾಶಯದಿಂದ ನಿರಂತರವಾಗಿ ನೀರು ಹೊರಬಿಡುತ್ತಿದ್ದು, ಕಾಳಿನದಿಯಂಚಿನ ಗ್ರಾಮಗಳು ಸಂಪೂರ್ಣ ಜಲಾವೃತಗೊಂಡು ಜನ ಜೀವನ ಅಸ್ತವ್ಯಸ್ತಗೊಂಡಿದೆ.
ಕದ್ರಾ, ಕೊಡಸಳ್ಳಿ ಜಲಾನಯನ ಪ್ರದೇಶದಲ್ಲಿ ನಿರಂತರವಾಗಿ ಮಳೆಯಾಗುತ್ತಿರುವ ಕಾರಣ ಕದ್ರಾ ಜಲಾಶಯದಿಂದ ೧.೫ ಲಕ್ಷ ಕ್ಯೂಸೆಕ್ ನೀರನ್ನು ಕಾಳಿ ನದಿಗೆ ಹರಿಸಲಾಗುತ್ತಿದೆ. ಇದರಿಂದಾಗಿ ಕಾರವಾರದ ಕಾಳಿನದಿಯಂಚಿನ ಕಿನ್ನರ ಖಾರ್ಗೆಜೂಗ, ಭರತವಾಡ ಸೇರಿದಂತೆ ಸುಮಾರು ೩೦ ಹಳ್ಳಿಗಳಲ್ಲಿ ನೆರೆಹಾವಳಿ ಸೃಷ್ಟಿಯಾಗಿದೆ. ಕಳೆದ ನಾಲ್ಕು ದಿನಗಳಿಂದ ಈ ಭಾಗದಲ್ಲಿ ನಿರೀಕ್ಷೆಗೂ ಮೀರಿ ನೆರೆ ಬಂದಿದ್ದು, ಸುಮಾರು ೪೦೦ ಮನೆಗಳು ಮುಳುಗಡೆಯಾಗಿದೆ.
ಜನರನ್ನು ಸ್ಥಳೀಯರು ಪೋಲಿಸರು ದೋಣಿಗಳ ಮೂಲಕ ತರಲು ಹರಸಾಹಸ ಪಡುತ್ತಿದ್ದಾರೆ. ಕಿನ್ನರದಲ್ಲಿ ಸುಮಾರು ೫೦ ಜನರು ಇನ್ನೂ ನೀರಿನ ಮಧ್ಯದಲ್ಲಿ ಸಿಲುಕಿಕೊಂಡಿದ್ದು, ವಾಹನಗಳು ಬಾರದ ಹಿನ್ನೆಲೆಯಲ್ಲಿ ಬೋಟ್ ಗಾಗಿ ಅಂಗಲಾಚಿದ್ದಾರೆ. ನೀರು ಬರುವ ಬಗ್ಗೆ ಯಾವುದೇ ಮುನ್ಸೂಚನೆ ನೀಡದೆ ಇರುವುದೇ ಇಷ್ಟೊಂದು ತೊಂದರೆಗೆ ಕಾರಣ. ಕಳೆದ ಮೂರು ದಿನಗಳಿಂದ ಒಂದೇ ಬಟ್ಟೆಯಲ್ಲಿ ಕಾಲ ಕಳೆಯುತ್ತಿದ್ದೇವೆ. ಊಟ ಬಿಟ್ಟು ಗಂಜೀಕೇಂದ್ರದಲ್ಲಿ ಬೇರೆನೂ ಸಿಗುತ್ತಿಲ್ಲ. ದನಕರುಗಳನ್ನು ಕಾಡಿನಲ್ಲಿ ಕಟ್ಟಿದ್ದು, ಅವುಗಳಿಗೆ ‌ಮೇವು ನೀಡುವುದಕ್ಕೂ ಆಗುತ್ತಿಲ್ಲ. ನಮ್ಮ ಸಂಕಷ್ಟಕ್ಕೆ ಯಾರು ಕೂಡ ಸರಿಯಾಗಿ ಸ್ಪಂಧಿಸುತ್ತಿಲ್ಲ ಎಂದು ಕಣ್ಣೀರು ಹಾಕುತ್ತಾರೆ ತೊಂದರೆಗೊಳಗಾದ ಮಹಿಳೆ ಸಂಧ್ಯಾ ಗೋವೇಕರ್.
ಇನ್ನು ಕಿನ್ನರ ಗ್ರಾಮಕ್ಕೆ ಯಾವುದೇ ಮುನ್ಸೂಚನೆ ನೀಡದ ಕಾರಣ ಸಂಪೂರ್ಣ ಜಲಾವೃತಗೊಂಡಿದೆ. ಈಗಾಗಲೇ ಸುಮಾರು ೪೦೦ ಮನೆಗಳು ಮುಳುಗಡೆಯಾಗಿದೆ. ಉಟ್ಟ ಬಟ್ಟೆಯಲ್ಲಿ ಬಂದಿರುವ ಕಾರಣ ಮೂರು ದಿನದಿಂದ ಸ್ನಾನ ನಿದ್ದೆ ಇಲ್ಲದ ಸ್ಥಿತಿ ಇದೆ. ಇದೇ ರಿತಿ ಇದ್ದರೇ ವೈದ್ಯರು ರೋಗ ಹರಡುವ ಬಗ್ಗೆ ಎಚ್ಚರಿಸುಲಿದ್ದಾರೆ. ಇನ್ನು ಈ ಬಗ್ಗೆ ಅಧಿಕಾರಿಗಳಿಗೆ ಮೂಲಭೂತ ಸೌಕರ್ಯ ನೀಡಿ ಎಂದರೆ ಸ್ಪಂಧಿಸುತ್ತಿಲ್ಲ. ಕುಡಿಯಲು ನೀರು ಕೇಳಿದರೇ ಮಳೆ ನೀರನ್ನೆ ಕಾಯಿಸಿ ಕುಡಿಯಿರಿ ಎಂದು ಹಾರಿಕೆ ಉತ್ತರ ನೀಡುತ್ತಿದ್ದಾರೆ. ಜನರು ತುಂಬಾ ಸಂಕಷ್ಟದಲ್ಲಿದ್ದಾರೆ. ಶಾಸಕರು ಬಂದು ಇದೀಗ ಭರವಸೆ ನೀಡಿದ್ದಾರೆ. ಆದರೆ ಕಳೆದ ನಾಲ್ಕು ದಿನದಿಂದ ಬಾರದ ಶಾಸಕರು ಇದೀಗ ನೆಪಮಾತ್ರಕ್ಕೆ ಬಂದು ಹೋಗುತ್ತಿದ್ದಾರೆ ಎಂದು ಜನರು ಕೂಡ ಆಕ್ರೋಶ ಹೊರ ಹಾಕಿದ್ದಾರೆ. ಜನರ ಕಷ್ಟಕ್ಕೆ ಯಾರು ಸರಿಯಾಗಿ ಸ್ಪಂಧಿಸುತ್ತಿಲ್ಲ ಎಂದು ಜಿಲ್ಲಾ ಪಂಚಾಯಿತಿ ಸದಸ್ಯೆ ಚೈತ್ರಾಕೋಠಾರಕರ್ ಆಕ್ರೋಶ ವ್ಯಕ್ತಪಡಿಸಿದರು.
ಇನ್ನು ಜನರ ಸಮಸ್ಯೆ ಆಲಿಸಲು ರೂಪಾಲಿ ‌ನಾಯ್ಕ ಸ್ಥಳಕ್ಕೆ ಬಂದಾಗ ಹಲವರು ತಮಗೆ ಯಾವುದೇ ಸೌಲಭ್ಯ ನೀಡದ ಬಗ್ಗೆ ದೂರಿದರು. ಬಳಕ ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡ ಶಾಸಕಿ ರೂಪಾಲಿ ನಾಯ್ಕ ಅಗತ್ಯ ಸೌಲಭ್ಯ ಕಲ್ಪಿಸಲು ಕ್ರಮ ಕೈಗೊಳ್ಳುವಂತೆ ಸೂಚಿಸಿದರು.‌ ಆದರೆ ಇಷ್ಟಕ್ಕೆ ಸುಮ್ಮನಾಗದ ಸ್ಥಳೀಯರು ಗ್ರಾಮ ಮುಳುಗಡೆಯಾಗಿ ನಾಲ್ಕು ದಿನದ ಬಳಿಕ ಸ್ಥಳಕ್ಕೆ ಬಂದಿದ್ದಾರೆ. ಹೀಗೆ ನೆಪ ಮಾತ್ರಕ್ಕೆ ಬಂದು ಆಶ್ವಾಸನೆ ಕೊಟ್ಟು ಹೋಗುತ್ತಿರುವುದಕ್ಕೆ ಶಾಸಕರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದನು.
ಈ ಬಗ್ಗೆ ಬಳಿಕ ಮಾತನಾಡಿದ ಶಾಸಕಿ ರೂಪಾಲಿ ನಾಯ್ಕ, ನೆರೆದಂತ್ರಸ್ತರಿಗೆ ಅಗತ್ಯ ವಸ್ತುಗಳನ್ನು ಪೂರೈಸಲಾಗುತ್ತಿದೆ. ಆದರೆ ಇನ್ನು ಕೆಲವೊಂದಿಷ್ಟು ವಸ್ತುಗಳು ಬರುತ್ತಿದ್ದು, ಮಾರ್ಗ ಮಧ್ಯ ರಸ್ತೆ ಬಂದಾಗಿರುವ ಕಾರಣ ತಲುಪಲು ಸಾಧ್ಯವಾಗುತ್ತಿಲ್ಲ. ತಾಲ್ಲೂಕಿನ ಸುಮಾರು ಹಳ್ಳಿಗಳು ಮುಳುಗಿದ್ದು, ಎಲ್ಲ ಜನರಿಗೂ ಗಂಜಿ ಕೇಂದ್ರದಲ್ಲಿ ಅಗತ್ಯ ಮೂಲಭೂತ ಸೌಕರ್ಯ ಕಲ್ಪಿಸುವುದಾಗಿ ಭರವಸೆ ನೀಡಿದರು.
ಒಟ್ಟಿನಲ್ಲಿ ಕಾಳಿ ರೌದ್ರಾವತಾರಕ್ಕೆ ಹಲವು ಗ್ರಾಮಗಳು ಮುಳುಗಡೆಯಾಗಿದ್ದು, ಸತತ ನಾಲ್ಕು ದಿನಗಳ ಕಾಲ ನೀರಿನಲ್ಲಿರುವ ಕಾರಣ ಕೆಲ ಮನೆಗಳು ಕುಸಿಯುವ ಭೀತಿ ಎದುರಾಗಿದೆ. ಅಲ್ಲದೆ ಇನ್ನು ಕೂಡ ಸಂತ್ರಸ್ಥರು ನೀರಿನ ಮಧ್ಯ ಸಿಲುಕಿಕೊಂಡಿದ್ದು ಅಂತವರನ್ನು ರಕ್ಷಣೆ ಮಾಡಲು ಕ್ರಮ ಕೈಗೊಳ್ಳಬೇಕಾದ ಅಗತ್ಯತೆ ಇದೆ.

Body:ಕ

Conclusion:ಕ
Last Updated : Aug 8, 2019, 7:18 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.