ETV Bharat / state

ಜಿ20 ಶೃಂಗಸಭೆ ಹಿನ್ನೆಲೆ ಕಾರವಾರದ ಕಡಲತೀರ ಸ್ವಚ್ಛಗೊಳಿಸಿದ ಸ್ವಯಂ ಸೇವಕರು

ಭಾರತ ಜಿ20 ಶೃಂಗಸಭೆ ನೇತೃತ್ವ ವಹಿಸಿದ ಹಿನ್ನೆಲೆ ರವೀಂದ್ರನಾಥ ಟ್ಯಾಗೋರ್ ಕಡಲತೀರದಲ್ಲಿಂದು ಸ್ವಚ್ಛತಾ ಅಭಿಯಾನ ನಡೆಯಿತು.

Bharatvolunteers-cleaning-the-beach-in-karwar
ಜಿ20 ಶೃಂಗಸಭೆ ಹಿನ್ನೆಲೆ: ಕಾರವಾರದ ಕಡಲತೀರ ಸ್ವಚ್ಛಗೊಳಿಸಿದ ಸ್ವಯಂ ಸೇವಕರು
author img

By

Published : May 21, 2023, 7:22 PM IST

ಜಿ20 ಶೃಂಗಸಭೆ ಹಿನ್ನೆಲೆ: ಕಾರವಾರದ ಕಡಲತೀರ ಸ್ವಚ್ಛಗೊಳಿಸಿದ ಸ್ವಯಂ ಸೇವಕರು

ಕಾರವಾರ: ಕಡಲತೀರದಲ್ಲಿ ಹೆಚ್ಚುತ್ತಿರುವ ಮಾಲಿನ್ಯದಿಂದ ಜಲಚರಗಳಿಗೆ ಮತ್ತು ಪರಿಸರಕ್ಕೆ ಹಾನಿಯಾಗುತ್ತಿದೆ. ಜೊತೆಗೆ ಕಸದ ರಾಶಿ ಕಡಲತೀರಗಳಲ್ಲಿ ಹೆಚ್ಚಾಗುತ್ತಿದೆ. ಈ ವರ್ಷ ಜಿ20 ಶೃಂಗಸಭೆಯ ಅಧ್ಯಕ್ಷತೆ ವಹಿಸಿಕೊಂಡಿರುವ ಭಾರತ ಕಡಲತೀರಗಳ ಸ್ವಚ್ಛತೆಗೆ ಬೃಹತ್ ಅಭಿಯಾನವನ್ನು ಹಮ್ಮಿಕೊಂಡಿದ್ದು, ಮಾಲಿನ್ಯಕಾರಕ ಪ್ಲಾಸ್ಟಿಕ್ ಹಾಗೂ ಇತರೆ ತ್ಯಾಜ್ಯದ ಬಗೆಗೆ ಜನರಿಗೆ ಜಾಗೃತಿ ಮೂಡಿಸಿಸುವುದರ ಜೊತೆಗೆ ಮಾಲಿನ್ಯ ತಡೆಗೆ ಮುಂದಾಗಿದೆ.

ಈ ಹಿನ್ನೆಲೆಯಲ್ಲಿ ದೇಶದಾದ್ಯಂತ ಏಕಕಾಲಕ್ಕೆ ಕಡಲತೀರ ಸ್ವಚ್ಛತಾ ಬೃಹತ್ ಅಭಿಯಾನ ನಡೆಯುತ್ತಿದ್ದು, ಇಂದು ಕಾರವಾರ ನಗರದ ರವೀಂದ್ರನಾಥ ಟ್ಯಾಗೋರ್ ಕಡಲತೀರದಲ್ಲಿ ಅರಣ್ಯ ಇಲಾಖೆ, ನೆಹರೂ ಯುವ ಕೇಂದ್ರ ಸೇರಿದಂತೆ ವಿವಿಧ ಸಂಘ, ಸಂಸ್ಥೆಗಳ ಸಹಯೋಗದಲ್ಲಿ ಸ್ವಚ್ಛತಾ ಅಭಿಯಾನ ನಡೆಯಿತು. ಈ ವೇಳೆ ಸ್ವಯಂ ಸೇವಕರು ಕಡಲ ಪರಿಸರವನ್ನು ಸ್ವಚ್ಛವಾಗಿಡುವ ಪ್ರತಿಜ್ಞೆಯನ್ನು ಸ್ವೀಕರಿಸಿದರು.

ಸ್ವಚ್ಛತಾ ಅಭಿಯಾನದ ಕುರಿತು ಡಿಎಫ್ಓ ಪ್ರಶಾಂತ್​ ಕುಮಾರ್​ ಕೆ. ಸಿ ಮಾತನಾಡಿ, ಭಾರತ ಜಿ20 ಶೃಂಗಸಭೆ ನೇತೃತ್ವ ವಹಿಸಿದ ಕಾರಣ ಇದರಡಿ ದೇಶದಾದ್ಯಂತ ಕರಾವಳಿ ಪ್ರದೇಶಗಳ ಪ್ರಮುಖ ಕಡಲತೀರಗಳಲ್ಲಿ ಸ್ವಚ್ಚತೆ ನಡೆಸಲಾಗಿದೆ. ಪ್ಲಾಸ್ಟಿಕ್ ತ್ಯಾಜ್ಯದಿಂದ ಸಾಕಷ್ಟು ಮಾಲಿನ್ಯವಾಗುತ್ತಿದೆ. 3.5 ಮಿಲಿಯನ್ ಪ್ಲಾಸ್ಟಿಕ್ ತ್ಯಾಜ್ಯ ಪ್ರತಿವರ್ಷ ಬಳಕೆ ಮಾಡುತ್ತಿದ್ದೇವೆ. ಇದರಲ್ಲಿ ಹೆಚ್ಚಿನ ಪ್ಲಾಸ್ಟಿಕ್ ಸಮುದ್ರ ಸೇರುತ್ತಿರುವ ಕಾರಣ ಜಲಚರ ಜೀವಿಗಳಿಗೆ ತೊಂದರೆಯಾಗುತ್ತಿದೆ. ಇದರಿಂದಾಗಿ ಕಡಲಜೀವಿಗಳು ಸಾಯುತ್ತಿರುವ ಉದಾಹರಣೆಗಳು ನಮ್ಮ ಜಿಲ್ಲೆಯಲ್ಲಿ ನಡೆದಿದೆ. ಈ ಕಾರಣದಿಂದ ಪ್ಲಾಸ್ಟಿಕ್ ನಿಂದ ದೂರ ಇದ್ದು, ಮಾಲಿನ್ಯ ತಡಗಟ್ಟಲು ಎಲ್ಲರೂ ಪ್ರಯತ್ನಿಸಬೇಕು ಎಂದು ಮನವಿ ಮಾಡಿದರು.

ಇದನ್ನೂ ಓದಿ:ಸಿದ್ದರಾಮಯ್ಯ 5 ವರ್ಷ ಪೂರೈಸಿದರೆ ತಪ್ಪೇನು? ಈ ವಿಚಾರ ಹೈಕಮಾಂಡ್​​​ಗೆ ಬಿಟ್ಟಿದ್ದು: ಬಸವರಾಜ್ ರಾಯರೆಡ್ಡಿ

ಸ್ವಚ್ಛತಾ ಅಭಿಯಾನದಲ್ಲಿ ಭಾಗವಹಿಸಿದ್ದ ಸ್ವಯಂ ಸೇವಕಿ ತ್ರಿವೇಣಿ ಮಾತನಾಡಿ, ಇಂದು ಕಡಲತೀರ ಸ್ವಚ್ಛತಾ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಕರ್ನಾಟಕದಲ್ಲಿ ಉದ್ದವಾದ ಕಡತೀರವಾಗಿರುವ ಇಲ್ಲಿ ಪ್ರವಾಸಿಗರು ಕಸವನ್ನು ಎಲ್ಲೆಂದರಲ್ಲಿ ಎಸೆಯದೇ ಕಸದ ಬುಟ್ಟಿಗಳನ್ನು ಬಳಕೆ ಮಾಡಿ ಸ್ವಚ್ಚತೆ ಕಾಪಾಡಬೇಕು. ಪ್ಲಾಸ್ಟಿಕ್ ವಸ್ತುಗಳನ್ನು ಬಳಸದೇ ಇದಕ್ಕೆ ಪರ್ಯಾಯವಾಗಿ ಪರಿಸರ ಸ್ನೇಹಿಯಾಗಿರುವ ವಸ್ತುಗಳನ್ನು ಹೆಚ್ಚಾಗಿ ಬಳಸಬೇಕು. ಪ್ಲಾಸ್ಟಿಕ್​​ ಸಮುದ್ರ ಸೇರುವುದರಿಂದ ಜಲಚರ ಜೀವಿಗಳ ಅಸ್ತಿತ್ವಕ್ಕೆ ಕುತ್ತು ಬರುತ್ತಿದೆ. ಪ್ರವಾಸಿ ತಾಣಗಳಿಗೆ ಆಗಮಿಸುವ ಪ್ರವಾಸಿಗರು ಸ್ವಚ್ಛತೆ ಬಗ್ಗೆ ಕಾಳಜಿ ವಹಿಸಬೇಕು ಎಂದು ವಿನಂತಿಸಿಕೊಂಡರು.

ಸುಮಾರು 2 ಕಿ. ಮೀ ಉದ್ದವಿರುವ ರವೀಂದ್ರನಾಥ ಟ್ಯಾಗೋರ್ ಕಡಲತೀರದಲ್ಲಿ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಶ್ರಮಿಸಿದ ಸ್ವಯಂ ಸೇವಕರು ಪ್ಲಾಸ್ಟಿಕ್​ ಸೇರಿದಂತೆ ಇತರೆ ತ್ಯಾಜ್ಯಗಳನ್ನು ಸಂಗ್ರಹಿ ಸ್ವಚ್ಛತಾ ಅಭಿಯಾನವನ್ನು ಯಶಸ್ವಿಗೊಳಿಸಿದರು. ಇನ್ನು ಕಡತೀರ ಸ್ವಚ್ಛತಾ ಅಭಿಯಾನದಲ್ಲಿ ಕೋಸ್ಟ್‌ಗಾರ್ಡ್, ಎನ್‌ಸಿಸಿ, ಎನ್ಎಸ್ಎಸ್, ಕೋಸ್ಟಲ್ ಎಂಡ್ ಮರೈನ್ ಇಕೋ ಸಿಸ್ಟಮ್ ಕಾರವಾರ ಘಟಕ, ಕಡಲ ಉತ್ಸವ ಟೀಂ ಸೇರಿದಂತೆ ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಇದನ್ನೂ ಓದಿ:ಬೆಂಗಳೂರಿನಲ್ಲಿ ವರುಣನ ಆರ್ಭಟ.. ಮಳೆಗೆ ಮಹಿಳೆ ಬಲಿ, 5 ಲಕ್ಷ ರೂ. ಪರಿಹಾರ ಘೋಷಿಸಿದ ಸಿಎಂ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.