ETV Bharat / state

ಪರೇಶ್ ಮೇಸ್ತ ಪ್ರಕರಣವನ್ನು ಪುನರ್ ತನಿಖೆ ಮಾಡುವ ಅಗತ್ಯವಿದೆ: ವಿಶ್ವೇಶ್ವರ ಹೆಗಡೆ ಕಾಗೇರಿ - Vishweshwar Hegde Kageri

ಪರೇಶ್ ಮೇಸ್ತ ಪ್ರಕರಣ ಅನ್ನು ಪುನರ್ ತನಿಖೆ ಮಾಡುವ ಅಗತ್ಯವಿದೆ ಎಂದು ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.

Vishweshwar Hegde Kageri
ವಿಶ್ವೇಶ್ವರ ಹೆಗಡೆ ಕಾಗೇರಿ
author img

By

Published : Oct 15, 2022, 4:05 PM IST

ಶಿರಸಿ (ಉತ್ತರ ಕನ್ನಡ): ರಾಜ್ಯ ಸರ್ಕಾರವು ಪರೇಶ್ ಮೇಸ್ತ ಪ್ರಕರಣವನ್ನು ಪುನರ್ ತನಿಖೆ ಮಾಡುವ ಅಗತ್ಯವಿದೆ. ಇದು ಮೇಲ್ನೋಟಕ್ಕೆ ಕಂಡಂತೆ ಬಿ ರಿಪೋರ್ಟ್ ಸಲ್ಲಿಸುವ ಘಟನೆಯಲ್ಲ ಎಂದು ವಿಧಾನಸಭಾ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.

ಈ ಕುರಿತು ಶಿರಸಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಘಟನೆಯ ಕುರಿತು ಮುಖ್ಯಮಂತ್ರಿಗಳ ಬಳಿ, ಗೃಹ ಸಚಿವರ ಬಳಿ ಮಾತನಾಡಿದ್ದೇನೆ. ಹಿಂದೆಯೂ ಅನೇಕ ಪ್ರಕರಣಗಳು ಪುನರ್ ಪರಿಶೀಲನೆ ಮಾಡಿ ಶಿಕ್ಷೆಗೆ ಒಳಗಾದ ಉದಾಹರಣೆಯಿದೆ. ಕಾರಣ ಇದನ್ನೂ ಸಿಬಿಐ ತನಿಖೆಗೆ ಒಳಪಡಿಸಬೇಕು ಎಂಬುದು ನಮ್ಮ ಒತ್ತಾಯವಾಗಿದೆ ಎಂದರು.

ಸಾಕ್ಷ್ಯ ನಾಶವಾಗಿದೆ ಎಂದು ಮೇಸ್ತ ಅವರ ತಂದೆ ಹೇಳಿದ್ದಾರೆ. ಸಾರ್ವಜನಿಕರ ಅಭಿಪ್ರಾಯವೂ ಅದೇ ಆಗಿದೆ. ಅಂದು ಘಟನೆಯಲ್ಲಿ ಏನಾಗಿದೆ ಎನ್ನುವುದು ಕುಟುಂಬದವರಿಗೆ, ರಾಜ್ಯದ ಜನತೆಗೆ ಸ್ಪಷ್ಟತೆಯಿದೆ. ಸಿಬಿಐ ತನಿಖೆಗೆ ವಹಿಸುವ ವಿಳಂಬದಿಂದಾಗಿ ಸಾಕ್ಷ್ಯ ನಾಶ ಆಗಿರಬಹುದು ಎಂಬ ಅಭಿಪ್ರಾಯ ಎಲ್ಲರದ್ದಾಗಿದೆ. ಕಾರಣ ಅದನ್ನು ಪುನರ್ ಪರಿಶೀಲನೆಗೆ ಒಳಪಡಿಸಲು ಬೇಕಾದ ಕೆಲಸ ಆಗಲಿದೆ ಎಂದು ಹೇಳಿದರು.‌

ವಿಧಾನ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ

ಇದನ್ನೂ ಓದಿ: ಓಲಾ, ಉಬರ್ ಆಟೋ ರಿಕ್ಷಾ ಸೇವೆ: ಬಲವಂತದ ಕ್ರಮ ಬೇಡ, ಪ್ರಯಾಣ ಶುಲ್ಕ ನಿಗದಿಗೆ ಹೈಕೋರ್ಟ್​ ಸೂಚನೆ

ಇದೇ ವೇಳೆ ಮಾದ್ಯಮದವರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಅಧಿವೇಶನಕ್ಕೆ ಮಾಜಿ ಸಚಿವರಾದ ಈಶ್ವರಪ್ಪ ಹಾಗೂ ಜಾರಕಿಹೊಳಿ ಗೈರು ಹಾಜಾರಾಗಿದ್ದು ತಪ್ಪು. ಈ ಬಗ್ಗೆ ಸದನದ ಗಮನಕ್ಕೆ ಅವರು ತರಬೇಕಿತ್ತು. ಈ ಕುರಿತು ಅವರಿಗೆ ಪತ್ರ ಬರೆಯಲಾಗಿದೆ ಎಂದು ತಿಳಿಸಿದರು.‌

ETV Bharat Logo

Copyright © 2025 Ushodaya Enterprises Pvt. Ltd., All Rights Reserved.