ETV Bharat / state

ಮಣಿಪುರದಲ್ಲಿ ಮಹಿಳೆಯರ ಮೇಲೆ ದೌರ್ಜನ್ಯ ಖಂಡಿಸಿ ಕಾರವಾರದಲ್ಲಿ ಬೃಹತ್ ಪ್ರತಿಭಟನೆ - ಈಟಿವಿ ಭಾರತ್ ಕನ್ನಡ ಸುದ್ದಿ

ಮಣಿಪುರದಲ್ಲಿ ಮಹಿಳೆಯರ ಮೇಲೆ ನಡೆದ ದೌರ್ಜನ್ಯ ಖಂಡಿಸಿ ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ, ಕಾರವಾರದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು.

ಕಾರವಾರ
ಕಾರವಾರ
author img

By

Published : Jul 31, 2023, 9:30 PM IST

ಕ್ಯಾಥೋಲಿಕ್ ಧರ್ಮಪ್ರಾಂತ್ಯದ ಮುಖ್ಯಸ್ಥ ಡೆರಿಕ್ ಫರ್ನಾಂಡೀಸ್

ಕಾರವಾರ (ಉತ್ತರ ಕನ್ನಡ) : ಮಣಿಪುರದಲ್ಲಿ ಬುಡಕಟ್ಟು ಕುಕಿ ಸಮಾಜದ ಮಹಿಳೆಯರ ಮೇಲಿನ ದೌರ್ಜನ್ಯ ಖಂಡಿಸಿ ಮತ್ತು ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ, ಕಾರವಾರದಲ್ಲಿ ಕ್ಯಾಥೋಲಿಕ್ ಧರ್ಮಪ್ರಾಂತ್ಯದ ಮುಂದಾಳತ್ವದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.

ಕಾರವಾರದ ಮಿತ್ರ ಸಮಾಜ ಮೈದಾನದಿಂದ ಆರಂಭವಾದ ಮೆರವಣಿಗೆ ಸುಭಾಷ್ ಸರ್ಕಲ್, ಸವಿತಾ ಸರ್ಕಲ್ ಮೂಲಕ ಕಾಜುಬಾಗ- ಕೋಡಿಬಾಗ ರಸ್ತೆಯಲ್ಲಿ ಸಾಗಿ ಪಿಕಳೆ ರಸ್ತೆಯ ಮೂಲಕ ಜಿಲ್ಲಾಧಿಕಾರಿ ಕಚೇರಿಯೆದುರು ಪ್ರತಿಭಟನಾಕಾರರು ಜಮಾವಣೆಗೊಂಡರು. ಸಾವಿರಕ್ಕೂ ಅಧಿಕ ಮಂದಿ ಸೇರಿದ್ದ ಈ ಪ್ರತಿಭಟನಾ ಮೆರವಣಿಗೆಯಲ್ಲಿ ಧರ್ಮಭೇದವಿಲ್ಲದೆ ಅನೇಕ ಸಾಮಾಜಿಕ ಕಾರ್ಯಕರ್ತರೂ ಸೇರಿದ್ದರು.

ಮಣಿಪುರದಲ್ಲಿ ಶಾಂತಿ ಸ್ಥಾಪಿಸಿ, ಮಣಿಪುರಕ್ಕಾಗಿ ಪ್ರಾರ್ಥಿಸಿ, ಮೌನ ಬೇಡ- ಶಾಂತಿ ಬೇಕು, ಹೆಣ್ಣಿಗೆ ಗೌರವ - ಭಾರತ ಮಾತೆಗೆ ಗೌರವ ಎಂಬಿತ್ಯಾದಿ ಫಲಕಗಳನ್ನ ಹಿಡಿದು ಮೆರವಣಿಗೆ ನಡೆಸಲಾಯಿತು. ಮೆರವಣಿಗೆಯಲ್ಲಿ ಕ್ರೈಸ್ತರ ವಿವಿಧ ಚರ್ಚ್​ಗಳ ಧರ್ಮಗುರುಗಳು, ಮುಖಂಡರು, ಮಹಿಳೆಯರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಕ್ರೈಸ್ತ ಸಂಸ್ಥೆಗಳನ್ನೇ ಗುರಿಯಾಗಿಸಿ ಇಂಥ ಘಟನೆಗಳು ನಡೆಯುತ್ತಿವೆ: ಇನ್ನು, ಪ್ರತಿಭಟನಾ ಮೆರವಣಿಗೆಯ ಆರಂಭದಲ್ಲಿ ಮಾತನಾಡಿದ ಕ್ಯಾಥೋಲಿಕ್ ಧರ್ಮಪ್ರಾಂತ್ಯದ ಬೆಳಗಾವಿ ಹಾಗೂ ಉತ್ತರಕನ್ನಡದ ಮುಖ್ಯಸ್ಥ ಡೆರಿಕ್ ಫರ್ನಾಂಡೀಸ್, ಇದು ಬುಡಕಟ್ಟು ಜನಾಂಗಗಳ ನಡುವಿನ ಜನಾಂಗೀಯ ಗಲಭೆಯಲ್ಲ. ಇದರ ಹಿಂದೆ ಬೇರೆ ಏನೋ ಇದೆ. ಕೇವಲ ಕ್ರೈಸ್ತರನ್ನ, ಕ್ರೈಸ್ತ ಸಂಸ್ಥೆಗಳನ್ನೇ ಗುರಿಯಾಗಿಸಿ ಇಂಥ ಘಟನೆಗಳು ನಡೆಯುತ್ತಿವೆ ಎಂದು ಆರೋಪಿಸಿದರು.

ಎರಡು ತಿಂಗಳಿನಿಂದ ನಮ್ಮ ಪೋಷಕರೊಂದಿಗೆ ಮಾತನಾಡಿಲ್ಲ: ಇನ್ನು ಇದೇ ವೇಳೆ ಮಣಿಪುರದ ಕುಕಿ ಸಮುದಾಯಕ್ಕೆ ಸೇರಿದ ವಿದ್ಯಾರ್ಥಿನಿ ಕಿಮ್ ಅವರು ಮಾತನಾಡಿ, ನಾನು ಮಣಿಪುರದ ಕುಕಿ ಸಮುದಾಯಕ್ಕೆ ಸೇರಿದ್ದೇನೆ. ಈಗ ಮಣಿಪುರದಲ್ಲಿನ ಪರಿಸ್ಥಿತಿ ಬಗ್ಗೆ ಪ್ರತಿಭಟನೆ ನಡೆಸಿದ್ದಕ್ಕೆ ಧನ್ಯವಾದ. ನಾನು ಸುಮಾರು ಎರಡು ತಿಂಗಳಿನಿಂದ ನಮ್ಮ ಪೋಷಕರೊಂದಿಗೆ ಮಾತನಾಡಿಲ್ಲ. ಅಲ್ಲಿ ಜನ ಮನೆಯಲ್ಲಿ ಕೂಡಾ ವಾಸವಾಗಿಲ್ಲ ಎಂದು ಗದ್ಗದಿತರಾದರು. ಈ ವೇಳೆ ಅಲ್ಲಿ ನೆರೆದಿದ್ದ ಜನರು ವಿದ್ಯಾರ್ಥಿನಿಯ ನೋವಿನ ನುಡಿಗೆ ಕಣ್ಣೀರು ಹಾಕಿದರು.

ಇದನ್ನೂ ಓದಿ: ನಕಲಿ ಸುಲಿಗೆ ಪ್ರಕರಣಕ್ಕೆ‌ ದೂರುದಾರನೇ ಸೂತ್ರಧಾರ.. ಇನ್ಶೂರೆನ್ಸ್ ಹಣದ ಆಸೆಗೆ 4 ಕೋಟಿ ಮೌಲ್ಯದ ಚಿನ್ನ ದರೋಡೆ ಕಥೆ ಕಟ್ಟಿದ್ದ ಜ್ಯುವೆಲ್ಲರಿ ಮಾಲೀಕ ಅರೆಸ್ಟ್

ಆರೋಪಿಗಳಿಗೆ ತಕ್ಷಣ ಕಾನೂನು ಕ್ರಮ‌ ಜರುಗಿಸಿ: ಒಟ್ಟಿನಲ್ಲಿ‌ ಮಣಿಪುರದಲ್ಲಿ ನಡೆದ ಅಮಾನವೀಯ ಘಟನೆಯನ್ನು ಕಾರವಾರದಲ್ಲಿ ಪ್ರತಿಭಟನೆ ಮೂಲಕ ಖಂಡಿಸಲಾಯಿತು.‌ ಅಲ್ಲದೆ ಆರೋಪಿಗಳಿಗೆ ತಕ್ಷಣ ಕಾನೂನು ಕ್ರಮ‌ ಜರುಗಿಸಿ, ನೊಂದವರಿಗೆ ನ್ಯಾಯ ದೊರಕಿಸುವಂತೆ ಒಕ್ಕೋರಲಿನ ಆಗ್ರಹ ಕೇಳಿಬಂತು.

ಇದನ್ನೂ ಓದಿ: ಮಣಿಪುರ ಹಿಂಸಾಚಾರ ಕುರಿತು ಪ್ರಧಾನಿ ಮೋದಿ ಹೇಳಿಕೆಗೆ ಒತ್ತಾಯಿಸಿ ಪ್ರತಿಪಕ್ಷಗಳ ಪ್ರತಿಭಟನೆ - VIDEO

ETV Bharat Logo

Copyright © 2024 Ushodaya Enterprises Pvt. Ltd., All Rights Reserved.