ETV Bharat / state

ನಮ್ಮ ಹೆಣಗಳ ಮೇಲೆ ವಿಮಾನ ನಿಲ್ದಾಣ ನಿರ್ಮಿಸಿ: ಅಲಗೇರಿ ಗ್ರಾಮಸ್ಥರ ಆಕ್ರೋಶ - Air force, National Highway, Railway built

ಅಲಗೇರಿಯಲ್ಲಿ ನಾಗರಿಕ ವಿಮಾನ ನಿಲ್ದಾಣ ನಿರ್ಮಿಸಬಾರದೆಂದು ಒತ್ತಾಯಿಸಿ ತಾಲೂಕಿನ ಅಲಗೇರಿ, ಬಡಗೇರಿ, ಭಾವಿಕೇರಿ ಗ್ರಾಮಗಳ ಗ್ರಾಮಸ್ಥರು ಅಂಕೋಲಾ ತಹಶಿಲ್ದಾರ್ ಕಚೇರಿವರೆಗೆ ಬೃಹತ್ ಪ್ರತಿಭಟನೆ ನಡೆಸಿದರು.

village-peoples-protest-against-state-government
author img

By

Published : Oct 11, 2019, 5:48 PM IST

ಕಾರವಾರ: ನೌಕಾನೆಲೆಗೆ ಹೊಂದಿಕೊಂಡಿರುವ ಅಲಗೇರಿಯಲ್ಲಿ ನಾಗರಿಕ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಕಂದಾಯ ಇಲಾಖೆ ಅಧಿಕಾರಿಗಳು ದಿಢೀರ್‌ ಆಗಮಿಸಿ ಸರ್ವೇ ಕಾರ್ಯ ನಡೆಸಿದ್ದರಿಂದ ನಾಗರಿಕರಲ್ಲಿ ಆತಂಕ ಮನೆ ಮಾಡಿದೆ. ಇದರಿಂದ ಸಿಟ್ಟಿಗೆದ್ದ ತಾಲೂಕಿನ ಅಲಗೇರಿ, ಬಡಗೇರಿ, ಭಾವಿಕೇರಿ ಗ್ರಾಮಗಳ ನಿವಾಸಿಗಳು ಅಂಕೋಲಾ ತಹಶಿಲ್ದಾರ್ ಕಚೇರಿವರೆಗೆ ಬೃಹತ್ ಪ್ರತಿಭಟನೆ ನಡೆಸಿದರು.

ಅಲ್ಲದೆ, ಪ್ರತಿಭಟನಾ ಮೆರವಣಿಗೆಯುದ್ದಕ್ಕೂ ಸರ್ವೆಗೆ ಮುಂದಾದ ಅಧಿಕಾರಿಗಳನ್ನು ಅಟ್ಟಾಡಿಸಿಕೊಂಡು ಓಡಿಸುವ ರೀತಿ ಅಣಕಿಸಿ ಪ್ರದರ್ಶಿಸಿ ಗಮನ ಸೆಳೆದರು. ಜನ ವಿರೋಧಿ ನೀತಿ ಅನುಸರಿಸುತ್ತಿರುವ ಸರ್ಕಾರದ ನಿಲುವನ್ನು ಖಂಡಿಸಿದ ಪ್ರತಿಭಟನಾನಿರತರು, ಈ ಕೂಡಲೇ ಹೊರಡಿಸಿರುವ ಆದೇಶವನ್ನು ವಾಪಸ್​ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ವಿಮಾನ ನಿಲ್ದಾಣ ನಿರ್ಮಾಣ ವಿರೋಧಿಸಿ ಗ್ರಾಮಸ್ಥರ ಪ್ರತಿಭಟನೆ

ಅಲಗೇರಿ, ಬಡಗೇರಿ ಭಾವಿಕೇರಿಯಲ್ಲಿ 6 ಸಾವಿರಕ್ಕೂ ಅಧಿಕ ಜನಸಂಖ್ಯೆ ಇದೆ. ನೌಕಾನೆಲೆ, ಕೊಂಕಣ ರೈಲ್ವೆ, ರಾಷ್ಟ್ರೀಯ ಹೆದ್ಧಾರಿ ನಿರ್ಮಾಣದಿಂದಾಗಿ ಅಷ್ಟೂ ಮಂದಿ ಮೂರು ಬಾರಿ ನಿರಾಶ್ರಿತರಾಗಿದ್ದೇವೆ. ಮತ್ತೆ ಇಲ್ಲಿ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಜಾಗ ಗುರುತಿಸಿದ್ದಾರೆ. ಆದರೆ ಈ ಬಗ್ಗೆ ಸ್ಥಳೀಯರಿಗೆ ಮಾಹಿತಿಯೇ ನೀಡಿಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗಂಡಸರು ಮನೆಯಲ್ಲಿಲ್ಲದ ಸಂದರ್ಭದಲ್ಲಿ ಸರ್ವೇ ಕಾರ್ಯಕ್ಕೆ ಮುಂದಾಗಿದ್ದಾರೆ. ವಿಮಾನ ನಿಲ್ದಾಣ ನಿರ್ಮಿಸಿದರೆ, ನಮ್ಮ ಬದುಕು ಮತ್ತೆ ಬೀದಿಗೆ ಬರುತ್ತದೆ. ಹೀಗಾದರೆ ಕತ್ತಲಲ್ಲಿರುವ ನಾವು ಬೆಳಕಿಗೆ ಬರುವುದು ಯಾವಾಗ? ಯಾವುದೇ ಕಾರಣಕ್ಕೂ ಜಾಗ ನೀಡುವುದಿಲ್ಲ. ಜಾಗ ತೆಗೆದುಕೊಳ್ಳಬೇಕೆಂದರೆ ನಮ್ಮ ಹೆಣದ ಮೇಲೆ ನಿಲ್ದಾಣ ನಿರ್ಮಿಸಲಿ ಎಂದು ಸುರೇಶ್ ನಾಯ್ಕ ಅಳಲು ತೋಡಿಕೊಂಡಿದ್ದಾರೆ.

ಈ ಮೊದಲು ನೌಕಾನೆಲೆ ನಿರ್ಮಿಸುವಾಗ ಉದ್ಯೋಗ, ಮನೆ, ಜಾಗ ಪರಿಹಾರ ಕೊಡುವುದಾಗಿ ಹೇಳಿ ಕೃಷಿ ಭೂಮಿ ಕಸಿದುಕೊಂಡು ನಿರಾಶ್ರಿತರನ್ನಾಗಿ ಮಾಡಿದರು. ಇಲ್ಲಿ ಅಜ್ಜ, ಅಪ್ಪಂದಿರು ಭತ್ತ, ತೆಂಗು, ಶೇಂಗ, ಕಲ್ಲಂಗಡಿ ಬೆಳೆಯುತ್ತಿದ್ದವರು. ಜಮೀನು ನೀಡಿದ ಬಳಿಕ ಪರಿಹಾರ, ಉದ್ಯೋಗಕ್ಕಾಗಿ ಅಲೆದು ಮೃತಪಟ್ಟಿದ್ದಾರೆ. ಇತ್ತ ಪರಿಹಾರವೂ ಕೈಗೆ ಬಂದಿಲ್ಲ. ಇದೀಗ ಸ್ವಲ್ಪ ಭೂಮಿಯನ್ನು ಕಸಿದುಕೊಳ್ಳಲು ಮುಂದಾಗಿದ್ದಾರೆ. ಇಂದು ಶಾಂತಿಯುತ ಪ್ರತಿಭಟನೆ ನಡೆಸಿದ್ದೇವೆ. ಈ ನಿರ್ಧಾರ ಕೈ ಬಿಡದಿದ್ದರೆ, ಉಗ್ರ ಪ್ರತಿಭಟನೆ ನಡೆಸುತ್ತೇವೆ ಎಂದು ಎಚ್ಚರಿಸಿದ್ದಾರೆ.

Intro:(ವಿಶಿಷ್ಟ ರಿತಿಯ ಪ್ರತಿಭಟನೆ ಹಾಗೂ ನಾಗರಿಕ ವಿಮಾನ ನಿಲ್ದಾಣಕ್ಕೆ ಬಳಸುವ ಊರಿನ ವಿಸ್ಯುವಲ್ ಇದೆ. ವೈಸ್ ಓವರ್ ನೀಡಲು ಮನವಿ)

ಕಾರವಾರ: ಒಂದೆಡೆ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸುತ್ತಿರುವ ಜನ. ಇನ್ನೊಂದೆಡೆ ರಸ್ತೆಯುದ್ದಕ್ಕೂ ಉರುಳುತ್ತ ಆಕ್ರೋಶ ಹೊರಹಾಕುತ್ತಿರುವ ಪ್ರತಿಭಟನಾಕಾರರು. ಮತ್ತೊಂದೆಡೆ ಸರ್ವೆ ಮಾಡಲು ಮುಂದಾದವರನ್ನು ಅಟ್ಟಾಡಿಸಿಕೊಂಡು ಓಡಿಸುವ ರಿತಿ ಅಣುಕಿಸಿ ಪ್ರತಿಭಟನೆ ನಡೆಸುತ್ತಿರುವ ಸ್ಥಳೀಯರು. ಅಯ್ಯೋ ಯಾಕೆ ಇಷ್ಟೊಂದು ದೊಡ್ಡ ಪ್ರತಿಭಟನೆ ಅಂತೀರಾ ? ಮುಂದೆ ನೋಡಿ

ಹೌದು ಇಂತಹದೊಂದು ವಿಭಿನ್ನ ಪ್ರತಿಭಟನೆ ನಡೆದಿರುವುದು ಅಂಕೋಲಾದಲ್ಲಿ. ನೌಕಾನೆಲೆಗೆ ಹೊಂದಿಕೊಂಡು ಅಲಗೇರಿ ವ್ಯಾಪ್ತಿಯಲ್ಲಿ ನಾಗರಿಕ ವಿಮಾನ ನಿಲ್ದಾಣಕ್ಕೆ ಸರ್ವೆ ಕಾರ್ಯ ನಡೆಸಿರುವುದು ಇದೀಗ ಸುತ್ತಮುತ್ತಲಿನ ಜನರ ಆತಂಕಕ್ಕೆ ಕಾರಣವಾಗಿದೆ. ಈ ಕಾರಣದಿಂದ ಸಿಟ್ಟಿಗೆದ್ದ ತಾಲ್ಲೂಕಿನ ಅಲಗೇರಿ, ಬಡಗೇರಿ, ಭಾವಿಕೇರಿ ಗ್ರಾಮದ ಸಾವಿರಾರು ಜನರು ತಮ್ಮ ಊರಿನಿಂದ ೪ ಕೀ.ಮೀ ದೂರದ ಅಂಕೋಲಾ ತಹಶೀಲ್ದಾರ್ ಕಚೇರಿವರೆಗೆ ಬೃಹತ್ ಪ್ರತಿಭಟನೆ ನಡೆಸಿದರು.

ಈಗಾಗಲೇ ಗ್ರಾಮಸ್ಥರಿಗೆ ಯಾವುದೇ ಮಾಹಿತಿ ನೀಡದೇ ಏಕಾಏಕಿ ಗ್ರಾಮಕ್ಕೆ ಬಂದು ಸರ್ವೆ ನಡೆಸಿರುವಯದನ್ನು ವಿರೋಧಿಸಿ ಪ್ರತಿಭಟನಾ ಮೆರವಣಿಗೆಯುದ್ದಕ್ಕೂ ಸರ್ವೆ ಮಾಡಿದ ರಿತಿಯಲ್ಲಿ ಅಣುಕಿಸುವ ಪ್ರತಿಭಟನಾ ಪ್ರದರ್ಶನ ಗಮನ ಸೆಳೆಯಿತು. ಅಲ್ಲದೆ ಹೀಗೆ ಸರ್ವೆ ಮಾಡಲು ಬಂದವರಿಗೆ ಹಿಡಿ ಸೇರಿದಂತೆ ಇನ್ನಿತರ ವಸ್ತುಗಳಿಂದ ಹೊಡೆದು ಓಡಿಸುತ್ತಿರುವ ರಿತಿಯಲ್ಲಿ ಅಣುಕಿಸಿ ಎಚ್ಚರಿಕೆಯನ್ನು ನೀಡಿದರು.

ಅಲಗೇರಿ, ಬಡಗೇರಿ ಭಾವಿಕೇರಿಯಲ್ಲಿ ಸುಮಾರು ೬ ಸಾವಿರ ಜನರಿದ್ದು, ಈಗಾಗಲೇ ನೌಕಾನೆಲೆ, ಕೊಂಕಣ ರೈಲ್ವೆ, ರಾಷ್ಟ್ರೀಯ ಹೆದ್ದಾರಿಯಿಂದಾಗಿ ನಿರಾಶ್ರಿತರಾದವರು. ಆದರೆ ಇದೀಗ ಇದೇ ಪ್ರದೇಶದಲ್ಲಿ ನೌಕಾನೆಲೆಗೆ ಹೊಂದಿಕೊಂಡು ನಾಗರಿಕ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಜಾಗ ಗುರುತಿಸಲಾಗಿದೆ. ಆದರೆ ಈ ಬಗ್ಗೆ ಸ್ಥಳೀಯರಿಗೆ ಯಾವುದೇ ಮಾಹಿತಿ ನೀಡಿಲ್ಲ. ಮನೆಯಲ್ಲಿ ಗಂಡಸರು ಇಲ್ಲದ ವೇಳೆ ಬಂದು ಸರ್ವೆ ಕಾರ್ಯವನ್ನು ನಡೆಸಲಾಗುತ್ತಿದೆ. ಯಾವುದೇ ಕಾರಣಕ್ಕೂ ಈ ಭಾಗದಲ್ಲಿ ನಾಗರಿಕ ವಿಮಾನ ನಿಲ್ದಾಣ ಬೇಡ. ನಾವು ದುಡಿದು ತಿನ್ನುವವರು. ನಮಗೆ ನಾಗರಿಕ ವಿಮಾನದಿಂದ ಆಗಬೇಕಾಗಿರುವುದು ಏನು ಇಲ್ಲ‌. ಪ್ರತಿ ಭಾರಿಯೂ ನಮ್ಮನ್ನು ನಿರಾಶ್ರಿತರನ್ನಾಗಿ ಮಾಡಿದರೇ ನಾವು ಎಲ್ಲಿಗೆ ಹೋಗಬೇಕು? ನಾವು ಯಾವುದೇ ಕಾರಣಕ್ಕೂ ಜಾಗ ನೀಡುವುದಿಲ್ಲ. ಒಂದೊಮ್ಮೆ ಜಾಗ ತೆಗೆದುಕೊಳ್ಳುವುದೇ ಹೌದಾದಲ್ಲಿ ನಮ್ಮ ಹೆಣದ ಮೇಲೆ ನಿರ್ಮಾಣ ಮಾಡಿ ಎನ್ನುತ್ತಾರೆ ಪ್ರತಿಭಟನಕಾರ ಸುರೇಶ ನಾಯ್ಕ ಆಕ್ರೋಶ ವ್ಯಕ್ತಪಡಿಸಿದರು.

ಇನ್ನು ಮೂರು ಗ್ರಾಮಗಳ ಜನರು ಕೃಷಿಯನ್ನೆ ನಂಬಿ ಬದುಕುತ್ತಿದ್ದವರು. ಭತ್ತ, ತೆಂಗು, ಶೆಂಗ, ಕಲ್ಲಂಗಡಿ ಬೆಳೆ ಬೆಲಕೆಯುತ್ತಾರೆ. ಇನ್ನೂ ಕೆಲವರು ಕಾಡಲ್ಲಿ ಬಿದ್ದಿರುವ ಒಣ ಕಟ್ಟಿಗೆಯನ್ನು ಒಟ್ಟಾಗಿ ಜೀವನ ನಡೆಸುತ್ತಿದ್ದಾರೆ. ಆದರೆ ಅಂದು ನೌಕಾನೆಲೆಗೆ ಉದ್ಯೋಗ, ಮನೆ, ಜಾಗ, ಪರಿಹಾರ ಕೊಡುವುದಾಗಿ ಭೂಮಿ ಕಸಿದುಕೊಂಡು ನಿರಾಶ್ರಿತರನ್ನಾಗಿ ಮಾಡಿದರು. ಪರಿಹಾರ, ಉದ್ಯೋಗ ನೀಡದೇ ನಮ್ಮ ಅಜ್ಜ, ಅಪ್ಪಂದಿರು ಮೃತಪಟ್ಟಿದ್ದಾರೆ. ಆದರೆ ಇದೀಗ ಇರುವ ಅಲ್ಪ ಸ್ವಲ್ಪ ಭೂಮಿಯನ್ನು ಕಸಿದುಕೊಳ್ಳಲು ಮುಂದಾಗಿದ್ದಾರೆ. ಇಲ್ಲಿ ವಿಮಾನ ನಿಲ್ದಾಣವಾದಲ್ಲಿ ಅಂಕೋಲಾ ಭಾಗದ ಮಳೆ ನೀರು ಹೋಗವೇ ಇಲ್ಲ. ಇದರಿಂದ ಹಲವು ಹಳ್ಳಿಗಳು ಮುಳುಗಡೆಯಾಗಲಿದೆ. ಆದ್ದರಿಂದ ನಾವು ಯಾವುದೇ ಕಾರಣಕ್ಕೂ ಭೂಮಿ ನೀಡುವುದಿಲ್ಲ. ನಾವು ಇಂದು ಶಾಂತಿಯುತ ಪ್ರತಿಭಟನೆ ನಡೆಸಿದ್ದು, ವಿಮಾನ ನಿಲ್ದಾಣ ಮಾಡಲು ಮುಂದಾಗಿದ್ದೆ ಆದಲ್ಲಿ ಉಗ್ರ ಪ್ರತಿಭಟನೆ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಒಟ್ಟಿನಲ್ಲಿ ಮೂರು ಭಾರಿ ನಿರಾಶ್ರಿತರಾದರೂ ಮತ್ತೆ ನಾಗರಿಕ ವಿಮಾನ ನಿಲ್ದಾಣಕ್ಕಾಗಿ ನಿರಾಶ್ರಿತರಾಗುವ ಆತಂಕ ಎದುರಾಗಿದ್ದು, ಇದೀಗ ಊರಿಗೆ ಊರೆ ಯೋಜನೆ ವಿರುದ್ದ ತಿರುಗಿಬಿದ್ದಿದೆ. ಸರ್ಕಾರ ಜನವಿರೋಧಿ ಯೋಜನೆ ತಂದರೆ ಮುಂದೆ ಉಗ್ರ ಹೋರಾಟ ನಡೆಸುವುದಾಗಿಯೂ ಎಚ್ಚರಿಕೆ ನೀಡಿದ್ದಾರೆ. .

ಬೈಟ್ ೧ ಸುರೇಶ ನಾಯ್ಕ, ಪ್ರತಿಭಟನಾಕಾರರು ( ದಪ್ಪ ಇದ್ದವರು)

ಬೈಟ್ ೨
ಶಿವಾನಂದ ನಾಯ್ಕ, ಗ್ರಾಮಸ್ಥ ( ಹಸಿರು

ಅಟ್ಟಾಡಿಸಿಕೊಂಡು ಬರು

Body:ಕ

Conclusion:ಕ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.