ಕಾರವಾರ(ಉತ್ತರ ಕನ್ನಡ): ಜಿಲ್ಲೆಯಲ್ಲಿ ಇಂದು ಮತ್ತೆ 23 ಮಂದಿ ಕೊರೊನಾ ಸೋಂಕಿತರು ಪತ್ತೆಯಾಗಿದ್ದು, ಸಕ್ರಿಯ ಸೋಂಕಿತರ ಸಂಖ್ಯೆ 115ಕ್ಕೆ ಏರಿಕೆಯಾಗಿದೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗತೊಡಗಿದ್ದು, ಇದೀಗ ಮಹಾರಾಷ್ಟ್ರದಿಂದ ಆಗಮಿಸಿದ್ದ ಹಾಗೂ ಕೊರೊನಾ ಸೋಂಕಿತರ ಸಂಪರ್ಕಕ್ಕೆ ಬಂದ 13 ಮಂದಿಗೆ ಸೋಂಕು ದೃಢಪಟ್ಟಿದೆ. ಅದರಲ್ಲಿ ಭಟ್ಕಳ ಮೂಲದ 11, 12, 13 ವರ್ಷದ ಬಾಲಕಿಯರಲ್ಲಿ, 20 ವರ್ಷದ ಯುವತಿ, 41, 47 ವರ್ಷದ ಮಹಿಳೆಯರಲ್ಲಿ ಹಾಗೂ 33, 27, 47, 42, 47 ವರ್ಷದ ಪುರುಷರಲ್ಲಿ ಸೋಂಕು ಪತ್ತೆಯಾಗಿದೆ. ಅಂಕೋಲಾದಲ್ಲಿ 4 ವರ್ಷದ ಹೆಣ್ಣು ಮಗು, 21 ವರ್ಷದ ಯುವತಿ, 80 ವರ್ಷದ ಅಜ್ಜಿ, 33, 37, 49 ವರ್ಷದ ಪುರುಷರಲ್ಲಿ ಸೋಂಕು ಪತ್ತೆಯಾಗಿದೆ. ಇದಲ್ಲದೆ ಕುಮಟಾದ 14 ವರ್ಷದ ಬಾಲಕಿ, 22 ವರ್ಷದ ಯುವಕ, 53 ವರ್ಷದ ಪುರುಷ ಹಾಗೂ 40, 51, 40 ವರ್ಷದ ಮಹಿಳೆಯರಲ್ಲಿ ಮತ್ತು ಕಾರವಾರದ 27 ವರ್ಷದ ಯುವಕನಲ್ಲಿ ಸೋಂಕು ಪತ್ತೆಯಾಗಿದೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 276ಕ್ಕೆ ಏರಿಕೆಯಾಗಿದ್ದು, 161 ಮಂದಿ ಗುಣಮುಖರಾಗಿದ್ದಾರೆ. ಉಳಿದಂತೆ 115 ಮಂದಿಗೆ ಕಾರವಾರ ವೈದ್ಯಕೀಯ ಮಹಾವಿದ್ಯಾಲಯದ ಕೊವಿಡ್ ವಾರ್ಡ್ನಲ್ಲಿ ಚಿಕಿತ್ಸೆ ಮುಂದುವರೆದಿದೆ.