ETV Bharat / state

ಮೈಸೂರು ಗ್ಯಾಂಗ್​ರೇಪ್​ ಬಳಿಕ ಪೊಲೀಸರು ಅಲರ್ಟ್​ : ಪ್ರವಾಸಿತಾಣ, ನಿರ್ಜನ ಪ್ರದೇಶದಲ್ಲಿ ಹದ್ದಿನ ಕಣ್ಣು - ಪ್ರವಾಸಿತಾಣ, ನಿರ್ಜನ ಪ್ರದೇಶದಲ್ಲಿ ಪೊಲೀಸ್​​ ನೇಮಕ

ಇಂತಹ ಪ್ರದೇಶಗಳಲ್ಲಿ 112 ಪೊಲೀಸ್ ಹೆಲ್ಪ್​​​ಲೈನ್ ವಾಹನ ಹಾಗೂ ಸಿಬ್ಬಂದಿಯನ್ನಿಟ್ಟು ಎಚ್ಚರಿಕೆ ನೀಡಲಾಗುತ್ತಿದೆ. ಕಡಲತೀರಗಳಲ್ಲಿ ಹುಡುಗ-ಹುಡುಗಿಯರು ಕಾಲ ಕಳೆಯುತ್ತಿದ್ದರೆ ಅಲ್ಲಿಂದ ಹೊರಗೆ ಕಳುಹಿಸಲಾಗುತ್ತಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಾಹಿತಿ ನೀಡಿದ್ದಾರೆ..

Uttarakannada police departement alert
ಪ್ರವಾಸಿತಾಣ, ನಿರ್ಜನ ಪ್ರದೇಶದಲ್ಲಿ ಹದ್ದಿನ ಕಣ್ಣು
author img

By

Published : Sep 6, 2021, 3:41 PM IST

Updated : Sep 6, 2021, 4:01 PM IST

ಕಾರವಾರ : ಮೈಸೂರು ಸಾಮೂಹಿಕ ಅತ್ಯಾಚಾರ ಪ್ರಕರಣದ ಬಳಿಕ ಪೊಲೀಸರು ಅಲರ್ಟ್​ ಆಗಿದ್ದಾರೆ. ಜಿಲ್ಲೆಯಲ್ಲಿನ ಫಾಲ್ಸ್​ ಹಾಗೂ ಬೀಚ್​ಗಳ ಬಳಿ ಹೆಚ್ಚಿನ ನಿಗಾವಹಿಸಿದ್ದಾರೆ.

ಪ್ರವಾಸಿತಾಣ, ನಿರ್ಜನ ಪ್ರದೇಶದಲ್ಲಿಖಾಕಿ ಹದ್ದಿನ ಕಣ್ಣು

ಉತ್ತರಕನ್ನಡ ಜಿಲ್ಲೆಯ ಜಲಪಾತಗಳಿಗೆ ಹಾಗೂ ಕಡಲತೀರಗಳಿಗೆ ವರ್ಷಪೂರ್ತಿ ಪ್ರವಾಸಿಗರು ಆಮಿಸುತ್ತಿರುತ್ತಾರೆ. ಅದರಲ್ಲೂ ಮಳೆಗಾಲ ಆರಂಭವಾದಾಗಿನಿಂದ ವೀಕೆಂಡ್​​ ಎಂಜಾಯ್​ ಮಾಡಲು ಪ್ರವಾಸಿ ತಾಣಗಳತ್ತ ಹೊರ ರಾಜ್ಯ ಹಾಗೂ ಜಿಲ್ಲೆಗಳಿಂದ ಆಗಮಿಸುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದೆ.

ಈ ವೇಳೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಜಿಲ್ಲೆಯ ಕಾಡಂಚಿನ ಪ್ರವಾಸಿ ತಾಣಗಳು, ಜಲಪಾತಗಳು, ಕಡಲತೀರಗಳು ಸೇರಿ ಸಾರ್ವಜನಿಕರು ಹೆಚ್ಚಾಗಿ ಓಡಾಡುವ ಪ್ರದೇಶಗಳ ಮೇಲೆ ಪೊಲೀಸ್ ಇಲಾಖೆ ಹದ್ದಿನ ಕಣ್ಣಿಟ್ಟಿದೆ.

ಹೆಚ್ಚಿದ ಪೊಲೀಸ್​ ತಪಾಸಣೆ : ಇದರ ಜೊತೆಗೆ ಜಿಲ್ಲೆಯನ್ನು ಸಂಪರ್ಕಿಸುವ ಗಡಿ ತಾಲೂಕುಗಳಲ್ಲಿ ಚೆಕ್​​​​​​ಪೊಸ್ಟ್ ತೆರೆದು ಹೊರ ರಾಜ್ಯಗಳಿಂದ ಬರುವ ವಾಹನಗಳ ತಪಾಸಣೆ ನಡೆಸಲಾಗುತ್ತಿದೆ. ಅಲ್ಲದೆ ಕಾಡಂಚಿನ ಜಲಪಾತಗಳಿಗೆ ತೆರಳುವವರನ್ನು ತಡೆಯಲಾಗುತ್ತಿದೆ.

ಇಂತಹ ಪ್ರದೇಶಗಳಲ್ಲಿ 112 ಪೊಲೀಸ್ ಹೆಲ್ಪ್​​​ಲೈನ್ ವಾಹನ ಹಾಗೂ ಸಿಬ್ಬಂದಿಯನ್ನಿಟ್ಟು ಎಚ್ಚರಿಕೆ ನೀಡಲಾಗುತ್ತಿದೆ. ಕಡಲತೀರಗಳಲ್ಲಿ ಹುಡುಗ-ಹುಡುಗಿಯರು ಕಾಲ ಕಳೆಯುತ್ತಿದ್ದರೆ ಅಲ್ಲಿಂದ ಹೊರಗೆ ಕಳುಹಿಸಲಾಗುತ್ತಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಾಹಿತಿ ನೀಡಿದ್ದಾರೆ.

ಖಾಕಿ ಕಾರ್ಯಕ್ಕೆ ಮೆಚ್ಚುಗೆ : ಮಾತ್ರವಲ್ಲದೆ ಶಾಲಾ-ಕಾಲೇಜುಗಳು ಆರಂಭವಾಗುವ ಮತ್ತು ಬಿಡುವ ಸಮಯದಲ್ಲಿ ಪೊಲೀಸ್ ಇಲಾಖೆಯ 112 ಹೆಲ್ಪ್​​ಲೈನ್ ವಾಹನ, ಹೈವೇ ಪೆಟ್ರೋಲಿಂಗ್, ಶರಾವತಿ ಕಾವಲು ಪಡೆಗಳು ನಿರ್ಜನ ಪ್ರದೇಶಗಳಲ್ಲಿ ಓಡಾಟ ನಡೆಸಿ ನಿಗಾ ಇಡುವಂತೆ ಸೂಚಿಸಲಾಗಿದೆ. ಅರಣ್ಯಪ್ರದೇಶ ಹಾಗೂ ನಿರ್ಜನ ಪ್ರದೇಶಗಳಲ್ಲಿ ಓಡಾಡುವ ಹೆಣ್ಣು ಮಕ್ಕಳ ಸುರಕ್ಷತತೆಗೆ ಪೊಲೀಸ್​ ಇಲಾಖೆ ಕೈಗೊಂಡಿರುವ ಕ್ರಮಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಓದಿ: ಬಿಜೆಪಿಗೆ ಸಿಹಿ.. ಎಂಇಎಸ್​ ಪಾಲಿಗೆ ಕುಂದಾ ಕಹಿ.. ಬೆಳಗಾವಿಯಲ್ಲಿ ಯಶಸ್ವಿಯಾದ ಕಮಲಪಾಳಯದ ತಂತ್ರ!

Last Updated : Sep 6, 2021, 4:01 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.