ಕಾರವಾರ: ಕೋವಿಡ್ ಲಸಿಕೆಯ ಮೊದಲನೇ ಡೋಸ್ ಪಡೆದವರಿಗೆ ಎರಡನೇ ಡೋಸ್(Second dose) ಪಡೆದುಕೊಳ್ಳುವಂತೆ ಕರೆ ಮಾಡಿ ತಿಳಿಸಿದರೂ ನಿರ್ಲಕ್ಷ್ಯ ವಹಿಸುತ್ತಿದ್ದು, ಮೊದಲ ಡೋಸ್ ಪಡೆದವರು ಕೂಡಲೇ ಎರಡನೇ ಡೋಸ್ ಪಡೆದುಕೊಳ್ಳುವಂತೆ ಉತ್ತರ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ಮನವಿ ಮಾಡಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ಕೊವ್ಯಾಕ್ಸಿನ್(Covaxin) ಲಸಿಕೆಯ ಮೊದಲ ಡೋಸ್ ಪಡೆದ 1,827 ಮಂದಿ ಎರಡನೇ ಡೋಸ್ ಪಡೆಯುವ ಅವಧಿ ಮುಗಿದರೂ ಬಂದು ಪಡೆಯುತ್ತಿಲ್ಲ. ಈ ಬಗ್ಗೆ ಸಂಬಂಧಪಟ್ಟವರಿಗೆ ಈಗಾಗಲೇ ಎಸ್ಎಂಎಸ್ ಮೂಲಕ ಮಾಹಿತಿ ನೀಡಿಲಾಗಿದೆ. ಅಲ್ಲದೆ, ಖುದ್ದಾಗಿ ಕರೆ ಮಾಡಿ ಕೂಡ ತಿಳಿಸಲಾಗಿದೆ. ಆದರೂ ಕೂಡ ನಾನಾ ಕಾರಣ ಹೇಳಿ ಎರಡನೇ ಡೋಸ್ ಪಡೆಯಲು ಜನ ಮುಂದೆ ಬರುತ್ತಿಲ್ಲ. ಇನ್ನು ಕೆಲವರು ಮೊದಲ ಡೋಸ್ ಪಡೆಯುವ ವೇಳೆ ಒಂದು ನಂಬರ್ ಮತ್ತು ಎರಡನೇ ಡೋಸ್ ಪಡೆಯುವಾಗ ಇನ್ನೊಂದು ನಂಬರ್ ನೀಡಿದ ಕಾರಣ ಸಮಸ್ಯೆಯಾಗಿದೆ. ಕೂಡಲೇ 1,827 ಮಂದಿಯಲ್ಲಿ ಯಾರು ಎರಡನೇ ಡೋಸ್ ಪಡೆದಿಲ್ಲವೋ, ಅಂತವರು ಪಡೆದುಕೊಳ್ಳಬೇಕು. ಇಲ್ಲದಿದ್ದರೆ ಯಾರು ಪಡೆಯುವವರಿಲ್ಲ ಎಂದು ಬೇರೆಯವರಿಗೆ ಕೊಡಿ ಎಂದು ಸರ್ಕಾರ ನಿರ್ಧಾರ ತೆಗೆದುಕೊಂಡಲ್ಲಿ ಮತ್ತೆ ಸಿಗುವ ಸಾಧ್ಯತೆ ಕಡಿಮೆ ಇದೆ ಎಂದು ಎಚ್ಚರಿಸಿದರು.
ಕೋವಿಶೀಲ್ಡ್ (Covishield) ಲಸಿಕೆ ಪಡೆದು 84 ದಿನದ ಅವಧಿ ಮುಗಿದರೂ 1,930 ಮಂದಿ ಎರಡನೇ ಡೋಸ್ ಪಡೆದಿಲ್ಲ. ಎರಡನೇ ಡೋಸ್ ಪಡೆಯದ ನೌಕರರಿಗೂ ಲಸಿಕೆ ಪಡೆಯಲು ಸೂಚಿಸಲಾಗಿದೆ. ಎರಡನೇ ಡೋಸ್ ಪಡೆಯುವವರು ಅವಧಿಗೆ ಸರಿಯಾಗಿ ಪಡೆಯಲು ಅನುಕೂಲವಾಗುವಂತೆ ತಾಲೂಕು ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿಯೂ ಅವಕಾಶ ಕಲ್ಪಿಸಲಾಗಿದೆ. ಆದ್ದರಿಂದ ಕೂಡಲೇ ಲಸಿಕೆ ಪಡೆಯುವಂತೆ ಜಿಲ್ಲಾಧಿಕಾರಿ ಸೂಚಿಸಿದ್ದಾರೆ.
ಇದನ್ನೂ ಓದಿ: ಒಳ್ಳೆತನಕ್ಕೆ ಇದು ಕಾಲವಲ್ಲ.. ಲಸಿಕೆ ಹಾಕಿಸಿಕೋ ಎಂದ ಸಿಬ್ಬಂದಿಗೆ ಮಚ್ಚು ತೋರಿಸಿದ ವಿಶೇಷಚೇತನ..