ಉಡುಪಿ:ಜಿಲ್ಲೆಯ ಹಿರಿಯಡ್ಕ ಹಾಗೂ ಪೆರ್ಡೂರು ಗ್ರಾಮದಲ್ಲಿಪರವಾನಗಿ ಇಲ್ಲದ ಬೃಹತ್ ಪ್ರಮಾಣದ ಅಕ್ಕಿ ಮೂಟೆಗಳನ್ನ ಡಿಸಿಐಬಿ ಪೊಲೀಸರು ವಶಕ್ಕೆ ಪಡೆದು ಓರ್ವನನ್ನ ಬಂಧಿಸಿದ್ದಾರೆ.
ದಾಳಿ ನಡೆಸಿದ ಪೊಲೀಸರು 380 ಚೀಲ ಅಕ್ಕಿ, ಬೊಲೆರೋ ಪಿಕಪ್ ಹಾಗೂ ಲಾರಿಯನ್ನ ವಶಕ್ಕೆ ಪಡೆದು ಲಾರಿ ಚಾಲಕನನ್ನ ಬಂಧಿಸಿದ್ದಾರೆ. ಉಡುಪಿಯ ಹಿರಿಯಡ್ಕ ಪೇಟೆಯಲ್ಲಿ ಅಕ್ರಮವಾಗಿ 10ಟನ್ ಅಕ್ಕಿಯನ್ನ ಸಾಗಿಸುತ್ತಿದ್ದ ಲಾರಿಯನ್ನ ಹಿಡಿದ ಬಳಿಕ ಪೆರ್ಡೂರಿನ ರಥಬೀದಿಯಲ್ಲಿ ರಾಜೇಶ್ ನಾಯಕ್ ಎಂಬುವರ ಗೋದಾಮಿನಲ್ಲಿದ್ದ 130ಚೀಲ ಅಕ್ಕಿಯನ್ನು ವಶಕ್ಕೆ ಪಡೆಯಲಅಗಿದೆ.
ಅಲ್ಲದೆ ಎಫ್ಸಿಐ ಪಂಜಾಬ್ ಎಂದು ಬರೆದಿದ್ದ 400 ಖಾಲಿ ಗೋಣಿ ಚೀಲಗಳನ್ನ, ಗೋದಾಮಿನ ಬಳಿ ನಿಲ್ಲಿಸಿದ್ದ ಪಿಕಪ್ ವಾಹನದಲ್ಲಿಟ್ಟಿದ್ದ 50ಅಕ್ಕಿ ಮೂಟೆಗಳನ್ನ ಕೂಡ ಜಪ್ತಿ ಮಾಡಲಾಗಿದೆ.
ಲಾರಿ ಚಾಲಕ ಶಫೀಕ್ ನನ್ನು ಬಂಧಿಸುವ ವೇಳೆ ಗೋದಾಮಿನ ಮಾಲೀಕ ರಾಜೇಶ್ ನಾಯಕ್ ಪರಾರಿಯಾಗಿದ್ದಾನೆ. ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.