ಕಾರವಾರ: ಪ್ರವಾಸಕ್ಕೆ ಬಂದ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಬ್ಬರು ಸಮುದ್ರದಲ್ಲಿ ಈಜಾಡುತ್ತಿದ್ದಾಗ ಅಲೆಗೆ ಸಿಲುಕಿ ಕೊಚ್ಚಿ ಹೋದ ಘಟನೆ ಕುಮಟಾ ತಾಲೂಕಿನ ಬಾಡದ ಕಡಲತೀರದಲ್ಲಿ ನಡೆದಿದೆ. ದಾವಣಗೆರೆ ಮೂಲದ ಮೇಘ ಎಂ (24) ಹಾಗೂ ರೇಣುಕಾ ಪ್ರಸಾದ (24) ಮೃತ ವಿದ್ಯಾರ್ಥಿಗಳಾಗಿದ್ದಾರೆ.
ಒಟ್ಟು 8 ಮಂದಿ ಸ್ನೇಹಿತರು ಪ್ರವಾಸಕ್ಕೆಂದು ಕುಮಟಾ ತಾಲೂಕಿನ ಬಾಡದ ಹುಬ್ಬಣಗೇರಿ ಕಡಲತೀರಕ್ಕೆ ಬಂದಿದ್ದರು. ಆ ವೇಳೆ, ಸಮುದ್ರಕ್ಕೆ ಈಜಲು ತೆರಳಿದಾಗ ಅಲೆಯ ರಭಸಕ್ಕೆ ಸಿಲುಕಿ ಇಬ್ಬರು ಸಮುದ್ರ ಪಾಲಾಗಿದ್ದಾರೆ. ಇವರಲ್ಲಿ ಮೇಘ ಎಂ. ಮೃತದೇಹ ಸಿಕ್ಕಿದ್ದು, ರೇಣುಕಾ ಪ್ರಸಾದ ಶವ ಪತ್ತೆಗಾಗಿ ಕರಾವಳಿ ಕಾವಲು ಪಡೆ ಹಾಗೂ ಕುಮಟಾ ಪೊಲೀಸರು ಭೇಟಿ ನೀಡಿ, ಶೋಧ ಕಾರ್ಯ ನಡೆಸುತ್ತಿದ್ದಾರೆ.
ಸ್ಥಳಕ್ಕೆ ಪಿ.ಎಸ್.ಐ ಆನಂದಮೂರ್ತಿ ನೇತೃತ್ವದಲ್ಲಿ ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: 9-10ನೇ ತರಗತಿ ಪುನಾರಂಭಿಸಲು ಮಾರ್ಗಸೂಚಿ ಪ್ರಕಟ; ನಿತ್ಯವೂ ಅರ್ಧ ದಿನ ಭೌತಿಕ ಕ್ಲಾಸ್