ಶಿರಸಿ: ಎರಡು ಬಸ್ ಹಾಗೂ ಟಾಟಾ ಬೊಲೆರೋ ವ್ಯಾನ್ ನಡುವೆ ಸರಣಿ ಅಪಘಾತ ನಡೆದು ಬಸ್ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದು, 10ಕ್ಕೂ ಹೆಚ್ಚು ಪ್ರಯಾಣಿಕರು ಗಂಭೀರ ಗಾಯಗೊಂಡಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ಸಮೀಪದ ಕೋಳಿಕೇರಿ ಬಳಿ ನಡೆದಿದೆ.
ಕಾರವಾರ ಡಿಪೋದ ಸಿಬ್ಬಂದಿ ಯಮುನಪ್ಪ ಮಾದರ್ ಮೃತಪಟ್ಟ ಚಾಲಕ. ಭಾರಿ ಮಳೆ ಹಿನ್ನೆಲೆ ಕಾರವಾರದಿಂದ ಹುಬ್ಬಳ್ಳಿ ಮಾರ್ಗವಾಗಿ ಸಂಚರಿಸುತಿದ್ದ ಸರ್ಕಾರಿ ಸಾರಿಗೆ ಬಸ್ ಹಾಗೂ ನರಗುಂದಕ್ಕೆ ಹೋಗುತಿದ್ದ ಸರಕಾರಿ ಸಾರಿಗೆ ಮಧ್ಯೆ ಗಟ್ಟದ ಅಲ್ಪ ತಿರುವಿನಲ್ಲಿ ಡಿಕ್ಕಿಯಾಗಿದೆ. ಇದೇ ವೇಳೆ ಬಸ್ ಹಿಂಬದಿಯಿದ್ದ ಬುಲೆರೋ ಸಹ ಡಿಕ್ಕಿ ಹೊಡೆದು ನುಜ್ಜುಗುಜ್ಜಾಗಿದೆ.
ಘಟನೆಯಲ್ಲಿ ಗಾಯ ಗೊಂಡವರನ್ನು ಯಲ್ಲಾಪುರ ಆಸ್ಪತ್ರೆಗೆ ಸಾಗಿಸಲಾಗಿದೆ. ಹೆಚ್ಚಿನ ಚಿಕಿತ್ಸೆಗೆ ಕೆಲವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ಸಂಬಂಧ ಯಲ್ಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.