ETV Bharat / state

50 ಲಕ್ಷ ರೂ ಹಣಕ್ಕಾಗಿ ಉದ್ಯಮಿಗೆ ಬ್ಲಾಕ್​ಮೇಲ್ : ಹೊನ್ನಾವರದಲ್ಲಿ ಖದೀಮರ ಬಂಧನ - blackmail for businessman in honnavara

ಉದ್ಯಮಿಯ ವೈಯಕ್ತಿಕ ವಿಷಯ ಬಳಸಿಕೊಂಡು ಹಣದ ಬೇಡಿಕೆ ಇಟ್ಟು ಬೆದರಿಕೆ ಹಾಕುತ್ತಿದ್ದ ಖದೀಮರನ್ನು ಹೊನ್ನಾವರದಲ್ಲಿ ಬಂಧಿಸಲಾಗಿದೆ.

Etv Bharattwo-arrested-in-honnavara-businessman-blackmail-case
Etv Bharat50 ಲಕ್ಷ ಹಣಕ್ಕೆ ಉದ್ಯಮಿಗೆ ಬ್ಲಾಕ್​ಮೇಲ್​ : ಹೊನ್ನಾವರದಲ್ಲಿ ಖದೀಮರ ಬಂಧನ
author img

By

Published : Aug 11, 2022, 8:07 PM IST

ಕಾರವಾರ: ಉದ್ಯಮಿಗೆ ಬ್ಲಾಕ್​ಮೇಲ್​ ಮಾಡಿ 50 ಲಕ್ಷ ರೂಪಾಯಿ ಹಣಕ್ಕೆ ಬೇಡಿಕೆ ಇಟ್ಟಿದ್ದ ಇಬ್ಬರು ಆರೋಪಿಗಳನ್ನು ಹೊನ್ನಾವರ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಕರ್ಕಿ ಕೋಡಿಯ ಪರಮೇಶ್ವರ ಮುಕುಂದ ಉಪ್ಪಾರ ಹಾಗೂ ಉದ್ಯಮನಗರದ ಸುನೀಲ್ ಬಾಬು ಮೇಸ್ತ ಎಂದು ಗುರುತಿಸಲಾಗಿದೆ.

ಆರೋಪಿಗಳು ಸ್ಥಳೀಯ ಉದ್ಯಮಿಯ ವೈಯಕ್ತಿಕ ವಿಷಯ ಬಳಸಿಕೊಂಡು ಲಕ್ಷಾಂತರ ರೂ. ಹಣ ನೀಡುವಂತೆ ಬೇಡಿಕೆ ಇಟ್ಟು ಬೆದರಿಕೆ ಹಾಕುತ್ತಿದ್ದರು. ಅಲ್ಲದೆ, ತಮ್ಮ ಗುರುತು ಮರೆಮಾಚುತ್ತಿದ್ದರು. ಈ ಬಗ್ಗೆ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾದ ಬೆನ್ನಲ್ಲೇ ಕಾರ್ಯಪ್ರವೃತ್ತರಾದ ಪೊಲೀಸರು ಫೋನ್​​ ಕರೆಗಳ ಆಧರಿಸಿ ಪೊಲೀಸರನ್ನು ಬಂಧಿಸಿದ್ದಾರೆ.

ಆರೋಪಿಗಳಿಂದ ಟಾಟಾ ಕಂಪನಿಯ ಹೊಸ ಪಂಚ್ ಕಾರು, ಹೊಂಡಾ ಕಂಪನಿಯ ಹೊಸ ಸ್ಕೂಟಿ, 3 ಮೊಬೈಲ್ ಒಂದು ಹೆಲ್ಮೆಟ್ ಹಾಗೂ ಇನ್ನಿತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಇಬ್ಬರು ಪಿಕ್‌ಪಾಕೆಟ್‌ ಚೋರರು ಸೆರೆ: ₹78 ಲಕ್ಷ ಮೌಲ್ಯದ 512 ಮೊಬೈಲ್ ಜಪ್ತಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.