ETV Bharat / state

ಕಾರವಾರಕ್ಕೆ ಬಂತು ಬಹು ನಿರೀಕ್ಷಿತ ಯುದ್ಧ ವಿಮಾನ ಟುಪೆಲೊವ್-142.. ಪ್ರವಾಸೋದ್ಯಮಕ್ಕೆ ಮತ್ತೊಂದು ಗರಿ

Tupelov-142 fighter jet: ಕೊನೆಗೂ ಬಹು ನಿರೀಕ್ಷಿತ ಯುದ್ಧವಿಮಾನ ಕಾರವಾರಕ್ಕೆ ಬಂದಿದ್ದು, ತಿಂಗಳೊಳಗೆ ಟುಪೆಲೊವ್-142 ವಿಮಾನ ರೆಕ್ಕೆ ಬಿಚ್ಚಲಿದೆ.

Tupelov-142 fighter jet
ಕಾರವಾರಕ್ಕೆ ಬಂದ ಟುಪೆಲೊವ್-142 ಯುದ್ಧವಿಮಾನ
author img

By ETV Bharat Karnataka Team

Published : Sep 28, 2023, 3:08 PM IST

ಕಾರವಾರಕ್ಕೆ ಬಂದ ಟುಪೆಲೊವ್-142 ಯುದ್ಧವಿಮಾನ

ಕಾರವಾರ: ಬಹುನಿರೀಕ್ಷಿತ ಟುಪೆಲೊವ್-142 ಯುದ್ಧ ವಿಮಾನ ಕೊನೆಗೂ ಕಾರವಾರಕ್ಕೆ ಆಗಮಿಸಿದೆ. ನಗರದ ಚಾಪೆಲ್ ಯುದ್ಧ ನೌಕೆ ಸಂಗ್ರಹಾಲಯದ ಬಳಿಯೇ ಸಿದ್ಧತೆ ನಡೆದಿದೆ. ನಿರೀಕ್ಷೆಯಂತೆ ಜೋಡಣೆ ನಡೆದಲ್ಲಿ ತಿಂಗಳೊಳಗೆ ಜಿಲ್ಲೆಯ ಪ್ರವಾಸೋಧ್ಯಮಕ್ಕೆ ಮತ್ತೊಂದು ಗರಿ‌ ಮೂಡಲಿದೆ.

ಕರಾವಳಿಯ ಹೆಬ್ಬಾಗಿಲು ಉತ್ತರಕನ್ನಡ ಜಿಲ್ಲೆಯ ಕಾರವಾರ ಅಂದಾಕ್ಷಣ ಮೊದಲು ನೆನಪಾಗೋದೇ ಇಲ್ಲಿನ ವಿಶಾಲವಾದ ಕಡಲತೀರ. ಜೊತೆಗೆ ದೇಶದ ಪ್ರತಿಷ್ಠಿತ ಯೋಜನೆಗಳಲ್ಲಿ ಒಂದಾದ ಕದಂಬ ನೌಕಾ ನೆಲೆ. ತಾಲೂಕಿನ ಅರಗಾ ಗ್ರಾಮದ ಬಳಿ ಇರುವ ಕದಂಬ ನೌಕಾನೆಲೆ ಏಷ್ಯಾದಲ್ಲೇ ಅತೀ ದೊಡ್ಡ ನೌಕಾ ನೆಲೆಯಾಗಿದ್ದು, ಇದು ಇಡೀ ರಾಜ್ಯಕ್ಕೂ ಹೆಮ್ಮೆ ತಂದಿದೆ. ಇದರೊಂದಿಗೆ ಪ್ರವಾಸಿಗರನ್ನು ಆಕರ್ಷಿಸುವುದರ ಜೊತೆಗೆ ಕದಂಬ ನೌಕಾನೆಲೆಯ ಬಗ್ಗೆ ಮಾಹಿತಿ ಒದಗಿಸುವ ನಿಟ್ಟಿನಲ್ಲಿ ನಗರದ ರವೀಂದ್ರನಾಥ ಟ್ಯಾಗೋರ್ ತೀರದಲ್ಲಿ ಇಡಲಾಗಿರುವ ಚಾಪೆಲ್ ಯುದ್ಧ ನೌಕೆ ವಸ್ತುಸಂಗ್ರಹಾಲಯ ಪ್ರವಾಸಿಗರ ಮೆಚ್ಚಿನ ತಾಣವಾಗಿದೆ.

ಇದಕ್ಕೆ ಹೊಸ ಸೇರ್ಪಡೆ ಎನ್ನುವಂತೆ ಇದೇ ಕಡಲತೀರದ ಬಳಿ ಯುದ್ಧವಿಮಾನ ಸಂಗ್ರಹಾಲಯವನ್ನು ಸ್ಥಾಪಿಸಲು ತಯಾರಿ ನಡೆದಿದೆ. 2019ರ ಮಾರ್ಚ್ ತಿಂಗಳಲ್ಲಿ ನಿವೃತ್ತಿ ಹೊಂದಿದ ಟುಪೆಲೊವ್ 142M ಯುದ್ಧ ವಿಮಾನವನ್ನು ಟ್ಯಾಗೋರ್ ಕಡಲತೀರಕ್ಕೆ ತಂದು ಯುದ್ಧ ವಿಮಾನ ವಸ್ತುಸಂಗ್ರಹಾಲಯವಾಗಿ ಮಾರ್ಪಡಿಸಲು ನೌಕಾನೆಲೆಯೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿತ್ತು. ವೈಜಾಕ್​(ವಿಶಾಖಪಟ್ಟಂ)ನಲ್ಲಿ ನಿವೃತ್ತಿಯಾಗಿದ್ದ 4 ಯುದ್ಧ ವಿಮಾನಗಳಲ್ಲಿ ಟುಪೆಲೊವ್ 142M ಯುದ್ಧ ವಿಮಾನವನ್ನು ಕಾರವಾರ ಕಡಲತೀರದಲ್ಲಿ ಮ್ಯೂಸಿಯಂ ಮಾಡಲು ಒಪ್ಪಂದ ಮಾಡಿಕೊಳ್ಳಲಾಗಿತ್ತು. ಕಳೆದ 2020ರಲ್ಲೇ ಬರಬೇಕಿದ್ದ ಯುದ್ಧವಿಮಾನ ಕೊರೊನಾ ಕಾರಣಕ್ಕೆ ತಡವಾಗಿದ್ದು, ಎರಡು ದಿನಗಳ ಹಿಂದೆ ಟುಪೆಲೊವ್ ಬಿಡಿಭಾಗಗಳು ಕಾರವಾರಕ್ಕೆ ಬಂದಿವೆ.

ಕಡಲತೀರಕ್ಕೆ ಆಗಮಿಸುವ ಪ್ರವಾಸಿಗರಿಗೆ ಸದ್ಯ ವಾರ್‌ಶಿಪ್ ಮ್ಯೂಸಿಯಂ ಒಂದೇ ಆಕರ್ಷಣೆಯಾಗಿತ್ತು. ಆದಷ್ಟು ಶೀಘ್ರದಲ್ಲಿ ಯುದ್ಧವಿಮಾನ ವಸ್ತುಸಂಗ್ರಹಾಲಯ ಕೂಡ ಮತ್ತೊಂದು ಆಕರ್ಷಣೆಯಾಗಿ ಸದ್ಯದಲ್ಲೇ ಪ್ರವಾಸಿಗರನ್ನ ಸೆಳೆಯುವ ಸಾಧ್ಯತೆ ಇದೆ ಎಂದು ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್ ತಿಳಿಸಿದರು.

ಕಾರವಾರ ಕಡಲತೀರದಲ್ಲಿರುವ ವಾರ್‌ಶಿಪ್ ಮ್ಯೂಸಿಯಂ ರಾಜ್ಯದಲ್ಲೇ ಏಕೈಕ ಯುದ್ಧನೌಕೆ ವಸ್ತು ಸಂಗ್ರಹಾಲಯವಾಗಿದೆ. ಚಾಪೆಲ್ ಮ್ಯೂಸಿಯಂಗೆ ಭೇಟಿ ನೀಡುವ ಪ್ರವಾಸಿಗರು ಭಾರತೀಯ ನೌಕಾ ನೆಲೆಯ ಕಾರ್ಯಚಟುವಟಿಕೆಗಳ ಕುರಿತು ಮಾಹಿತಿ ಪಡೆದುಕೊಳ್ಳುವುದರ ಜೊತೆಗೆ ಯುದ್ಧನೌಕೆಯನ್ನು ಹತ್ತಿರದಿಂದಲೇ ವೀಕ್ಷಿಸಲು ಅವಕಾಶ ಸಿಗುತ್ತಿದೆ. ಪ್ರತಿವರ್ಷ ಕಡಲತೀರಕ್ಕೆ ಭೇಟಿ ನೀಡುವ ಪ್ರವಾಸಿಗರ ಪೈಕಿ ಸಾವಿರಾರು ಮಂದಿ ಯುದ್ಧನೌಕೆ ಸಂಗ್ರಹಾಲಯವನ್ನು ವೀಕ್ಷಣೆ ಮಾಡುತ್ತಿದ್ದು, ಇದೀಗ ಯುದ್ಧವಿಮಾನ ಸಂಗ್ರಹಾಲಯವೂ ಕಾರವಾರ ಕಡಲತೀರದಲ್ಲೇ ಸ್ಥಾಪನೆಯಾಗುತ್ತಿರುವುದರಿಂದ ಟ್ಯಾಗೋರ್ ಬೀಚ್‌ಗೆ ಇನ್ನಷ್ಟು ಮೆರುಗು ನೀಡಲಿದೆ ಎನ್ನುತ್ತಾರೆ ಸ್ಥಳೀಯರು.

ಒಟ್ಟಾರೆ ಕಾರವಾರ ಕಡಲತೀರದಲ್ಲಿ ಯುದ್ಧವಿಮಾನ ವಸ್ತುಸಂಗ್ರಹಾಲಯದ ನಿರ್ಮಾಣ ಕಾರ್ಯ ವೇಗ ಪಡೆದುಕೊಂಡಿರುವುದು ಉತ್ತರಕನ್ನಡ ಪ್ರವಾಸೋದ್ಯಮಕ್ಕೆ ಹೊಸ ಮೆರಗು ನೀಡಿದಂತಾಗಿದೆ. ಶೀಘ್ರದಲ್ಲಿ ಯುದ್ಧವಿಮಾನ ವಸ್ತುಸಂಗ್ರಹಾಲಯ ಟ್ಯಾಗೋರ್ ಕಡಲತೀರದಲ್ಲಿ ಪ್ರವಾಸಿಗರ ವೀಕ್ಷಣೆಗೆ ಲಭ್ಯವಾಗಲಿದೆ.

ಇದನ್ನೂ ಓದಿ: ಅಬ್ಬಾ! ಬರೋಬ್ಬರಿ 1.20 ಕೋಟಿ ರೂಗೆ ಗಣಪತಿ ಲಡ್ಡು ಹರಾಜು...

ETV Bharat Logo

Copyright © 2024 Ushodaya Enterprises Pvt. Ltd., All Rights Reserved.