ETV Bharat / state

Travel: ಕಾಲ್ನಡಿಗೆಯಲ್ಲೇ 3 ದೇಶ ಸುತ್ತಲು ಹೊರಟ ಕಾಸರಗೋಡಿನ ಸ್ನೇಹಿತರು: 15 ಸಾವಿರ ಕಿ.ಮೀ ನಡೆಯುವ ಗುರಿ - ದೇಶ ಸುತ್ತಲು ಹೊರಟ ಮೂವರು ಸ್ನೇಹಿತರು

'2 ವರ್ಷದ ಈ ಪಾದಯಾತ್ರೆಯ ಗುರಿ ಹೊಂದಿದ್ದೇವೆ. ಅ.15ಕ್ಕೆ ಕೇರಳದಿಂದ ಬಿಟ್ಟು ಕರ್ನಾಟಕ ಪ್ರವೇಶಿಸಿರುವ ನಾವು, ಈಗ ಗೋವಾದಿಂದ ಮಧ್ಯಪ್ರದೇಶ, ರಾಜಸ್ಥಾನ, ಪಂಜಾಬ್, ಹಿಮಾಚಲಪ್ರದೇಶಕ್ಕೆ ತೆರಳುತ್ತೇವೆ. ಅಲ್ಲಿಂದ ಉತ್ತರಾಖಂಡದ ಮೂಲಕ ನೇಪಾಳ (Nepal) ಹಾಗು ಭೂತಾನ್‌ಗೆ (Bhutan) ಭೇಟಿ ನೀಡುತ್ತೇವೆ'- ಜುಬೈರ್ ಪಾದಯಾತ್ರಿ

Three friends who set out on Hiking around the country
3 ದೇಶ ಸುತ್ತಲು ಹೊರಟ ಮೂವರು ಸ್ನೇಹಿತರು
author img

By

Published : Nov 14, 2021, 7:54 AM IST

Updated : Nov 14, 2021, 8:10 AM IST

ಕಾರವಾರ: ದೇಶದಿಂದ ದೇಶಕ್ಕೆ ಸೈಕಲ್, ಬೈಕ್‌ಗಳಲ್ಲಿ ಯಾತ್ರೆ ಹೊರಡುವವರು, ಪ್ರಪಂಚ ಪರ್ಯಟನೆ ಮಾಡುವವರನ್ನು ನೋಡಿದ್ದೇವೆ, ಕೇಳಿದ್ದೇವೆ. ಆದರೆ ಇಲ್ಲಿ ಮೂವರು ಸ್ನೇಹಿತರು ನಡೆದುಕೊಂಡೇ ದೇಶ ಸುತ್ತಲು ತೀರ್ಮಾನಿಸಿದ್ದಾರೆ. ಅದು ಮೂರು ದೇಶಗಳನ್ನು ಸುತ್ತುವ ಬರೋಬ್ಬರಿ 13 ರಿಂದ 15 ಸಾವಿರ ಕಿ.ಮೀ ನಡೆದೇ ಸಾಗುವ ಸಂಕಲ್ಪ.

ಕೇರಳದ ಕಾಸರಗೋಡಿನ (Kasaragod) ಜುಬೈರ್, ಸಿನಾನ್ ಹಾಗು ತ್ರಿವೇಂದ್ರಮ್‌ನ ನವನೀತ್ ಎಂಬ ಮೂವರು ಯುವಕರು ಈ ಪಾದಯಾತ್ರೆ ಹೊರಟವರು (Three friends on a Hiking Trip from Kasaragod). ಜುಬೈರ್ ದುಬೈನಲ್ಲಿ ಉದ್ಯೋಗದಲ್ಲಿದ್ದ. ಆದರೆ ಈ ಪಾದಯಾತ್ರೆಗಾಗಿ (Hiking) ಉದ್ಯೋಗ ತ್ಯಜಿಸಿದ್ದಾನೆ. ನವನೀತ್ ಕಂಪ್ಯೂಟರ್ ಇಂಜಿನಿಯರಿಂಗ್ ವಿದ್ಯಾರ್ಥಿಯಾಗಿದ್ದಾನೆ. ಇನ್ನೋರ್ವ ಸಿನಾನ್ ಎಂಬಾತ ಕಾಸರಗೋಡಿನ ಸ್ಥಳೀಯ ವೆಬ್‌ಸೈಟ್​ವೊಂದರಲ್ಲಿ ವರದಿಗಾರನಾಗಿ ಕಾರ್ಯ ನಿರ್ವಹಿಸುತ್ತಿದ್ದಾನೆ.

ಒಂದು ದಿನದ ಹಿಂದಷ್ಟೇ ಕೋವಿಡ್ ಲಸಿಕೆ ಪಡೆದಿದ್ದ ಇವರು ಮಂಗಳೂರು, ಉಡುಪಿ ಮೂಲಕ ಶುಕ್ರವಾರ ಅಂಕೋಲಾ ತಲುಪಿದ್ದರು. ಲಸಿಕೆಯ ಪರಿಣಾಮವಾಗಿ ಮೂವರಿಗೂ ಕೊಂಚ ಸುಸ್ತಾಗಿತ್ತು. ನವನೀತ್‌ಗೆ ತಲೆಸುತ್ತು ಬಂದು, ರಕ್ತದೊತ್ತಡದಲ್ಲಿ ಇಳಿಕೆಯಾಗಿತ್ತು. ಹೀಗಾಗಿ ಅಂಕೋಲಾ ತಲುಪಿದ ಇವರು, ಅಲ್ಲಿ ಡಾ.ಸಂಜು ನಾಯ್ಕ ಅವರ ನೆರವಿನೊಂದಿಗೆ ಹಾಗು ಕಾರವಾರದ ಜನಶಕ್ತಿ ವೇದಿಕೆಯ ಅಧ್ಯಕ್ಷ ಮಾಧವ ನಾಯಕರನ್ನು ಮೊಬೈಲ್ ಕರೆ ಮೂಲಕ ಸಂಪರ್ಕಿಸಿ ಸ್ಥಳೀಯವಾಗಿ ವೈದ್ಯರನ್ನು ಭೇಟಿ ಮಾಡಿ ರಾತ್ರಿ ಕಾರವಾರಕ್ಕೆ ಬಂದಿದ್ದಾರೆ.

Three friends who set out on Hiking around the country
ಕಾಲ್ನಡಿಗೆಯಲ್ಲಿಯೇ 3 ದೇಶ ಸುತ್ತಲು ಹೊರಟ ಮೂವರು ಸ್ನೇಹಿತರು

ಆರೋಗ್ಯ ಸರಿ ಇರದ ಕಾರಣ ವಾಹನದಲ್ಲಿ ಆಸ್ಪತ್ರೆಗೆ ಬಿಡುತ್ತೇವೆಂದು ಹೇಳಿದರೂ ನಡೆದುಕೊಂಡೇ ಹೋಗುತ್ತೇವೆಂದು ಆಸ್ಪತ್ರೆಗೆ ತೆರಳಿ, ಬಳಿಕ ಅಲ್ಲಿಂದ ಕಾರವಾರಕ್ಕೆ ಬಂದಿದ್ದಾರೆ. ಕಾರವಾರದ ಪ್ರವಾಸಿ ಮಂದಿರದಲ್ಲಿ ಆಶ್ರಯ ಪಡೆದಿರುವ ಮೂವರನ್ನು ಮಾಧವ ನಾಯಕ ಅವರು ಲಯನ್ಸ್ ಕ್ಲಬ್‌ನ ಅಲ್ತಾಫ್ ಶೇಖ್ ಹಾಗು ಕನ್ನಡ ಸಾಹಿತ್ಯ ಪರಿಷತ್‌ನ ಅಜೀವ ಸದಸ್ಯ ರಾಮಾ ನಾಯ್ಕ ಅವರೊಂದಿಗೆ ಭೇಟಿಯಾಗಿ, ಆರೋಗ್ಯದ ಕುರಿತು ವಿಚಾರಿಸಿದರು.

ಈ ವೇಳೆ ಮಾತನಾಡಿದ ಜುಬೈರ್, ನಾವು ಕೇರಳದಿಂದ ಹೊರಟಿದ್ದೆವು. 2 ವರ್ಷದ ಪಾದಯಾತ್ರೆಯ ಗುರಿ ಹೊಂದಿದ್ದೇವೆ. ಅ.15ಕ್ಕೆ ಕೇರಳದಿಂದ ಬಿಟ್ಟು ಕರ್ನಾಟಕ ಪ್ರವೇಶಿಸಿರುವ ನಾವು, ಈಗ ಗೋವಾದಿಂದ ಮಧ್ಯಪ್ರದೇಶ, ರಾಜಸ್ಥಾನ, ಪಂಜಾಬ್, ಹಿಮಾಚಲಪ್ರದೇಶಕ್ಕೆ ತೆರಳುತ್ತೇವೆ. ಅಲ್ಲಿಂದ ಉತ್ತರಾಖಂಡದ ಮೂಲಕ ನೇಪಾಳ ಹಾಗು ಭೂತಾನ್‌ಗೆ ಭೇಟಿ ನೀಡುತ್ತೇವೆ. ಬಳಿಕ ವಾಪಸ್ ಪಶ್ಚಿಮ ಬಂಗಾಳ, ಹೈದರಾಬಾದ್, ಬೆಂಗಳೂರು ಮೂಲಕ ಕನ್ಯಾಕುಮಾರಿ, ಕೇರಳಕ್ಕೆ ಮರಳುತ್ತೇವೆ ಎಂದು ತಿಳಿಸಿದರು.

ದೈಹಿಕ ಆರೋಗ್ಯಕ್ಕೆ ಸಲಹೆ:

ಒಟ್ಟು 13-15 ಸಾವಿರ ಕಿ.ಮೀ. ನಾವು ಕ್ರಮಿಸಬೇಕಿದೆ. ಹವ್ಯಾಸಕ್ಕಾಗಿ ಇದನ್ನು ಮಾಡುತ್ತಿದ್ದೇವೆ. ಜೊತೆ ಜೊತೆಗೆ, ಜನರಿಗೆ ತಮ್ಮ ಆರೋಗ್ಯದ ಬಗ್ಗೆ, ಅದರಲ್ಲಿಯೂ ಹೃದಯದ ಬಗ್ಗೆ ಹೆಚ್ಚಿನ ಗಮನ ನೀಡುವಂತೆ ಜಾಗೃತಿ ಮೂಡಿಸುತ್ತಿದ್ದೇವೆ.

ಈಗಿನ ಜೀವನಶೈಲಿ ಬದಲಾಗಿದೆ. ವ್ಯಾಯಾಮ ಇಲ್ಲ, ವಿಹಾರ ಇರಲ್ಲ. ಒತ್ತಡದ ಜೀವನದಲ್ಲಿ ಆರೋಗ್ಯ ಸಮಸ್ಯೆಗಳು ಹೆಚ್ಚು. ಹೀಗಾಗಿ ದೈಹಿಕ ಆರೋಗ್ಯಕ್ಕೆ ಸಲಹೆಗಳನ್ನು ನೀಡುತ್ತೇವೆ. ಬೆಳಿಗ್ಗೆ 4.30ಕ್ಕೆ ಎದ್ದು ಪಾದಯಾತ್ರೆ ಆರಂಭಿಸಿ, ದಿನಕ್ಕೆ 25-30 ಕಿ.ಮೀ. ನಡೆಯುತ್ತೇವೆ. ಪ್ರವಾಸಿ ತಾಣಗಳು, ಚಾರಣ ತಾಣಗಳಿಗೂ ಭೇಟಿ ನೀಡಿ ನಮ್ಮ ಯೂಟ್ಯೂಬ್ ಚಾನೆಲ್‌ಗಾಗಿ ವಿಡಿಯೋಗಳನ್ನೂ ಮಾಡಿಕೊಳ್ಳುತ್ತೇವೆ ಎಂದು ತಿಳಿಸಿದರು.

Last Updated : Nov 14, 2021, 8:10 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.