ETV Bharat / state

ಸಾರಿಗೆ ಮುಷ್ಕರ, ಕೊರೊನಾ ಭೀತಿ.. ಬಿಕೋ ಎನ್ನುತ್ತಿವೆ ಕರಾವಳಿಯ ಕಡಲತೀರಗಳು - ಕಾರವಾರ

ಕಳೆದ ಆರು ದಿನಗಳಿಂದ ಸಾರಿಗೆ ಮುಷ್ಕರ ಹಾಗೂ ಕೊರೊನಾ ಭೀತಿ ಹಿನ್ನೆಲೆಯಲ್ಲಿ ಉತ್ತರಕನ್ನಡ ಜಿಲ್ಲೆಯ ಪ್ರವಾಸಿ ತಾಣಗಳು ಪ್ರವಾಸಿಗರಿಲ್ಲದೆ ಬಿಕೋ ಎನ್ನುವಂತಾಗಿದೆ.

karwar
ಕಾರವಾರ ಪ್ರವಾಸಿ ತಾಣಗಳು
author img

By

Published : Apr 13, 2021, 10:26 AM IST

ಕಾರವಾರ: ವಾರಾಂತ್ಯ ಹಾಗೂ ಸರ್ಕಾರಿ ರಜಾ ದಿನಗಳಲ್ಲಿ ಪ್ರವಾಸಿಗರಿಂದಲೇ ತುಂಬಿ ತುಳುಕುತ್ತಿದ್ದ ಉತ್ತರಕನ್ನಡ ಜಿಲ್ಲೆಯ ಪ್ರವಾಸಿ ತಾಣಗಳಿಗೂ ಸಾರಿಗೆ ನೌಕರರ ಮುಷ್ಕರದ ಬಿಸಿ ತಟ್ಟಿದೆ. ಕರಾವಳಿಯ ಕಡಲತೀರಗಳು ಪ್ರವಾಸಿಗರಿಲ್ಲದೆ ಬಿಕೋ ಎನ್ನುವಂತಾಗಿದೆ.

ಕಾರವಾರ ಪ್ರವಾಸಿ ತಾಣಗಳು

ವೀಕೆಂಡ್ ಅಂದ್ರೆ ಸಾಕು, ಜಿಲ್ಲೆಗೆ ಪ್ರವಾಸಿಗರ ದಂಡೇ ಹರಿದುಬರುತ್ತಿತ್ತು. ಅದರಲ್ಲಿಯೂ ಕರಾವಳಿ ಕಡಲತೀರಗಳಾದ ಗೋಕರ್ಣ, ಮುರುಡೇಶ್ವರ, ಕಾರವಾರ ಸೇರಿದಂತೆ ಇನ್ನಿತರ ಭಾಗಗಳ ಬೀಚ್​ಗಳಲ್ಲಿ ದೇಶ-ವಿದೇಶಿ ಪ್ರವಾಸಿಗರು ರಜಾ ಅವಧಿಯಲ್ಲಿ ಬಂದು ಎಂಜಾಯ್ ಮಾಡಿ ತೆರಳುತ್ತಿದ್ದರು. ಆದರೆ ಕಳೆದ ಆರು ದಿನಗಳಿಂದ ಸಾರಿಗೆ ಮುಷ್ಕರ ಹಾಗೂ ಕೊರೊನಾ ಭೀತಿ ಹಿನ್ನೆಲೆಯಲ್ಲಿ ಪ್ರವಾಸಿಗರ ಸಂಖ್ಯೆ ಪ್ರವಾಸಿ ತಾಣಗಳಲ್ಲಿ ಕಾಣದಂತಾಗಿದೆ‌.

ದೇಶ-ವಿದೇಶಿ ಪ್ರವಾಸಿಗರಿಂದಲೇ ಸದಾ ತುಂಬಿಕೊಂಡಿರುತ್ತಿದ್ದ ಮುರುಡೇಶ್ವರ ಹಾಗೂ ಗೋಕರ್ಣದ ಮುಖ್ಯ ಕಡಲತೀರಗಳು ಪ್ರವಾಸಿಗರಿಲ್ಲದೇ ಸಂಪೂರ್ಣ ಸ್ತಬ್ಧವಾಗಿದೆ. ಅದರಲ್ಲಿಯೂ ಶನಿವಾರ ಮತ್ತು ಭಾನುವಾದ ರಜಾ ದಿನದಲ್ಲಿ ಅತೀ ಹೆಚ್ಚು ಜನರು ಇಲ್ಲಿಗೆ ಭೇಟಿ ನೀಡುತ್ತಾರೆ. ಆದ್ರೆ ಇದೀಗ ಪ್ರವಾಸಿಗರ ಸಂಖ್ಯೆ ಸಂಪೂರ್ಣ ಸ್ತಬ್ದವಾಗಿದ್ದು, ಜಿಲ್ಲೆಯ ಬಹುತೇಕ ಪ್ರವಾಸಿ ಸ್ಥಳಗಳು ಪ್ರವಾಸಿಗರಿಲ್ಲದೇ ಬಿಕೋ ಎನ್ನುತ್ತಿವೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.