ETV Bharat / state

ಉತ್ತರಕನ್ನಡ ಜಿಲ್ಲೆಯಲ್ಲಿ ಕೊರೊನಾ ಅಟ್ಟಹಾಸ...ಒಂದೇ ದಿನ 40 ಮಂದಿಗೆ ಸೋಂಕು!! - 21 people infected in Bhatkal

ಉತ್ತರಕನ್ನಡ ಜಿಲ್ಲೆಯಲ್ಲಿ ಇಂದು 40 ಕೋವಿಡ್- 19 ಪ್ರಕರಣಗಳು ಪತ್ತೆಯಾಗಿದ್ದು, ಈ ಮಧ್ಯೆ ಏಳು ಮಂದಿ ಸೋಂಕಿನಿಂದ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.

Karwar
ಕಾರವಾರ
author img

By

Published : Jun 30, 2020, 9:32 PM IST

ಕಾರವಾರ: ಉತ್ತರಕನ್ನಡ ಜಿಲ್ಲೆಯಲ್ಲಿ ಕೊರೊನಾ ಅಟ್ಟಹಾಸ ಮುಂದುವರೆದಿದ್ದು, ಇಂದು 40 ಕೋವಿಡ್- 19 ಪ್ರಕರಣಗಳು ಪತ್ತೆಯಾಗಿ ಜಿಲ್ಲೆಯ ಜನತೆಯನ್ನು ಬೆಚ್ಚಿ ಬೀಳಿಸಿದೆ. ಈ ಮಧ್ಯೆ ಏಳು ಮಂದಿ ಸೋಂಕಿನಿಂದ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.

ಭಟ್ಕಳದಲ್ಲಿ 21 ಮಂದಿಗೆ ಸೋಂಕು ದೃಢಪಟ್ಟಿದೆ. ಅಂಕೋಲಾದಲ್ಲಿ ಐದು, ದಾಂಡೇಲಿ, ಹಳಿಯಾಳ, ಕುಮಟಾದಲ್ಲಿ ತಲಾ‌‌ ನಾಲ್ಕು, ಮುಂಡಗೋಡದಲ್ಲಿ ಇಬ್ಬರಲ್ಲಿ ಪ್ರಕರಣ ಪತ್ತೆಯಾಗಿದೆ. ಭಟ್ಕಳದಲ್ಲಿ ಒಂದು ವರ್ಷದ ಮಗುವಿಗೆ, 12, 15, 24, 18, 15 ವರ್ಷದ ಯುವಕರು, 51, 58, 43, 39, 58, 39, 60, 48, 55 ವರ್ಷದ ಪುರುಷರು, 32, 43, 46 ವರ್ಷದ ಮಹಿಳೆಯರು, 7, 14, 16, 13 ವರ್ಷದ ಬಾಲಕಿಯರು, ಅಂಕೋಲಾದ 49, 72, 33 ವರ್ಷದ ಪುರುಷರು, 65 ವರ್ಷದ ಮಹಿಳೆ, 25 ವರ್ಷದ ಯುವಕ, ದಾಂಡೇಲಿಯ 21 ವರ್ಷದ ಯುವತಿ, ನಾಲ್ಕು ವರ್ಷದ ಬಾಲಕಿ, 48 ವರ್ಷದ ಪುರುಷ, 51 ವರ್ಷದ ಮಹಿಳೆಗೆ ಸೋಂಕು ಪತ್ತೆಯಾಗಿದೆ.

ಉತ್ತರಕನ್ನಡ ಜಿಲ್ಲೆಯಲ್ಲಿ ಇಂದು ಗರಿಷ್ಠ 40 ಕೋವಿಡ್- 19 ಪ್ರಕರಣಗಳು ಪತ್ತೆಯಾಗಿದೆ.

ಇನ್ನು ಹಳಿಯಾಳದ 76 ವರ್ಷದ ಪುರುಷ, 72 ವರ್ಷದ ಮಹಿಳೆ, 28 ವರ್ಷದ ಯುವತಿ, 12 ವರ್ಷದ ಯುವತಿ, ಕುಮಟಾದ ಏಳು, 16 ವರ್ಷದ ಬಾಲಕ, 27 ವರ್ಷದ ಯುವತಿ, 35 ವರ್ಷದ ಮಹಿಳೆ, ಮುಂಡಗೋಡದ ಟಿಬೆಟಿಯನ್ ಕ್ಯಾಂಪ್​ನ 12 ವರ್ಷದ ಬಾಲಕ, 17 ವರ್ಷದ ಯುವತಿಗೆ ಸೋಂಕು ದೃಢಪಟ್ಟಿದೆ. ಹೆಚ್ಚಿನ ಪ್ರಕರಣಗಳಲ್ಲಿ ಸೋಂಕಿತರ ಸಂಪರ್ಕಕ್ಕೆ ಬಂದವರಿಗೆ ಸೋಂಕು ತಗುಲಿದೆ. ಹಾಗೂ ಒಂದೇ ಕುಟುಂಬದ ನಾಲ್ಕೈದು ಮಂದಿಗೆ ಸೋಂಕು ದೃಢಪಟ್ಟಿದೆ.

ಈ ಮಧ್ಯೆ ಕಾರವಾರ ವೈದ್ಯಕೀಯ ಮಹಾವಿದ್ಯಾಲಯದ ಕೋವಿಡ್ ವಾರ್ಡ್​ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಏಳು ಮಂದಿ ಗುಣಮುಖರಾಗಿದ್ದಾರೆ. ಮುಂಡಗೋಡದ 3, ಹೊನ್ನಾವರದ ಇಬ್ಬರು, ಭಟ್ಕಳ ಹಾಗೂ ಕುಮಟಾದ ತಲಾ ಓರ್ವ ಸೋಂಕಿನಿಂದ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಇದರೊಂದಿಗೆ ಉತ್ತರಕನ್ನಡ ಜಿಲ್ಲೆಯಲ್ಲಿ ಒಟ್ಟು 253 ಸೋಂಕಿತರು ಪತ್ತೆಯಾಗಿದ್ದು, ಅದರಲ್ಲಿ 161 ಮಂದಿ ಗುಣಮುಖರಾಗಿದ್ದಾರೆ. ಇನ್ನು 92 ಮಂದಿಗೆ ಚಿಕಿತ್ಸೆ ಮುಂದುವರೆದಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.