ಕಾರವಾರ (ಉ.ಕ): ಸಫಾರಿಗೆ ತೆರಳಿದವರಿಗೆ ಹುಲಿಯೊಂದು ದರ್ಶನ ನೀಡಿದೆ. ದಾಂಡೇಲಿ ಸಮೀಪದ ಕುಳಗಿ - ಪಣಸೋಲಿ ಅರಣ್ಯ ಪ್ರದೇಶದಲ್ಲಿ ಸಫಾರಿಗೆ ತೆರಳಿದ್ದ ಮಂದಿಗೆ ಅದೃಷ್ಟ ಎಂಬಂತೆ ಹುಲಿಯೊಂದು ಕಾಣ ಸಿಕ್ಕಿದೆ.
ರಸ್ತೆ ದಾಟಲು ಸಿದ್ದಗೊಂಡು ರಸ್ತೆಯ ಬದಿಯಲ್ಲಿ ಕುಳಿತಿದ್ದ ಹುಲಿ ಕಂಡು ಪ್ರವಾಸಿಗರು ಥ್ರಿಲ್ ಆಗಿದ್ದಾರೆ. ಈ ದೃಶ್ಯವನ್ನ ಪ್ರವಾಸಿಗರೊಬ್ಬರು ತಮ್ಮ ಮೊಬೈಲ್ ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದಾರೆ.