ETV Bharat / state

ಮುರುಡೇಶ್ವರ ಸಮುದ್ರದಲ್ಲಿ ಕೊಚ್ಚಿ ಹೋಗುತ್ತಿದ್ದ ಮೂವರು ಪ್ರವಾಸಿಗರ ರಕ್ಷಣೆ - ಭಟ್ಕಳ

ಈ ವೇಳೆ 13 ಜನರ ತಂಡದಲ್ಲಿದ್ದ ನಾಲ್ವರು ಯುವಕರು ಸಮುದ್ರದ ಅಲೆಗೆ ಕೊಚ್ಚಿ ಹೋಗಿದ್ದಾರೆ. ನಂತರ ಓರ್ವ ಈಜಿಕೊಂಡು ದಡಕ್ಕೆ ಬಂದಿದ್ದು, ಮತ್ತೆ ಮೂವರನ್ನು ಅಲ್ಲಿನ ಬೀಚ್ ಮೇಲ್ವಿಚಾರಕ ಹಾಗೂ ಲೈಫ್ ಗಾರ್ಡ್ ಅಡ್ವೆಂಚರ್ಸ್ ಬೋಟ್ ಮೂಲಕ ರಕ್ಷಣೆ ಮಾಡಿದ್ದಾರೆ..

three tourist rescued
ಸಮುದ್ರದಲ್ಲಿ ಕೊಚ್ಚಿ ಹೋಗುತ್ತಿದ್ದ ಮೂವರು ಪ್ರವಾಸಿಗರ ರಕ್ಷಣೆ
author img

By

Published : Oct 15, 2021, 8:54 PM IST

ಭಟ್ಕಳ : ಸಮುದ್ರದ ಅಲೆಗೆ ಕೊಚ್ಚಿ ಹೋಗುತ್ತಿದ್ದ ಮೂವರು ಪ್ರವಾಸಿಗರನ್ನು ಲೈಫ್ ಗಾರ್ಡ್ ಸಿಬ್ಬಂದಿ ರಕ್ಷಣೆ ಮಾಡಿರುವ ಘಟನೆ ಮುರುಡೇಶ್ವರ ಕಡಲ ತೀರದಲ್ಲಿ ಶುಕ್ರವಾರ ಸಂಜೆ ನಡೆದಿದೆ.

ಸಮುದ್ರದಲ್ಲಿ ಕೊಚ್ಚಿ ಹೋಗುತ್ತಿದ್ದ ಮೂವರು ಪ್ರವಾಸಿಗರ ರಕ್ಷಣೆ

ಲಾಕ್​​ಡೌನ್​​ ತೆರವು ಬಳಿಕ ಮುರುಡೇಶ್ವರಕ್ಕೆ ಬರುವ ಪ್ರವಾಸಿಗರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗಿದೆ. ಹೀಗೆ ಪ್ರವಾಸಕ್ಕೆಂದು ಶಿವಮೊಗ್ಗದಿಂದ ಬಂದ 13 ಜನರ ತಂಡ ಧರ್ಮಸ್ಥಳ, ಕೊಲ್ಲೂರು ಹಾಗೂ ವಿವಿಧ ಪ್ರವಾಸಿ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಶುಕ್ರವಾರ ಮುರುಡೇಶ್ವರಕ್ಕೆ ಬಂದಿದ್ದು, ಶಿವನ ದರ್ಶನ ಪಡೆದ ಬಳಿಕ ಮೋಜು-ಮಸ್ತಿಗೆ ಸಮುದ್ರಕ್ಕಿಳಿದಿದ್ದಾರೆ.

three tourist rescued
ಸಮುದ್ರದಲ್ಲಿ ಕೊಚ್ಚಿ ಹೋಗುತ್ತಿದ್ದ ಮೂವರು ಪ್ರವಾಸಿಗರ ರಕ್ಷಣೆ..

ಈ ವೇಳೆ 13 ಜನರ ತಂಡದಲ್ಲಿದ್ದ ನಾಲ್ವರು ಯುವಕರು ಸಮುದ್ರದ ಅಲೆಗೆ ಕೊಚ್ಚಿ ಹೋಗಿದ್ದಾರೆ. ನಂತರ ಓರ್ವ ಈಜಿಕೊಂಡು ದಡಕ್ಕೆ ಬಂದಿದ್ದು, ಮತ್ತೆ ಮೂವರನ್ನು ಅಲ್ಲಿನ ಬೀಚ್ ಮೇಲ್ವಿಚಾರಕ ಹಾಗೂ ಲೈಫ್ ಗಾರ್ಡ್ ಅಡ್ವೆಂಚರ್ಸ್ ಬೋಟ್ ಮೂಲಕ ರಕ್ಷಣೆ ಮಾಡಿದ್ದಾರೆ.

ಲೈಫ್​​ ಗಾರ್ಡ್​ಗಳ ಸಮಯ ಪ್ರಜ್ಞೆಯಿಂದ ಮೂವರು ಯುವಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇವರ ಕಾರ್ಯಕ್ಕೆ ಪ್ರವಾಸಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ರಕ್ಷಣಾ ಕಾರ್ಯಾಚರಣೆಯಲ್ಲಿ ಬೀಚ್ ಮೇಲ್ವಿಚಾರಕ ದತ್ತಾತ್ರೇಯ ಶೆಟ್ಟಿ, ಲೈಫ್​​ ಗಾರ್ಡ್​ಗಳಾದ ಕೇಶವ, ಹನುಮಂತ, ವಿಘ್ನೇಶ್ವರ್, ರಾಮಚಂದ್ರ ಹಾಗೂ ಜಯರಾಮ ಭಾಗಿಯಾಗಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.