ETV Bharat / state

ಶಿರಸಿ-ಕುಮಟಾ ರಸ್ತೆಗೆ ಸಾವಿರಾರು ಮರಗಳ ಮಾರಣಹೋಮ: ಪರಿಸರ ಪ್ರೇಮಿಗಳ ಆಕ್ಷೇಪ

author img

By

Published : Oct 15, 2020, 2:21 PM IST

ಶಿರಸಿ- ಕುಮಟಾ ರಾಜ್ಯ ಹೆದ್ದಾರಿ 69 ಈಗ ಭಾರತಮಾಲಾ ಯೋಜನೆಯ ಅಡಿಯಲ್ಲಿ ರಾಷ್ಟ್ರೀಯ ಹೆದ್ದಾರಿಯಾಗಿ ಪರಿವರ್ತನೆಯಾಗುತ್ತಿದೆ. ಇದರ ಕಾಮಗಾರಿಗೆ ಸುಮಾರು 10 ಸಾವಿರಕ್ಕೂ ಅಧಿಕ ಮರಗಳು ತೆರವಾಗಲಿವೆ ಎಂದು ಅಂದಾಜಿಸಲಾಗಿದೆ.

Thousands of trees die on Shirasi-Kumata road development
ಶಿರಸಿ-ಕುಮಟಾ ರಸ್ತೆ ಅಭಿವೃದ್ಧಿಗೆ ಸಾವಿರಾರು ಮರಗಳ ಮಾರಣಹೋಮ

ಶಿರಸಿ: ಉತ್ತರ ಕನ್ನಡ ಜಿಲ್ಲೆಯ ಬಹುದಿನಗಳ ಬೇಡಿಕೆಯಾಗಿರುವ ಶಿರಸಿ- ಕುಮಟಾ ರಸ್ತೆಯ ಅಭಿವೃದ್ಧಿ ಕಾರ್ಯ ಶೀಘ್ರದಲ್ಲಿ ಆರಂಭವಾಗಲಿದೆ. ಈ ಕಾಮಗಾರಿಯ ಸಂದರ್ಭದಲ್ಲಿ ರಸ್ತೆಯ ಇಕ್ಕೆಲಗಳಲ್ಲಿರುವ 10 ಸಾವಿರಕ್ಕೂ ಅಧಿಕ ಮರಗಳ ಕಡಿಯಲಾಗುತ್ತದೆ ಎಂದು ಅಂದಾಜಿಸಲಾಗಿದ್ದು, ಕಟಾವಿಗಾಗಿ ಮರಗಳಿಗೆ ಸಂಖ್ಯೆ ನಮೂದಿಸಲಾಗಿದೆ.

ಶಿರಸಿ- ಕುಮಟಾ ರಾಜ್ಯ ಹೆದ್ದಾರಿ 69, ಈಗ ಭಾರತಮಾಲಾ ಯೋಜನೆ ಅಡಿಯಲ್ಲಿ ರಾಷ್ಟ್ರೀಯ ಹೆದ್ದಾರಿಯಾಗಿ ಪರಿವರ್ತನೆಯಾಗುತ್ತಿದೆ. ಈ ಹಿಂದಿದ್ದ 10 ಮೀ. ಅಗಲದ ರಸ್ತೆ ಇನ್ನು 18 ಮೀಟರ್‌ಗೆ ವಿಸ್ತಾರಗೊಳ್ಳಲಿದೆ. ಈ ಕಾಮಗಾರಿ ಆರಂಭಿಸುವ ಸಲುವಾಗಿ ರಸ್ತೆಯಲ್ಲಿ ವಾಹನ ಸಂಚಾರ ಸ್ಥಗಿತಗೊಳಿಸುವಂತೆ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.

ರಸ್ತೆ ಕಾಮಗಾರಿ ಮೊದಲ ಹಂತವಾಗಿ ರಸ್ತೆ ಬದಿಯ ಈ ಮರಗಳನ್ನು ತೆರವುಗೊಳಿಸುವ ಕಾರ್ಯ ಆರಂಭಗೊಳ್ಳಲಿದೆ. ಈಗಾಗಲೇ ಇದಕ್ಕೆ ಅರಣ್ಯ ಇಲಾಖೆಯ ಅನುಮತಿಯೂ ದೊರಕಿದ್ದು, ಅಂದಾಜು 10 ಸಾವಿರಕ್ಕೂ ಅಧಿಕ ಮರಗಳಿಗೆ ಕೊಡಲಿ ಏಟು ಬೀಳಲಿದೆ ಎಂದು ಅಂದಾಜಿಸಲಾಗಿದೆ.

‌ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕಾಗಿ ಜಾಗ ಬಿಟ್ಟುಕೊಡುವ ಸಲುವಾಗಿ ಪರ- ವಿರೋಧಗಳ ಚರ್ಚೆ ಕೂಡ ಈ ಹಿಂದೆ ನಡೆದಿದೆ. ಮುಖ್ಯವಾಗಿ ಇಲ್ಲಿಯ ಅರಣ್ಯ ಸಂಪತ್ತು ನಾಶವಾಗುವ ಬಗ್ಗೆ ಜಿಲ್ಲೆಯ ಪರಿಸರವಾದಿಗಳು ಆಕ್ಷೇಪ ವ್ಯಕ್ತಪಡಿಸಿದ್ದರು. ಅಂತಿಮವಾಗಿ ಹೆದ್ದಾರಿ ಪ್ರಾಧಿಕಾರಕ್ಕೆ ರಸ್ತೆ ವಿಸ್ತರಣೆ, ನಿರ್ಮಾಣಕ್ಕೆ ಒಪ್ಪಿಗೆ ಲಭಿಸಿದೆ. ಆದರೆ ಕತ್ತರಿಸುವ ಮರಗಳ ಬದಲಿಗೆ ಹೊಸ ಗಿಡಗಳನ್ನು ನೆಟ್ಟು, ಪರಿಸರ ಅಭಿವೃದ್ಧಿ ಕಾರ್ಯವೂ ಆಗಬೇಕಿದೆ ಎನ್ನುವುದು ಪರಿಸರ ಪ್ರೇಮಿಗಳ ಬೇಡಿಕೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.