ETV Bharat / state

ಕಡಲತೀರಗಳಲ್ಲಿ ಅಪಾಯಕ್ಕೆ ಸಿಲುಕುವ ಪ್ರವಾಸಿಗರ ಜೀವಕ್ಕಿಲ್ಲ ರಕ್ಷಣೆ.. 'ಲೈಪ್​​​ ಗಾರ್ಡ್‌ಗಳು ಗೈರು' - ಕಾರವಾರ ಕಡಲತೀರಗಳಲ್ಲಿ ಲೈಪ್​​​ ಗಾರ್ಡ್ ಸಮಸ್ಯೆ

ಕಡಲತೀರಗಳಲ್ಲಿ ಲೈಫ್‌ಗಾರ್ಡ್‌ಗಳು ನೇಮಕವಾದ ಬಳಿಕ ಪ್ರವಾಸಿಗರು ನೀರಲ್ಲಿ ಮುಳುಗಿ ಸಾವನ್ನಪ್ಪುತ್ತಿದ್ದ ಪ್ರಕರಣ ಸಂಪೂರ್ಣ ಕಡಿಮೆಯಾಗಿದ್ದವು. ಆದ್ರೆ, ಇದೀಗ ವೇತನ ಹೆಚ್ಚಿಸುವಂತೆ ಪ್ರತಿಭಟನೆ ನಡೆಸಿದ ಲೈಫಗಾರ್ಡ್‌ಗಳು ಸದ್ಯ ಕರ್ತವ್ಯಕ್ಕೆ ಗೈರಾಗುತ್ತಿದ್ದಾರೆ..

there-is-no-lifeguard-to-save-tourist-life-in-karwar-beaches
ಲೈಪ್​​​ ಗಾರ್ಡ್
author img

By

Published : Jan 10, 2021, 5:32 PM IST

ಕಾರವಾರ : ಲಾಕ್‌ಡೌನ್ ತೆರವುಗೊಂಡ ಬಳಿಕ ಕರಾವಳಿ ಕಡಲತೀರಗಳತ್ತ ಪ್ರವಾಸಿಗರ ದಂಡು ಹರಿದು ಬರುತ್ತಿದೆ. ಬೀಚ್​ಗಳು ತುಂಬಿ ತುಳುಕುತ್ತಿವೆ. ಆದರೆ, ಕಡಲತೀರಗಳಲ್ಲಿ ಮೊದಲಿದ್ದಂತೆ ಯಾವುದೇ ಸುರಕ್ಷತೆ ಇಲ್ಲದಿರೋದು ಪ್ರವಾಸಿಗರ ಪ್ರಾಣಕ್ಕೆ ಕಂಟಕವಾಗಿದೆ.

ಕೊರೊನಾ ಸಂದರ್ಭದಲ್ಲಿ ನಾಲ್ಕೈದು ತಿಂಗಳು ಪ್ರವಾಸಿಗರಿಲ್ಲದೇ ಬಿಕೋ ಎನ್ನುತ್ತಿದ್ದ ಕಡಲತೀರಗಳಲ್ಲಿ ಇದೀಗ ಪ್ರವಾಸಿಗರ ಕಲರವ ಶುರುವಾಗಿದೆ. ಮೊದಲಿನಂತೆ ಪ್ರವಾಸಿ ತಾಣಗಳು ರಂಗು ಪಡೆದುಕೊಳ್ಳುತ್ತಿವೆ.

ಕಾರವಾರ, ಗೋಕರ್ಣ, ಮುರ್ಡೇಶ್ವರ, ಹೊನ್ನಾವರ ಭಾಗಗಳ ಕಡಲತೀರಗಳಿಗೆ ಇದೀಗ ಪ್ರವಾಸಿಗರು ಭೇಟಿ ನೀಡುತ್ತಿದ್ದು, ಪ್ರವಾಸಿಗರ ಮೇಲೆ ಅವಲಂಭಿಸಿದ್ದ ಹೋಟೆಲ್, ರೆಸ್ಟೋರೆಂಟ್‌ಗಳಿಗೆ ಜೀವ ಬಂದಂತಾಗಿದೆ.

ಕಡಲತೀರಗಳತ್ತಲ್ಲಿ ಅಪಾಯಕ್ಕೆ ಸಿಲುಕುವ ಪ್ರವಾಸಿಗರ ಜೀವಕ್ಕಿಲ್ಲ ರಕ್ಷಣೆ..

ಈ ಹಿಂದೆ ಪ್ರವಾಸಿಗರ ಸುರಕ್ಷತೆಯ ದೃಷ್ಟಿಯಿಂದ ಕಡಲತೀರಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದ ಲೈಫ್‌ಗಾರ್ಡ್ ಸಿಬ್ಬಂದಿ ಕಳೆದ ಕೆಲ ತಿಂಗಳಿಂದ ಕೆಲಸಕ್ಕೆ ಆಗಮಿಸುತ್ತಿಲ್ಲ. ಕಡಲತೀರದಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಳವಾಗುತ್ತಿರುವ ಜೊತೆಗೆ ಅಪಾಯಕ್ಕೆ ಸಿಲುಕುವವರ ಸಂಖ್ಯೆಯೂ ಅಧಿಕವಾಗಿದೆ. ಇದರಿಂದ ಈ ಕೂಡಲೇ ಜೀವ ರಕ್ಷಕರನ್ನು ನಿಯೋಜಿಸುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.

ಓದಿ-ಕಾಂಗ್ರೆಸ್​ನ ಈ ಹೀನಾಯ ಸ್ಥಿತಿಗೆ ಮೂರು ಶಾಪ ಕಾರಣ: ಕಟೀಲ್

ಈ ಮೊದಲು ಜಿಲ್ಲೆಯ ರವೀಂದ್ರನಾಥ ಠಾಗೋರ್ ಕಡಲತೀರ, ಗೋಕರ್ಣ ಬೀಚ್, ಓಂ ಬೀಚ್, ಕುಡ್ಲೆ ಬೀಚ್, ಮುರ್ಡೇಶ್ವರ ಹಾಗೂ ಹೊನ್ನಾವರದ ಕಡಲತೀರಗಳಲ್ಲಿ ಜಿಲ್ಲಾಡಳಿತ ಲೈಫ್‌ಗಾರ್ಡ್‌ಗಳನ್ನು ನಿಯೋಜಿಸಿತ್ತು.

ಕಡಲತೀರಗಳಲ್ಲಿ ಲೈಫ್‌ಗಾರ್ಡ್‌ಗಳು ನೇಮಕವಾದ ಬಳಿಕ ಪ್ರವಾಸಿಗರು ನೀರಲ್ಲಿ ಮುಳುಗಿ ಸಾವನ್ನಪ್ಪುತ್ತಿದ್ದ ಪ್ರಕರಣಗಳು ಸಂಪೂರ್ಣ ಕಡಿಮೆಯಾಗಿದ್ದವು. ಆದ್ರೆ, ಇದೀಗ ವೇತನ ಹೆಚ್ಚಿಸುವಂತೆ ಪ್ರತಿಭಟನೆ ನಡೆಸಿದ ಲೈಫಗಾರ್ಡ್‌ಗಳು ಸದ್ಯ ಕರ್ತವ್ಯಕ್ಕೆ ಗೈರಾಗುತ್ತಿದ್ದಾರೆ. ಇದರಿಂದ ಕಳೆದ 15 ದಿನಗಳ ಅಂತರದಲ್ಲಿ ನಾಲ್ಕೈದು ಮಂದಿ ಪ್ರವಾಸಿಗರು ಸಾವನ್ನಪ್ಪುವಂತಾಗಿದೆ.

ವಾರದ ಹಿಂದೆ ಗೋಕರ್ಣದಲ್ಲಿ ಅಪಾಯಕ್ಕೆ ಸಿಲುಕಿದ್ದ ಓರ್ವ ಸಾವನ್ನಪ್ಪಿದ್ದು, ನಾಲ್ವರನ್ನು ಸ್ಥಳೀಯರು ರಕ್ಷಣೆ ಮಾಡಿದ್ದಾರೆ. ಹೀಗಾಗಿ, ಆದಷ್ಟು ಬೇಗ ಲೈಫ್‌ಗಾರ್ಡ್ ನೇಮಿಸಿ ಅನ್ನೋದು ಸ್ಥಳೀಯರ ಒತ್ತಾಯ. ಇನ್ನು, ಈ ಬಗ್ಗೆ ಜಿಲ್ಲಾಧಿಕಾರಿಗಳನ್ನು ಕೇಳಿದ್ರೆ ಲೈಫ್ ಗಾರ್ಡ್ ಹೆಚ್ಚಿನ ಸಂಬಳಕ್ಕಾಗಿ ಆಗ್ರಹಿಸುತ್ತಿದ್ದಾರೆ. ಆದರೆ, ಅವರ ನೇಮಕ ಪ್ರವಾಸಿಗರನ್ನು ಅವಲಂಬಿಸಿತ್ತು.

ಕೊರೊನಾ‌ದಿಂದಾಗಿ ಯಾವುದೇ ಜಲಕ್ರೀಡೆಗಳು ನಡೆಯದ ಕಾರಣ ಆದಾಯ ಕೂಡ ಇರಲಿಲ್ಲ. ಆದರೂ ಕೋವಿಡ್ ಸಂದರ್ಭದಲ್ಲಿ ಅವರಿಗೆ ವೇತನ ನೀಡಲಾಗಿದೆ. ಆದರೆ, ಇದೀಗ ಹೆಚ್ಚಿನ‌ ಸಂಬಳ ನೀಡಲು ಸಾಧ್ಯವಾಗುತ್ತಿಲ್ಲ. ಲೈಫಗಾರ್ಡ್​ಗಳು ಬಾರದೆ ಇದ್ದಲ್ಲಿ ಬೇರೆಯವರನ್ನು ನೇಮಕ ಮಾಡುವುದಾಗಿ ತಿಳಿಸಿದ್ದಾರೆ.

ಕರಾವಳಿಯ ಕಡಲತೀರಗಳತ್ತ ಪ್ರವಾಸಿಗರ ದಂಡೇ ಹರಿದು ಬರುತ್ತಿದೆ. ಅರಿವಿಲ್ಲದೆ ಆಳ ಸಮುದ್ರದತ್ತ ತೆರಳಿ ಅಪಾಯಕ್ಕೆ ಸಿಲುಕುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ನೆರವಿಗೆ ಧಾವಿಸುತ್ತಿದ್ದ ಲೈಫ್‌ಗಾರ್ಡ್ ಸಿಬ್ಬಂದಿ ಇಲ್ಲದಿರುವುದು ಅಪಾಯಕಾರಿಯಾಗಿ ಪರಿಣಮಿಸಿದೆ. ಜಿಲ್ಲಾಡಳಿತ ಆದಷ್ಟು ಬೇಗ ಜೀವರಕ್ಷರನ್ನ ನಿಯೋಜಿಸಬೇಕಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.