ETV Bharat / state

ಮರಳಿ ಮನೆ ಸೇರಲು ಕಾರ್ಮಿಕರ ಹಂಬಲ: ಅರ್ಜಿ ತುಂಬಲು ಪರದಾಟ - ವಲಸೆ ಕಾರ್ಮಿಕರಿಗೆ ಸೇವಾಸಿಂಧು ಯೋಜನೆ

ಮೂರನೇ ಹಂತದ ಲಾಕ್​ಡೌನ್​ ಘೋಷಣೆ ನಂತರ ವಲಸೆ ಕಾರ್ಮಿಕರಿಗೆ ಸೇವಾಸಿಂಧು ಯೋಜನೆಯಡಿ ತವರಿಗೆ ತೆರಳಲು ಅನುಮತಿ ನೀಡಲಾಗಿದೆ. ಇದರಿಂದ ಮನೆಗೆ ತೆರಳಲು ಕಾತುರದಿಂದ ಕಾಯುತ್ತಿರುವ ಕಾರ್ಮಿಕರು ಅರ್ಜಿ ಸಲ್ಲಿಕೆಗಾಗಿ ಮುಗಿಬಿದ್ದಿದ್ದಾರೆ.

Crowd to fill the application
ಅರ್ಜಿ ತುಂಬಲು ಸಾಲುಗಟ್ಟಿರುವ ಜನರು
author img

By

Published : May 4, 2020, 4:34 PM IST

ಕಾರವಾರ: ಹೊರ ರಾಜ್ಯದಿಂದ ಹೊಟ್ಟೆಪಾಡಿಗಾಗಿ ಇತರೆಡೆಗೆ ಬಂದು ಲಾಕ್​ಡೌನ್ ನಿಂದಾಗಿ ಕೆಲಸ ಕಾರ್ಯವಿಲ್ಲದೇ ಸಂಕಷ್ಟಕ್ಕೆ ಸಿಲಕಿದ್ದ ಕಾರ್ಮಿಕರಿಗೆ ಊರಿಗೆ ವಾಪಸಾಗಲು ಸರ್ಕಾರ ಅನುಮತಿ ನೀಡಿದೆ. ಇದಕ್ಕಾಗಿ ಸೇವಾಸಿಂಧು ವೆಬ್​ಸೈಟ್​ ಸಹ ಕಾರ್ಯಾರಂಭಗೊಳಿಸಿದೆ. ಹೀಗಾಗಿಯೇ ಅರ್ಜಿ ಸಲ್ಲಿಕೆಗೆ ವಲಸಿಗರು ಮುಗ್ಗಿಬಿದ್ದಿದ್ದಾರೆ‌.

ಅರ್ಜಿ ತುಂಬಲು ಸಾಲುಗಟ್ಟಿರುವ ಜನರು

ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಬೆಳಗ್ಗೆಯಿಂದಲೇ ನೂರಾರು ಮಂದಿ ಹೊರ ರಾಜ್ಯದ ಕಾರ್ಮಿಕರು ಅರ್ಜಿ ಸಲ್ಲಿಕೆಗಾಗಿ ಕಾದು ನಿಂತಿದ್ದಾರೆ. ಮೂರನೇಯ ಹಂತದ ಲಾಕ್‌ಡೌನ್ ಅವಧಿಯಲ್ಲಿ ಹೊರ ರಾಜ್ಯಕ್ಕೆ ವಾಪಸ್​ ಆಗುವ ಕಾರ್ಮಿಕರಿಗೆ ಸೇವಾಸಿಂಧು ಯೋಜನೆಯಡಿಯಲ್ಲಿ ಅರ್ಜಿ ಸಲ್ಲಿಸಲು ಸೂಚನೆ ನೀಡಿದೆ. ಆನ್‌ಲೈನ್ ಮೂಲಕ ನೋಂದಾಯಿಸಿಕೊಂಡ ಕಾರ್ಮಿಕರಿಗೆ ತಮ್ಮ ರಾಜ್ಯಕ್ಕೆ ವಾಪಸ್​​ ಆಗಲು ಅವಕಾಶ ನೀಡುತ್ತಿರುವ ಹಿನ್ನೆಲೆ, ಜನರು ಆನ್​ಲೈನ್​ ಅರ್ಜಿ ತುಂಬುವ ಸಲುವಾಗಿ ಸಾಲುಗಟ್ಟಿ ನಿಂತಿದ್ದಾರೆ.

ಮನೆಗೆ ತೆರಳುವ ಆತುರದಲ್ಲಿರುವ ಸಾಕಷ್ಟು ಮಂದಿ ಕಾರ್ಮಿಕರು, ಆನ್‌ಲೈನ್ ನೋಂದಣಿಗಾಗಿ ಜಿಲ್ಲಾಧಿಕಾರಿ ಕಚೇರಿ ಎದುರು ಯಾವುದೇ ಸಾಮಾಜಿಕ ಅಂತರವಿಲ್ಲದೇ ಕ್ಯೂನಲ್ಲಿ ನಿಂತಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.