ಕಾರವಾರ: ಸಿದ್ದರಾಮಯ್ಯನವರು ಹಿಂದಿನಿಂದಲೂ ಸಿಎಂ ಬದಲಾವಣೆ ಆಗುವುದಾಗಿ ಹೇಳ್ತಾನೆ ಇದ್ದಾರೆ. ಇನ್ನೂ ಎರಡು ವರ್ಷ ಅವರು ಹಾಗೇ ಹೇಳಲಿದ್ದಾರೆ. ಆದರೆ ಬಿಜೆಪಿ ಮಾತ್ರ ಮುಂದಿನ ಚುನಾವಣೆಯನ್ನು ಕೂಡ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ನೇತೃತ್ವದಲ್ಲಿಯೇ ಎದುರಿಸಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ್ ಹೆಬ್ಬಾರ್ ಹೇಳಿದರು.
ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಬದಲಾವಣೆ ಯಾವುದೇ ಕಾರಣಕ್ಕೂ ಇಲ್ಲ. ಮುಂದಿನ ಚುನಾವಣೆಯನ್ನು ಬಿ.ಎಸ್. ಯಡಿಯೂರಪ್ಪ ಅವರ ನೇತೃತ್ವದಲ್ಲಿಯೇ ಎದುರಿಸಲಿದ್ದೇವೆ ಎಂದು ಹೇಳಿದರು.
ಸಚಿವ ಸಿ.ಪಿ. ಯೋಗೀಶ್ವರ್ ಹೇಳಿಕೆಗೆ ನನ್ನ ಸಹಮತವಿಲ್ಲ. ಓರ್ವ ಸಚಿವ ಸಂಪುಟದ ಸದಸ್ಯನಾಗಿ ಮುಖ್ಯಮಂತ್ರಿ ಬಗ್ಗೆ ಈ ರೀತಿ ಹೇಳುವುದು ಶೋಭೆ ತರುವಂತದಲ್ಲ. ಮುಖ್ಯಮಂತ್ರಿ ಬದಲಾವಣೆ ಕುರಿತು ಇತರರು ಚರ್ಚೆ ಮಾಡಿದ್ದಾಗಿ ಸಚಿವ ಅಶೋಕ್ ಹೇಳಿದ್ದಾರೆ ವಿನಃ ಮುಖ್ಯಮಂತ್ರಿ ಬದಲಾವಣೆ ಮಾಡುತ್ತೇವೆ ಎಂದು ಎಲ್ಲಿಯೂ ಹೇಳಿಲ್ಲ ಎಂದು ಸಚಿವ ಶಿವರಾಮ್ ಹೆಬ್ಬಾರ್ ಸ್ಪಷ್ಟಪಡಿಸಿದರು.
ಸೋಂಕಿತರ ನೆರವಿಗೆ ಹೆಬ್ಬಾರ್ ಕೋವಿಡ್ ಕೇರ್ ಕಿಟ್
ಕೋವಿಡ್ ಪತ್ತೆಯಾದ ಸೋಂಕಿತರಿಗೆ ಹಾಗೂ ಶಂಕಿತರಿಗೆ ತಕ್ಷಣ ಔಷಧಿಗಳನ್ನು ಹಾಗೂ ರೋಗ ನಿರೋಧಕ ಮಾತ್ರೆಗಳನ್ನು ಒದಗಿಸಿ ರೋಗ ಹರಡದಂತೆ ತಡೆಯಲು ಕಿಟ್ ಸಿದ್ದಪಡಿಸಿದ್ದಾರೆ. ಹ್ಯಾಂಡ್ ಸ್ಯಾನಿಟೈಸರ್, ಮಾಸ್ಕ್, ಜಿಂಕ್ ವಿಟವಿನ್ ಸೇರಿದಂತೆ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಮಾತ್ರೆಗಳನ್ನೊಳಗೊಂಡ ಮಾಹಿತಿ ಪತ್ರವನ್ನು ಕಿಟ್ನಲ್ಲಿ ನೀಡಿದ್ದಾರೆ. ಇಂದು ಮುಂಡಗೋಡ ಭಾಗದ ಜನರಿಗೆ ಅನುಕೂಲವಾಗುವಂತೆ 37 ಸಾವಿರ ರೂ. ವೆಚ್ಚದ ಸುಮಾರು 5 ಸಾವಿರ ಕಿಟ್ಗಳನ್ನು ಆರೋಗ್ಯ ಇಲಾಖೆ ಮೂಲಕ ನೀಡಲು ಮುಂದಾಗಿದ್ದಾರೆ. ಅಲ್ಲದೆ ಇನ್ನು ಅವಶ್ಯವಿರುವ 7 ಸಾವಿರ ಕಿಟ್ಗಳನ್ನು ಸದ್ಯದಲ್ಲಿಯೇ ಒದಗಿಸುವುದಾಗಿ ಹೆಬ್ಬಾರ್ ತಿಳಿಸಿದ್ದಾರೆ.