ETV Bharat / state

ಬ್ಯಾಂಕ್​ಗಳಿಗೆ ಇನ್ನೂ  ಬಿಡುಗಡೆಯಾಗಿಲ್ಲ ಸಾಲಮನ್ನಾ ಯೋಜನೆ ಅನುದಾನ..! - shirasi latest news

ಸಮ್ಮಿಶ್ರ ಸರ್ಕಾರದ ಸಾಲಮನ್ನಾ ಯೋಜನೆ ಘೋಷಣೆಯಾಗಿ ಒಂದು ವರ್ಷವೇ ಕಳೆದರೂ ಇನ್ನೂ ಸಹ ಡಿಸಿಸಿ ಬ್ಯಾಂಕ್ ಗಳಿಗೆ ಅನುದಾನ ಬಿಡುಗಡೆಯಾಗಬೇಕಿದೆ.

ಬ್ಯಾಂಕ್​
author img

By

Published : Sep 28, 2019, 9:43 PM IST

ಶಿರಸಿ : ಕಳೆದ ಸಮ್ಮಿಶ್ರ ಸರ್ಕಾರದ ಸಾಲಮನ್ನಾ ಯೋಜನೆ ಘೋಷಣೆಯಾಗಿ ಒಂದು ವರ್ಷವೇ ಕಳೆದರೂ ಇನ್ನೂ ಸಹ ಡಿಸಿಸಿ ಬ್ಯಾಂಕ್ ಗಳಿಗೆ ಅನುದಾನ ಬಿಡುಗಡೆಯಾಗಬೇಕಿದೆ. ಸುಮಾರು 20 ಸಾವಿರ ರೈತರಿಂದ ಸುಮಾರು 180 ಕೋಟಿ ರೂ. ಮೊತ್ತ ಬಾಕಿಯಿದೆ.

ಅನುದಾನ ಬಗ್ಗೆ ಮಾಹಿತಿ ನೀಡಿದ ಅಪೆಕ್ಸ್ ಬ್ಯಾಂಕ್ ಪ್ರತಿನಿಧಿ ಶಿವರಾಮ್ ಹೆಬ್ಬಾರ್

ಉತ್ತರ ಕನ್ನಡ ಜಿಲ್ಲೆಯಿಂದ 86,815 ರೈತರು ಸಾಲಮನ್ನಾ ಯೋಜನೆ ಅರ್ಹರಾಗಿದ್ದು, 521.25 ಕೋಟಿ ರೂ. ಹಣ ಬಿಡುಗಡೆಯಾಗಬೇಕಿದೆ. ಅದರಲ್ಲಿ ಈಗಾಗಲೇ ಸುಮಾರು 68 ಸಾವಿರ ರೈತರಿಂದ 397 ಕೋಟಿ ರೂ. ಬಿಡುಗಡೆಯಾಗಿದ್ದು, 180 ಕೋಟಿ ರೂ.ಗಳಷ್ಟು ಬಾಕಿಯಿದೆ.

ಮೊದಲ ಹಂತದಲ್ಲಿ 1,40,019 ರೈತರಿಂದ 176.78 ಕೋಟಿ, ಎರಡನೇ ಹಂತದಲ್ಲಿ 17,684 ರೈತರಿಂದ 129.94 ಕೋಟಿ ರೂ. ಹಾಗೂ ಮೂರನೇ ಹಂತದಲ್ಲಿ ಅಂದಾಜು 8 ಸಾವಿರ ರೈತರಿಂದ ಸುಮಾರು 69 ಕೋಟಿ ರೂ. ಬಿಡಗಡಯಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಮೊದಲ ಮತ್ತು ಎರಡನೇ ಹಂತದಲ್ಲಿ ಬಿಡುಗಡೆಯಾದ ಅನುದಾನ ದಲ್ಲಿ 1 ಲಕ್ಷಕ್ಕಿಂತ ಕಡಿಮೆ ಸಾಲವನ್ನು ಹೊಂದಿರುವ ಅರ್ಹ ರೈತರಿಗೆ ಹಣವನ್ನು ಖಾತೆಗೆ ಜಮಾ ಮಾಡಲಾಗಿದೆ. ಮೂರನೇ ಹಂತದಲ್ಲಿ ಬಿಡುಗಡೆಯಾದ ಅನುದಾನದಲ್ಲಿ 1 ಲಕ್ಷಕ್ಕಿಂತ ಮೇಲ್ಪಟ್ಟ ಅರ್ಹ ರೈತರಿಗೆ ಹಣ ಜಮಾ ಆಗುತ್ತಿದೆ. ಆದರೆ, ಪೂರ್ಣ ‌ಪ್ರಮಾಣದಲ್ಲಿ ಎಲ್ಲ ರೈತರಿಗೂ ಯೋಜನೆ ಲಾಭ ಸಿಗಲು ಉಳಿದ ಮೊತ್ತ ಬಿಡುಗಡೆಯಾಗಬೇಕಿದೆ.

ಈಗಾಗಲೇ ಮೂರ್ನಾಲ್ಕು ಹಂತಗಳಲ್ಲಿ ಅನುದಾನ ಬಿಡುಗಡೆಯಾಗಿದ್ದು, ಪೂರ್ಣ ಪ್ರಮಾಣದ ಸಾಲಮನ್ನಾ ಮೊತ್ತ ಬಿಡುಗಡೆಯಾಗಬೇಕು ಎಂದು ಅಪೆಕ್ಸ್ ಬ್ಯಾಂಕ್ ಅಧ್ಯಕ್ಷರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗಿದೆ. ಅತೀ ಶೀಘ್ರದಲ್ಲಿ ಬಾಕಿ ಮೊತ್ತ ಬಿಡುಗಡೆಯಾಗುವ ನಿರೀಕ್ಷೆಯಿದೆ ಎನ್ನುತ್ತಾರೆ ಕೆಡಿಸಿಸಿ ಬ್ಯಾಂಕ್ ಅಧಿಕಾರಿಗಳು.

Intro:ಶಿರಸಿ :
ಕಳೆದ ಸಮ್ಮಿಶ್ರ ಸರ್ಕಾರದ ಸಾಲಮನ್ನಾ ಯೋಜನೆ ಘೋಷಣೆಯಾಗಿ ಒಂದು ವರ್ಷವೇ ಕಳೆದರೂ ಇನ್ನೂ ಸಹ ಡಿಸಿಸಿ ಬ್ಯಾಂಕ್ ಗಳಿಗೆ ಅನುದಾನ ಬಿಡುಗಡೆಯಾಗಬೇಕಿದೆ. ಸುಮಾರು ೨೦ ಸಾವಿರ ರೈತರಿಂದ ಸುಮಾರು ೧೮೦ ಕೋಟಿ ರೂ. ಮೊತ್ತ ಬಾಕಿಯಿದೆ.


ಉತ್ತರ ಕನ್ನಡ ಜಿಲ್ಲೆಯಿಂದ ೮೬೮೧೫ ರೈತರು ಸಾಲಮನ್ನಾ ಯೋಜನೆ ಅರ್ಹರಾಗಿದ್ದು, ೫೨೧.೨೫ ಕೋಟಿ ರೂ. ಹಣ ಬಿಡುಗಡೆಯಾಗಬೇಕಿದೆ. ಅದರಲ್ಲಿ ಈಗಾಗಲೇ ಸುಮಾರು ೬೮ ಸಾವಿರ ರೈತರಿಂದ ೩೯೭ ಕೋಟಿ ರೂ. ಬಿಡುಗಡೆಯಾಗಿದ್ದು, ೧೮೦ ಕೋಟಿ ರೂ.ಗಳಷ್ಟು ಬಾಕಿಯಿದೆ.

ಮೊದಲ ಹಂತದಲ್ಲಿ ೪೦೦೧೯ ರೈತರಿಂದ ೧೭೬.೭೮ ಕೋಟಿ, ಎರಡನೇ ಹಂತದಲ್ಲಿ ೧೭೬೮೪ ರೈತರಿಂದ ೧೨೯.೯೪ ಕೋಟಿ ರೂ. ಹಾಗೂ ಮೂರನೇ ಹಂತದಲ್ಲಿ ಅಂದಾಜು ೮ ಸಾವಿರ ರೈತರಿಂದ ಸುಮಾರು ೬೯ ಕೋಟಿ ರೂ. ಬಿಡಗಡಯಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಮೊದಲ ಮತ್ತು ಎರಡನೇ ಹಂತದಲ್ಲಿ ಬಿಡುಗಡೆಯಾದ ಅನುದಾನ ದಲ್ಲಿ ೧ ಲಕ್ಷ ಕ್ಕಿಂತ ಕಡಿಮೆ ಸಾಲವನ್ನು ಹೊಂದಿರುವ ಅರ್ಹ ರೈತರಿಗೆ ಹಣವನ್ನು ಖಾತೆಗೆ ಜಮಾ ಮಾಡಲಾಗಿದೆ. ಮೂರನೇ ಹಂತದಲ್ಲಿ ಬಿಡುಗಡೆಯಾದ ಅನುದಾನದಲ್ಲಿ ೧ ಲಕ್ಷಕ್ಕಿಂತ ಮೇಲ್ಪಟ್ಟ ಅರ್ಹ ರೈತರಿಗೆ ಹಣ ಜಮಾ ಆಗುತ್ತಿದೆ. ಆದರೆ ಪೂರ್ಣ ‌ಪ್ರಮಾಣದಲ್ಲಿ ಎಲ್ಲಾ ರೈತರಿಗೂ ಯೋಜನೆ ಲಾಭ ಸಿಗಲು ಉಳಿದ ಮೊತ್ತ ಬಿಡುಗಡೆಯಾಗಬೇಕಿದೆ.
Body:
'ಈಗಾಗಲೇ ಮೂರ್ನಾಲ್ಕು ಹಂತಗಳಲ್ಲಿ ಅನುದಾನ ಬಿಡುಗಡೆಯಾಗಿದ್ದು, ಪೂರ್ಣ ಪ್ರಮಾಣದ ಸಾಲಮನ್ನಾ ಮೊತ್ತ ಬಿಡುಗಡೆಯಾಗಬೇಕು ಎಂದು ಅಪೆಕ್ಸ ಬ್ಯಾಂಕ್ ಅಧ್ಯಕ್ಷರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗಿದೆ. ಅತಿ ಶೀಘ್ರದಲ್ಲಿ ಬಾಕಿ ಮೊತ್ತ ಬಿಡಗಡೆಯಾಗುವ ನಿರೀಕ್ಷೆಯಿದೆ ' ಎನ್ನುತ್ತಾರೆ ಕೆಡಿಸಿಸಿ ಬ್ಯಾಂಕ್ ಅಧಿಕಾರಿಗಳು.

ಬೈಟ್ (೧) : ಶಿವರಾಮ್ ಹೆಬ್ಬಾರ್, ಅಪೆಕ್ಸ ಬ್ಯಾಂಕ್ ಪ್ರತಿನಿಧಿ.
.......‌‌...
ಸಂದೇಶ ಭಟ್ ಶಿರಸಿ.


Conclusion:

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.