ಶಿರಸಿ: ಹಿಂದುಗಳ ಓಲೈಕೆಗೆ ಮುಂದಾಗಿರುವ ಕಾಂಗ್ರೆಸ್ ತಾನೂ ಕೂಡ ರಾಮಮಂದಿರ ಟ್ರಂಪ್ ಕಾರ್ಡ್ ಪ್ಲೇ ಮಾಡಲು ಮುಂದಾಗಿದೆ. ಶಿರಸಿಯಲ್ಲಿ ನಡೆದ ಕಾಂಗ್ರೆಸ್ ಸಭೆಯಲ್ಲಿ ಮಾತನಾಡಿದ ಕಾಂಗ್ರೆಸ್ ಧುರಿಣ ಆರ್.ವಿ. ದೇಶಪಾಂಡೆ ರಾಮಮಂದಿರ ಆಗಲೇ ಬೇಕು. ರಾಮನ ವಿಗ್ರಹ ಇನ್ನೂ ಅಲ್ಲೇ ಇದೆ. ಮಂದಿರ ಆಗಲೇಬೇಕು. ಅಲ್ಪಸಂಖ್ಯಾತರೂ ಹಲವರು ರಾಮನ ಮೇಲೆ ವಿಶ್ವಾಸ ಇಟ್ಟಿದ್ದಾರೆ. ಇದಕ್ಕೆ ಎಲ್ಲರೂ ಸಹಕಾರ ನೀಡಬೇಕೆಂದರು.
ಇದಲ್ಲದೇ ಮೈತ್ರಿ ಅಭ್ಯರ್ಥಿ ಎಲ್ಲ ಕಡೆ ನಾವೂ ಹಿಂದುಗಳೇ, ಅನಂತಕುಮಾರ್ ಡೋಂಗಿ ಹಿಂದು ಎಂದು ಆರೋಪಿಸ್ತಿದಾರೆ. ಟೆಂಪಲ್ ರನ್ ನಡೆಸಿದ್ದು, ಜಿಲ್ಲೆಯ ಪ್ರಮುಖ ದೇವಾಲಯಗಳಿಗೆ ಭೇಟಿ ನೀಡಿದ್ದಾರೆ. ಕೇಸರಿ ಶಾಲು ಹಾಕಿ ಶೋಭಾಯಾತ್ರೆಯಲ್ಲಿ ಹೆಜ್ಜೆ ಹಾಕಿದ ಅಸ್ನೋಟಿಕರ್ ಹಿಂದುಗಳ ಮನಸೆಳೆಯಲು ಮುಂದಾಗಿರೋದು ಎಲ್ಲರ ಗಮನ ಸೆಳೆದಿದೆ.
ಒಟ್ಟಿನಲ್ಲಿ ಚುನಾವಣೆ ಸನೀಹಿಸುತ್ತಿದ್ದಂತೆ ಕಾಂಗ್ರೆಸ್ ಗೆಲುವಿಗಾಗಿ ತನ್ನ ಸಿದ್ಧಾಂತವನ್ನೇ ಬದಲಿಸಿಕೊಂಡಂತೆ ಕಾಣುತ್ತಿದ್ದು, ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಅಂತಿಮವಾಗಿ ಜನ ಯಾರನ್ನು ಕೈ ಹಿಡಿತಾತೆ ಎಂದು ಕಾದುನೋಡಬೇಕಾಗಿದೆ.