ETV Bharat / state

ಶಿರಸಿಯಲ್ಲಿ ಅತಿವೃಷ್ಠಿಯಿಂದ ಮನೆ ಕಳೆದುಕೊಂಡು ವರ್ಷ ಕಳೆದರೂ ಪರಿಹಾರ ಕಾಣದ 12 ಕುಟುಂಬ - Etv Bharat Kannada

ಕಳೆದ ವರ್ಷ ಮಳೆಯಿಂದಾಗಿ ಹಲವಾರು ಮನೆಗಳು ಹಾನಿಯಾಗಿದ್ದವು, ಹಾನಿಯಾದ ಮನೆಗಳಿಗೆ ಸರ್ಕಾರ ಪರಿಹಾರವನ್ನೂ ಘೋಷಿತ್ತು ಆದರೇ ಕೇವಲ ಒಂದು ರೂಪಾಯಿ ಮಾತ್ರ ಪರಿಹಾರ ನೀಡಲಾಗಿದೆ ಎಂದು ಸಂತ್ರಸ್ತರು ಅಳಲನ್ನು ತೋಡಿಕೊಂಡಿದ್ದಾರೆ.

kn_srs_02
ಮಳೆಯಿಂದ ಮನೆ ಕಳೆದುಕೊಂಡ ಕುಟುಂಬ
author img

By

Published : Sep 26, 2022, 2:30 PM IST

ಶಿರಸಿ(ಉತ್ತರ ಕನ್ನಡ): ಮಳೆಯಿಂದಾಗಿ ಮನೆ ಕಳೆದುಕೊಂಡಿದ್ದ ಕುಟುಂಬಗಳಿಗೆ ಸರ್ಕಾರ ಒಂದು ರೂಪಾಯಿಯ ಪರಿಹಾರ ನೀಡುವ ಮೂಲಕ ಸಂತ್ರಸ್ತರ ಆಕ್ರೋಶಕ್ಕೆ ಕಾರಣವಾಗಿದೆ.

ಕಳೆದ ವರ್ಷ ಜುಲೈನಲ್ಲಿ ಉತ್ತರಕನ್ನಡ ಭಾಗದಲ್ಲಿ ಅತಿಯಾದ ಮಳೆಯಿಂದ ಪ್ರವಾಹ ಉಂಟಾಗಿ ಶಿರಸಿಯ ಜಾನ್ಮನೆ ಗ್ರಾಮಪಂಚಾಯ್ತಿ ವ್ಯಾಪ್ತಿಯ ರೇವಣಕಟ್ಟ ಗ್ರಾಮದಲ್ಲಿ ಐವತ್ತಕ್ಕೂ ಹೆಚ್ಚು ಮನೆಗಳು ಪ್ರವಾಹಕ್ಕೆ ಸಂಪೂರ್ಣ ಹಾನಿಯಾಗಿದ್ದವು. ಹಾನಿಗೊಳಗಾದ ಮನೆಗಳಿಗೆ ಸರ್ಕಾರ ಪರಿಹಾರವನ್ನೂ ಘೋಷಿಸಿತ್ತು. ಆದರೇ, ಕೆಲವರಿಗೆ ಮಾತ್ರ ಮೊದಲ ಕಂತಿನ ಪರಿಹಾರದ ಹಣ ಬಿಡುಗಡೆಯಾದರೇ, ಇನ್ನುಳಿದ 12 ಮನೆಗಳಿಗೆ ಒಂದು ರುಪಾಯಿ ಪರಿಹಾರ ಮಾತ್ರ ಸಿಕ್ಕಿದೆ. ಕಳೆದ ಒಂದು ವರ್ಷದಿಂದ ಮನೆಯೂ ಇಲ್ಲ, ಪರಿಹಾರವೂ ಇಲ್ಲ ಎನ್ನುವ ಸ್ಥಿತಿಯಲ್ಲಿದ್ದ ಸಂತ್ರಸ್ತರು ಪರಿಹಾರಕ್ಕಾಗಿ ದಿನವೂ ಕಚೇರಿಗೆ ಅಲೆಯುವಂತಾಗಿದೆ ಎಂದು ಅಳಲು ತೋಡಿಕೊಂಡಿದ್ದಾರೆ.

ಮಳೆಯಿಂದ ಮನೆ ಕಳೆದುಕೊಂಡ ಕುಟುಂಬ

ಈ ಗ್ರಾಮದ ಪ್ರತಿ ಮನೆಯೂ ದಾಖಲೆಗಳಿರುವಂತದ್ದು. ಪ್ರವಾಹ ಸಂದರ್ಭದಲ್ಲಿ ಕುದ್ದು ವಿಧಾನಸಭೆ ಸಭಾಪತಿಯಾದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಅಧಿಕಾರಿಗಳೊಂದಿಗೆ ಗ್ರಾಮಕ್ಕೆ ಭೇಟಿ ನೀಡಿ ಹಾನಿಗೊಳಗಾದ ಮನೆಗಳಿಗೆ ಐದು ಲಕ್ಷ ಪರಿಹಾರದ ಭರವಸೆ ನೀಡಿದ್ದರು. ಹಾನಿಗೆ ಸಂಬಂಧಿಸಿದಂತೆ ಅಧಿಕಾರಿಗಳಿಗೆ ಬೇಕಾದ ಎಲ್ಲಾ ದಾಖಲೆಗಳನ್ನು ನೀಡಲಾಗಿತ್ತು. ಆದರೂ ಇಲ್ಲಿನ 12 ಸಂತ್ರಸ್ತ ಕುಟುಂಬಗಳಿಗೆ ಈವರೆಗೂ ಸಿಕ್ಕಿದ್ದು ಕೇವಲ ಒಂದು ರೂಪಾಯಿ ಪರಿಹಾರ ಮಾತ್ರ. ಇನ್ನು, ಉಳಿದವರಿಗೆ ಒಂದು ಕಂತಿನ ಹಣ ಮಾತ್ರ ಸಿಕ್ಕಿದೆ. ಈ ಕುರಿತು ವಿಚಾರಿಸಲು ಹೋದರೆ ಆದ ಲೋಪವನ್ನು ಸರಿಪಡಿಸಿಕೊಳ್ಳುತ್ತೇವೆ ಎಂದು ಅಧಿಕಾರಿಗಳು ಸಮಜಾಯಿಸಿ ನೀಡುತ್ತಾರೆ ಎಂದು ಸಂತ್ರಸ್ತರು ಹೇಳಿದ್ದಾರೆ.

ಇದನ್ನೂ ಓದಿ: ಚಿಕ್ಕಮಗಳೂರು: ನದಿಯ ಅಬ್ಬರಕ್ಕೆ ಕೊಚ್ಚಿ ಹೋಗುತ್ತಿರುವ ತೋಟಗಳು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.