ETV Bharat / state

ಭಟ್ಕಳದಲ್ಲಿ ಮತ್ತೆ ಸ್ವ್ಯಾಬ್ ಪರೀಕ್ಷೆ ಪುನಾರಂಭ ; ಮಾಸ್ಕ್​​ ಧರಿಸದವರಿಗೆ ದಂಡವೂ ಫಿಕ್ಸ್‌ - Swab test restart at Bhatkal

ಮಾಸ್ಕ್​​ ಧರಿಸದೇ ಬಂದ 6 ಜನರಿಗೆ 100 ರೂ.ನಂತೆ ದಂಡ ವಿಧಿಸಲಾಗಿದೆ. ಪರೀಕ್ಷೆಗೆ ಸಹಕರಿಸದವರಿಗೆ ದಂಡ ಹಾಕಲಾಗಿದೆ..

Swab test restart at Bhatkal
ಭಟ್ಕಳದಲ್ಲಿ ಮತ್ತೆ ಆರಂಭಗೊಂಡಿದೆ ಸ್ವಾಬ್ ಪರೀಕ್ಷೆ; ಮಾಸ್ಕ್​​ ಧರಿಸದವರಿಗೆ ದಂಡ ಸಹಿತ ಪರೀಕ್ಷೆ
author img

By

Published : Feb 2, 2021, 2:53 PM IST

ಭಟ್ಕಳ : ಭಟ್ಕಳ ಸರ್ಕಾರಿ ಆಸ್ಪತ್ರೆ, ಪುರಸಭೆ ಹಾಗೂ ನಗರ ಪೊಲೀಸ್​​ ಜಂಟಿಯಾಗಿ ನಗರ ವ್ಯಾಪ್ತಿಯಲ್ಲಿ ಕೋವಿಡ್ ಪ್ರಕರಣ ಇಳಿಕೆ ಮಾಡುವ ಉದ್ದೇಶದಿಂದ ಸ್ವ್ಯಾಬ್ ಪರೀಕ್ಷೆ ಪುನಾರಂಭಗೊಳಿಸಿದೆ. ಪುರಸಭೆ ಕಟ್ಟಡದ ಎದುರಿನಲ್ಲಿ ಸಾರ್ವಜನಿಕರಿಗೆ ಸ್ವ್ಯಾಬ್ ಪರೀಕ್ಷೆ ನಡೆಸಲಾಗುತ್ತಿದೆ.

ತಾಲೂಕಿನಲ್ಲಿ ಕೋವಿಡ್​​ ಪ್ರಕರಣ ಇಳಿಕೆಯಾಗುತ್ತಿವೆ. ಇದನ್ನ ದೃಢಪಡಿಸುವುದಕ್ಕಾಗಿ ಕೋವಿಡ್‌ ಸ್ವ್ಯಾಬ್‌ ಪರೀಕ್ಷೆ ನಡೆಸಬೇಕೆಂದು ಈ ಹಿಂದೆ ಜಿಲ್ಲಾಧಿಕಾರಿಗಳು ಆದೇಶಿಸಿದ್ದರು. ಜಿಪಂ ಸಿಇಒ ಪ್ರಿಯಾಂಗ ಎಂ ಅವರು ಈ ಬಗ್ಗೆ ಮತ್ತೆ ತಾಲೂಕು ಆರೋಗ್ಯಾಧಿಕಾರಿ ಹಾಗೂ ಸರ್ಕಾರಿ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿಗಳಿಗೆ ಸೂಚನೆ ನೀಡಿದ್ದರು.

ಸ್ವ್ಯಾಬ್‌ ಪರೀಕ್ಷೆ ಪುನಾರಂಭ..

ಈ ಹಿನ್ನೆಲೆ ಭಟ್ಕಳದಲ್ಲಿ ಸಾರ್ವಜನಿಕವಾಗಿ ಕೋವಿಡ್ ಸ್ವ್ಯಾಬ್ ಪರೀಕ್ಷೆ ನಡೆಸಲಾಗಿದೆ. ಸತತ ಒಂದು ವಾರದ ಜಂಟಿ ಕಾರ್ಯಕ್ರಮ ನಡೆಸಲಾಗುವುದು. ಪುರಸಭೆಯ ಕಚೇರಿಯ ಹೊರ ಭಾಗದಲ್ಲಿ ಬೆಳಗ್ಗೆ 10 ಗಂಟೆಯಿಂದ ಆರಂಭಗೊಂಡ ಜಂಟಿ ಕಾರ್ಯಾಚರಣೆ ಮಧ್ಯಾಹ್ನ 12 ಗಂಟೆ ತನಕ ನಡೆಸಲಾಗಿದೆ. ಇದರಲ್ಲಿ ಕೆಲವರು ಸ್ವಯಂ ಪ್ರೇರಿತರಾಗಿ ಮುಂದೆ ಬಂದು ಪರೀಕ್ಷೆಗೊಳಪಟ್ಟಿದ್ದಾರೆ.

ಇನ್ನು, ತಾಲೂಕಿನಲ್ಲಿ ಮಾಸ್ಕ್​​ ಧರಿಸುವವರ ಸಂಖ್ಯೆ ಕಡಿಮೆಯಾಗುತ್ತಿರುವ ಹಿನ್ನೆಲೆ ಅಂತಹ ವಾಹನ ಸವಾರರು, ಪಾದಚಾರಿಗಳನ್ನು ತಡೆದು ಅವರಿಗೆ ಸ್ವ್ಯಾಬ್ ಪರೀಕ್ಷೆ ನಡೆಸಲಾಗಿದೆ. ಇದರಲ್ಲಿ ಸಾರ್ವಜನಿಕರಿಗೆ ಯಾವುದೇ ಒತ್ತಾಯ ಇಲ್ಲ.

ಸ್ವ್ಯಾಬ್ ಪರೀಕ್ಷೆಗೊಳಪಟ್ಟಲ್ಲಿ ಕೋವಿಡ್ ಪ್ರಕರಣದ ಇಳಿಮುಖಕ್ಕೆ ಸಹಕರಿಸಿದಂತಾಗಲಿದೆ ಹಾಗೂ ಇದಕ್ಕೆ ಜನ ಭಯಪಡುವ ಅವಶ್ಯಕತೆಯಿಲ್ಲ. ಈ ಬಗ್ಗೆ ಜನರಿಗೆ ತಿಳುವಳಿಕೆ ನೀಡಿ, ಪರೀಕ್ಷೆಗೊಳಪಡಿಸಲು ಆರೋಗ್ಯ ಇಲಾಖೆ ಸಿಬ್ಬಂದಿ ಮುಂದಾಗಿರುವುದು ಕಂಡು ಬಂತು.

ಈ ಸುದ್ದಿಯನ್ನೂ ಓದಿ: ತುಮಕೂರಿನಲ್ಲಿ ಜಿಲೆಟಿನ್ ಸ್ಫೋಟಗೊಂಡು ಮನೆ ಗೋಡೆ ಕುಸಿತ, ಮಹಿಳೆಗೆ ಗಾಯ

ಮಾಸ್ಕ್​​ ಧರಿಸದೇ ಬಂದ 6 ಜನರಿಗೆ 100 ರೂ.ನಂತೆ ದಂಡ ವಿಧಿಸಲಾಗಿದೆ. ಪರೀಕ್ಷೆಗೆ ಸಹಕರಿಸದವರಿಗೆ ದಂಡ ಹಾಕಲಾಗಿದೆ. ಪುರಸಭೆಯಲ್ಲಿ 65 ಮಂದಿ ಸೇರಿ ಸರ್ಕಾರಿ ಆಸ್ಪತ್ರೆಯಲ್ಲಿ 30 ಮಂದಿಗೆ ಹಾಗೂ ಒಟ್ಟಾರೆ ತಾಲೂಕಿನಿಂದ 95 ಮಂದಿಗೆ ಸ್ವ್ಯಾಬ್ ಪರೀಕ್ಷೆ ನಡೆಸಲಾಗಿರುವ ಬಗ್ಗೆ ಸರ್ಕಾರಿ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ. ಸವಿತಾ ಕಾಮತ್ ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.