ಶಿರಸಿ: ಕೊರೊನಾ ಸೋಂಕಿತ ಗರ್ಭಿಣಿಯೊಬ್ಬರಿಗೆ ಶಿರಸಿಯ ಪಂಡಿತ ಸಾರ್ವಜನಿಕ ಆಸ್ಪತ್ರೆಯ ವೈದ್ಯರ ತಂಡ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿ ತಾಯಿ ಹಾಗೂ ಮಗುವಿನ ಜೀವ ಉಳಿಸಿದ್ದಾರೆ.
ಆಸ್ಪತ್ರೆಯ ವೈದ್ಯರಾದ ನೇತ್ರಾವತಿ, ಪದ್ಮಿನಿ, ನರ್ಸ್ಗಳಾದ ಲಕ್ಷ್ಮಿ ರೇವಣಕರ್, ಚಂದ್ರಕಲಾ, ತಾರಾ, ಸಹಾಯಕಿ ಮಾದೇವಿ ಹಾಗೂ ವಾರ್ಡ್ ಬಾಯ್ ಮಧು ಪಿಪಿಇ ಕಿಟ್ ಧರಿಸಿ ಶಸ್ತ್ರಚಿಕಿತ್ಸೆ ನಡೆಸಿ ಇಬ್ಬರ ಪ್ರಾಣ ಉಳಿಸಿದ್ದಾರೆ.