ETV Bharat / state

ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಕೂಡದ ಮೂಹೂರ್ತ: ಧಾರಾವಾಹಿಯಂತಾದ ಜನಪ್ರತಿನಿಧಿಗಳ ಭರವಸೆ! - ಕಾರವಾರ

ಉತ್ತರಕನ್ನಡ ಜಿಲ್ಲೆಯ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣದ ಅಡಿಗಲ್ಲು ಕಾರ್ಯಕ್ರಮ ವಿಳಂಬವಾಗುತ್ತಿದ್ದು, ಎಲ್ಲೆಡೆ ಟೀಕೆ ಕೇಳಿ ಬರುತ್ತಿದೆ.

hospital
ಆಸ್ಪತ್ರೆ ನಿರ್ಮಾಣ ಕಾರ್ಯ ವಿಳಂಬವಾಗುತ್ತಿರುವ ಕುರಿತು ಹೇಳಿಕೆ ನೀಡುತ್ತಿರುವ ಸ್ಥಳೀಯ ಹಾಗು ಶಾಸಕರು.
author img

By

Published : Mar 26, 2023, 4:49 PM IST

ಆಸ್ಪತ್ರೆ ನಿರ್ಮಾಣ ಕಾರ್ಯ ವಿಳಂಬವಾಗುತ್ತಿರುವ ಕುರಿತು ಹೇಳಿಕೆ ನೀಡುತ್ತಿರುವ ಸ್ಥಳೀಯ ಹಾಗು ಶಾಸಕರು.

ಕಾರವಾರ: ಅದ್ಯಾಕೋ ಏನೋ ಉತ್ತರಕನ್ನಡದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ಕಾರ್ಯ ಒಂದಲ್ಲೊಂದು ಕಾರಣಕ್ಕೆ ಮುಂದೆ ಹೋಗುತ್ತಲೇ ಇದೆ. ಕಳೆದ ಕೆಲ ದಿನಗಳ ಹಿಂದೆ ಖುದ್ದು ಸಿಎಂ ಬೊಮ್ಮಾಯಿ ಜಿಲ್ಲೆಗೆ ಆಗಮಿಸಿ ಆಸ್ಪತ್ರೆಗೆ ಅಡಿಗಲ್ಲು ಹಾಕುತ್ತಾರೆ ಎನ್ನಲಾಗಿತ್ತು. ಆದರೆ ಕೊನೇ ಕ್ಷಣದಲ್ಲಿ ಮುಖ್ಯಮಂತ್ರಿಗಳ ಭೇಟಿ ನಿಗದಿಯಾಗದ ಹಿನ್ನಲೆ ಆಸ್ಪತ್ರೆ ಕಾಮಗಾರಿಗೆ ಚಾಲನೆ ಸಿಕ್ಕಿಲ್ಲ. ಹೀಗೆ ಆಸ್ಪತ್ರೆ ನಿರ್ಮಾಣ ಪದೇ ಪದೇ ಮುಂದೆ ಹೋಗುತ್ತಿರೋದು ಇದೀಗ ಜಿಲ್ಲೆಯ ಜನರ ಆಕ್ರೋಶಕ್ಕೆ ಕಾರಣವಾಗಿದೆ.

ಹೌದು, ಸದ್ಯ ಉತ್ತರಕನ್ನಡ ಜಿಲ್ಲೆಯಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿರುವ ವಿಚಾರ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ. ಕಳೆದೆರಡು ವರ್ಷಗಳಿಂದ ಜಿಲ್ಲೆಯಲ್ಲಿ ಸುಸಜ್ಜಿತ ಆಸ್ಪತ್ರೆ ನಿರ್ಮಾಣಕ್ಕೆ ಸಾರ್ವಜನಿಕರಿಂದ ಒತ್ತಡಗಳು ಹೆಚ್ಚಾದ ಬೆನ್ನಲ್ಲೇ ಸರ್ಕಾರ ಜಾಗ ಗುರುತಿಸಿ ಬಜೆಟ್‌ನಲ್ಲಿ ಆಸ್ಪತ್ರೆಯನ್ನೇನೋ ಘೋಷಣೆ ಮಾಡಿದೆ. ಆದರೆ ಇದುವರೆಗೂ ಸಹ ಆಸ್ಪತ್ರೆ ನಿರ್ಮಾಣಕ್ಕೆ ಅಡಿಗಲ್ಲು ಹಾಕಲು ಮುಹೂರ್ತವೇ ಕೂಡಿಬಂದಿಲ್ಲ.

ಜಿಲ್ಲೆಯ ಜನಪ್ರತಿನಿಧಿಗಳು ಖುದ್ದು ಮುಖ್ಯಮಂತ್ರಿಗಳ ಕೈಯ್ಯಿಂದಲೇ ಆಸ್ಪತ್ರೆಗೆ ಅಡಿಗಲ್ಲು ಹಾಕಲು ಯತ್ನಿಸುತ್ತಿರುವ ಪರಿಣಾಮ ಪದೇ ಪದೇ ಅಡಿಗಲ್ಲು ಕಾರ್ಯಕ್ರಮ ಮುಂದಕ್ಕೆ ಹೋಗುತ್ತಿದೆ. ಇನ್ನೊಂದೆಡೆ ಆಸ್ಪತ್ರೆಗೆ ನೀಡಿರುವ ಜಾಗದ ವಿಚಾರವೂ ಸಹ ಸಾಕಷ್ಟು ಗೊಂದಲಮಯವಾಗಿದ್ದು, ಸರ್ಕಾರಕ್ಕೆ ಆಸ್ಪತ್ರೆ ನಿರ್ಮಿಸುವ ಮನಸ್ಸಾದ್ರೂ ಇದೆಯೋ ಇಲ್ಲವೋ ಎನ್ನುವ ಅನುಮಾನ ಜನರನ್ನು ಕಾಡತೊಡಗಿದೆ.

ಉತ್ತರಕನ್ನಡ ಜಿಲ್ಲೆಯಲ್ಲಿ ಸೂಪರ್ ಸ್ಪೆಷಾಲಿಟಿ ಸ್ಪೆಷಾಲಿಟಿ ಆಸ್ಪತ್ರೆ ಎಂಬುದು ಇದೊಂದು ಧಾರವಾಹಿಯಂತಾಗಿದೆ. ಸ್ಥಳೀಯ ಶಾಸಕರು, ಸಚಿವರು ಮುಖ್ಯಮಂತ್ರಿಗಳು ಇದರ ಹೀರೋಗಳು. ಕಳೆದ ಎರಡ್ಮೂರು ವರ್ಷಗಳಿಂದ ಬಿಜೆಪಿಯವರು ಈ ಧಾರವಾಹಿ ಓಡಿಸುತ್ತಲೇ ಇದ್ದಾರೆ. ರಾಜ್ಯದಲ್ಲಿ ಇನ್ನೇನು ಕೆಲವೇ ದಿನಗಳಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಯಾಗಲಿದೆ. ಇನ್ಯಾವಾಗ ಆಸ್ಪತ್ರೆ ಕಾಮಗಾರಿ ಆರಂಭಿಸುತ್ತೀರಿ ಎಂದು ಸ್ಥಳೀಯ ಭಾಸ್ಕರ್ ಪಟಗಾರ ಪ್ರಶ್ನಿಸಿದ್ದಾರೆ.

ಇನ್ನು ಜಿಲ್ಲೆಯ ಕುಮಟಾದಲ್ಲಿ ನಿರ್ಮಿಸಲು ಉದ್ದೇಶಿಸಲಾಗಿರುವ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಾಗಿ ತಾಲೂಕಿನ ಮಿರ್ಜಾನ್‌ನಲ್ಲಿ ಮೊದಲು ಜಾಗವನ್ನು ಗುರುತಿಸಲಾಗಿತ್ತು. ಆದರೆ ಅದು ಅರಣ್ಯ ಇಲಾಖೆಗೆ ಸೇರಿದ ಜಾಗವಾದ್ದರಿಂದ ಅದನ್ನು ವರ್ಗಾಯಿಸಿಕೊಂಡು ಆಸ್ಪತ್ರೆ ನಿರ್ಮಿಸುವುದು ವಿಳಂಬವಾಗುತ್ತದೆ ಎನ್ನುವ ಕಾರಣಕ್ಕೆ ಬೇರೆ ಜಾಗಕ್ಕಾಗಿ ಹುಡುಕಾಟ ನಡೆಸಿದ್ದರು. ಕಳೆದ ತಿಂಗಳು ಪಟ್ಟಣದ ವ್ಯಾಪ್ತಿಯಲ್ಲೇ ಏಕಲವ್ಯ ವಸತಿ ಶಾಲೆಗಾಗಿ ಮೀಸಲಿರಿಸಲಾಗಿದ್ದ ಜಾಗದಲ್ಲಿ 15 ಎಕರೆ ಪ್ರದೇಶವನ್ನು ಆಸ್ಪತ್ರೆಗೆಂದು ಮೀಸಲಿರಿಸಿದ್ದು ಅದರ ವರ್ಗಾವಣೆ ಇನ್ನೂ ಬಾಕಿಯಿದೆ.

ಹೀಗಾಗಿ ಆಸ್ಪತ್ರೆಗೆ ಜಾಗವನ್ನು ನಿಗದಿಪಡಿಸುವಲ್ಲೇ ಕಾಲಹರಣ ಮಾಡಲಾಗುತ್ತಿದ್ದು ಆಸ್ಪತ್ರೆ ನಿರ್ಮಾಣ ಕನಸಿನ ಮಾತು ಅನ್ನೋ ಆರೋಪಗಳು ಕೇಳಿಬಂದಿವೆ. ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ಕುಮಟಾ ಶಾಸಕ ದಿನಕರ ಶೆಟ್ಟಿ, ಆಸ್ಪತ್ರೆ ಜಾಗದಲ್ಲಿ ಯಾವುದೇ ಗೊಂದಲ ಇಲ್ಲವಾಗಿದ್ದು, ಬೆಂಗಳೂರಿನಿಂದಲೇ ಸಿಎಂ ಕೈಯ್ಯಿಂದ ಆಸ್ಪತ್ರೆಗೆ ಅಡಿಗಲ್ಲು ಹಾಕಿಸಿ, ಆದಷ್ಟು ಬೇಗ ಕಾಮಗಾರಿ ಪ್ರಾರಂಭಿಸುತ್ತೇವೆ ಎಂದಿದ್ದಾರೆ.

ಒಟ್ಟಾರೇ ಆಸ್ಪತ್ರೆಗೆ ಅಡಿಗಲ್ಲು ಹಾಕುವುದನ್ನೇ ಪ್ರತಿಷ್ಠೆಯಾಗಿ ತೆಗೆದುಕೊಂಡಿರುವುದರಿಂದಾಗಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ವಿಳಂಬವಾಗುತ್ತಿರೋದಂತೂ ಸತ್ಯ. ಇದೀಗ ಬೆಂಗಳೂರಿನಲ್ಲೇ ಸಿಎಂ ಅವರಿಂದ ಅಡಿಗಲ್ಲು ಹಾಕಿಸಲು ಜನಪ್ರತಿನಿಧಿಗಳು ತಯಾರಿ ನಡೆಸಿದ್ದು ಚುನಾವಣೆ ಘೋಷಣೆ ಮೊದಲೇ ಕಾಮಗಾರಿ ಆರಂಭವಾಗುತ್ತಾ ಅನ್ನೋದನ್ನು ಕಾದು ನೋಡಬೇಕು.

ಇದನ್ನೂ ಓದಿ: ಮೈಸೂರಿನ ಅಪೋಲೋ ಆಸ್ಪತ್ರೆಯಲ್ಲಿ ಎಂಡೋಸ್ಕೊಪಿ ಕ್ಯಾಡ್ ಐ ತಂತ್ರಜ್ಞಾನ ಅಳವಡಿಕೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.