ಭಟ್ಕಳ: ಲಾಕ್ಡೌನ್ನಿಂದ ದುಡಿಮೆಯಿಲ್ಲದೇ ಸಂಕಷ್ಟ ಎದುರಿಸುತ್ತಿರುವ ತಾಲೂಕಿನ ಆಟೋ ರಿಕ್ಷಾ ಚಾಲಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಶಾಸಕ ಸುನೀಲ ನಾಯ್ಕ ನೀಡಿದ 1 ಲಕ್ಷ ರೂ. ನೆರವು ನೀಡಿದ್ದಾರೆ. ಚೆಕ್ಅನ್ನು ಇಲ್ಲಿನ ಪ್ರವಾಸಿ ಮಂದಿರದಲ್ಲಿ ಆಟೋ ರಿಕ್ಷಾ ಚಾಲಕ ಮಾಲೀಕರ ಸಂಘದ ಅಧ್ಯಕ್ಷ ಕೃಷ್ಣ ನಾಯ್ಕ ಆಸರಕೇರಿ ಸದಸ್ಯರ ಸಮ್ಮುಖದಲ್ಲಿ ಸ್ವೀಕರಿಸಿದರು.
ಚೆಕ್ ಸ್ವೀಕರಿಸಿ ಮಾತನಾಡಿದ ಕೃಷ್ಣ ನಾಯ್ಕ, ಶಾಸಕರು ವೈಯಕ್ತಿಕ ನೆರವು ನೀಡಿದ್ದಕ್ಕೆ ಅಭಿನಂದನೆ ಸಲ್ಲಿಸಿದರು. ರಿಕ್ಷಾ ಚಾಲಕರ ಸಂಕಷ್ಟವನ್ನು ಅರಿತ ಶಾಸಕರ ಸ್ಪಂದನೆಗೆ ಚಾಲಕರು ಧನ್ಯವಾದ ತಿಳಿಸಿದ್ದಾರೆ.
ಶಾಸಕ ಸುನೀಲ ನಾಯ್ಕ ಮಾತನಾಡಿ, ರಾಜ್ಯ ಸರ್ಕಾರ ಚಾಲಕರಿಗೆ 5 ಸಾವಿರ ನೀಡಿದೆ. ಅದರಂತೆ ವೈಯಕ್ತಿಕವಾಗಿ ಸಂಘಕ್ಕೆ ನನ್ನಿಂದಾಗುವಷ್ಟು ನೆರವು ಮಾಡಿದ್ದೇನೆ. ಮುಂದಿನ ದಿನದಲ್ಲಿ ಸಂಘದ ಜೊತೆಗೆ ನಿಲ್ಲಲಿದ್ದು, ಸರ್ಕಾರದ ಮಟ್ಟದಿಂದ ಆಗುವ ಎಲ್ಲಾ ಸಹಕಾರಕ್ಕೆ ಇರಲಿದ್ದೇನೆ ಎಂದರು.