ETV Bharat / state

ಪದ್ಮಶ್ರೀ ಸುಕ್ರಜ್ಜಿಗೆ ಉಸಿರಾಟದ ಸಮಸ್ಯೆ: ಆಸ್ಪತ್ರೆಗೆ ದಾಖಲಾದ ಜಾನಪದ ಕೋಗಿಲೆ - ಸುಕ್ರಿ ಬೊಮ್ಮ ಗೌಡ

ಜಾನಪದ ಕೋಗಿಲೆ ಎಂದೇ ಖ್ಯಾತಿ ಪಡೆದ ಸುಕ್ರಿ ಬೊಮ್ಮಗೌಡ ಉಸಿರಾಟದ ಸಮಸ್ಯೆಯಿಂದ ಗುರುವಾರ ಜಿಲ್ಲಾಸ್ಪತ್ರೆಯ ತುರ್ತು ನಿಗಾ ಘಟಕಕ್ಕೆ ದಾಖಲಾಗಿದ್ದಾರೆ.

ಜಾನಪದ ಕೋಗಿಲೆ ಸುಕ್ರಿ ಬೊಮ್ಮ ಗೌಡ ಉಸಿರಾಟ ಸಮಸ್ಯೆಯಿಂದ ಬಳಲುತ್ತಿರುವುದು
author img

By

Published : Sep 12, 2019, 8:02 PM IST

ಕಾರವಾರ: ಜಾನಪದ ಕೋಗಿಲೆ, ಪದ್ಮಶ್ರಿ ಸುಕ್ರಿ ಬೊಮ್ಮಗೌಡ ಉಸಿರಾಟದ ಸಮಸ್ಯೆಯಿಂದ ಗುರುವಾರ ಇಲ್ಲಿನ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದಾರೆ.

ಜಾನಪದ ಕೋಗಿಲೆ ಸುಕ್ರಿ ಬೊಮ್ಮಗೌಡ ಆಸ್ಪತ್ರೆಗೆ ದಾಖಲು

ಅಂಕೋಲಾದ ಬಡಗೇರಿಯಲ್ಲಿದ್ದ ಸುಕ್ರಜ್ಜಿಗೆ ಬೆಳಿಗ್ಗೆಯಿಂದಲೇ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿತ್ತು. ಈ ಬಗ್ಗೆ ಮಾಹಿತಿ ಪಡೆದ ಜನಶಕ್ತಿ ವೇದಿಕೆಯ ಅಧ್ಯಕ್ಷ ಮಾಧವ ನಾಯಕ, ಆಂಬುಲೆನ್ಸ್‌ ಮೂಲಕ ಆಸ್ಪತ್ರೆಗೆ ಕರೆ ತಂದಿದ್ದಾರೆ.

ತುರ್ತು ಚಿಕಿತ್ಸಾ ಘಟಕದಲ್ಲಿ ಹೆಚ್ಚಿನ ಚಿಕಿತ್ಸೆ ನೀಡಲಾಗಿದ್ದು, ಸುಕ್ರಜ್ಜಿ ಅವರಿಗೆ ಶ್ವಾಸಕೋಶದಲ್ಲಿ ಸಮಸ್ಯೆ ಹೆಚ್ಚಾಗಿದೆ. ಸಿಟಿ ಸ್ಕ್ಯಾನ್ ಹಾಗೂ ತುರ್ತು ನಿಗಾ ಘಟಕದಲ್ಲೇ ಅವರಿಗೆ ಚಿಕಿತ್ಸೆ ಮುಂದುವರಿಸುತ್ತೇವೆ ಎಂದು ಜಿಲ್ಲಾ ಸರ್ಜನ್ ಡಾ. ಶಿವಾನಂದ ಕುಡ್ತರಕರ್ ತಿಳಿಸಿದ್ದಾರೆ.

Intro:Body:ಪದ್ಮಶ್ರೀ ಸುಕ್ರಜ್ಜಿ ಮತ್ತೆ ಆಸ್ಪತ್ರೆಗೆ ದಾಖಲು
ಕಾರವಾರ: ಜಾನಪದ ಕೋಗಿಲೆ ಪದ್ಮಶ್ರಿ ಸುಕ್ರಿ ಬೊಮ್ಮ ಗೌಡ ಉಸಿರಾಟದ ಸಮಸ್ಯೆಯಿಂದಾಗಿ ಮತ್ತೆ ಚಿಕಿತ್ಸೆಗಾಗಿ ಇಲ್ಲಿನ ಜಿಲ್ಲಾಸ್ಪತ್ರೆಗೆ ದಾಖಲಾಗಿರುವ ಘಟನೆ ಇಂದು ನಡೆದಿದೆ.
ಅಂಕೋಲಾದ ಬಡಗೇರಿಯಲ್ಲಿದ್ದ ಸುಕ್ರಜ್ಜಿಗೆ ಬೆಳಿಗ್ಗೆಯಿಂದಲೇ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿತ್ತು. ಈ ಬಗ್ಗೆ ಮಾಹಿತಿ ಪಡೆದ ಜನಶಕ್ತಿ ವೇದಿಕೆಯ ಅಧ್ಯಕ್ಷ ಮಾಧವ ನಾಯಕ ಆಂಬುಲೆನ್ಸ್‌ ವ್ಯವಸ್ಥೆ ಮಾಡಿ, ಆಸ್ಪತ್ರೆಗೆ ಕರೆದು ತಂದರು.
ತಕ್ಷಣ ತುರ್ತುಚಿಕಿತ್ಸಾ ಘಟಕದಲ್ಲಿ ಹೆಚ್ಚಿನ ಚಿಕಿತ್ಸೆ ನೀಡಲಾಯಿತು. ಸುಕ್ರಜ್ಜಿ ಅವರಿಗೆ ಶ್ವಾಸಕೋಶದಲ್ಲಿ ಸಮಸ್ಯೆ ಇದೆ. ಹೀಗಾಗಿ, ಕಳೆದ ಬಾರಿ ಉಂಟಾದಂತೆಯೇ ಮತ್ತೆ ಅವರಿಗೆ ಈಗ ಉಬ್ಬಸ ಉಂಟಾಗಿದೆ. ಈ ಬಾರಿ ಸಮಸ್ಯೆ ಸ್ವಲ್ಪ ಹೆಚ್ಚಿನ ಪ್ರಮಾಣದಲ್ಲೇ ಇದೆ. ಸಿ.ಟಿ. ಸ್ಕ್ಯಾನ್ ಮಾಡಿಸುತ್ತೇವೆ. ತುರ್ತು ನಿಗಾ ಘಟಕದಲ್ಲೇ ಅವರಿಗೆ ಚಿಕಿತ್ಸೆ ಮುಂದುವರಿಸುತ್ತೇವೆ ಎಂದು ಜಿಲ್ಲಾ ಸರ್ಜನ್ ಡಾ.ಶಿವಾನಂದ ಕುಡ್ತರಕರ್ ತಿಳಿಸಿದ್ದಾರೆ. Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.