ETV Bharat / state

ಕಸದಿಂದ ರಸ: ನಿರುಪಯುಕ್ತ ವಸ್ತುಗಳಿಂದ ಅಲಂಕಾರಿಕ ವಸ್ತು ಸಿದ್ದಪಡಿಸಿದ ವಿದ್ಯಾರ್ಥಿಗಳು

author img

By ETV Bharat Karnataka Team

Published : Sep 5, 2023, 3:32 PM IST

ನಿರುಪಯುಕ್ತ ವಸ್ತುಗಳಿಂದ ವಿವಿಧ ಬಗೆಯ ಅಲಂಕಾರಿಕ ವಸ್ತುಗಳನ್ನು ತಯಾರಿಸಿ ವಿದ್ಯಾರ್ಥಿಗಳು ಗಮನ ಸೆಳೆದಿದ್ದಾರೆ.

ನಿರುಪಯುಕ್ತ ವಸ್ತುಗಳಿಂದ ಅಲಂಕಾರಿಕ ವಸ್ತು
ನಿರುಪಯುಕ್ತ ವಸ್ತುಗಳಿಂದ ಅಲಂಕಾರಿಕ ವಸ್ತು

ಕಾರವಾರ: ಬಳಕೆ ಮಾಡಿ ಬಿಸಾಡುವ ಪ್ಲಾಸ್ಟಿಕ್‌ ತ್ಯಾಜ್ಯ ವಸ್ತುಗಳು ಎಲ್ಲೆಂದರಲ್ಲಿ ಬಿದ್ದು ಪರಿಸರದ ಸೌಂದರ್ಯದ ಜೊತೆಗೆ ನಗರದ ಸ್ವಚ್ಚತೆ ಹಾಳು ಮಾಡುತ್ತವೆ. ಅದರಲ್ಲೂ ಏಕಬಳಕೆಯ ಪ್ಲಾಸ್ಟಿಕ್ ವಸ್ತುಗಳು ಅತಿಯಾಗಿ ತ್ಯಾಜ್ಯವಾಗಿ ಬಿಸಾಡಲ್ಪಡುತ್ತಿರುವುದು ಪರಿಸರಕ್ಕೆ ಮಾರಕವಾಗಿದೆ. ತ್ಯಾಜ್ಯ ಕಂಡರೆ ಮೂಗು ಮುಚ್ಚಿಕೊಳ್ಳುವ ಕಾಲದಲ್ಲಿ ಪರಿಸರ ಮಾಲಿನ್ಯ ತಡೆಗಟ್ಟುವ ನಿಟ್ಟಿನಲ್ಲಿ ಬಳಕೆಗೆ ಬಾರದ ನಿರುಪಯುಕ್ತ ವಸ್ತುಗಳಿಂದಲೇ ವಿದ್ಯಾರ್ಥಿಗಳು ಬಗೆ ಬಗೆಯ ಅಲಂಕಾರಿಕ ವಸ್ತುಗಳನ್ನು ಸಿದ್ದಪಡಿಸುವ ಮೂಲಕ ಕುಮಟಾದ ಕೊಂಕಣ ಎಜ್ಯುಕೇಷನ್ ಟ್ರಸ್ಟ್‌ನ ಸರಸ್ವತಿ ವಿದ್ಯಾ ಕೇಂದ್ರದ ವಿದ್ಯಾರ್ಥಿಗಳು ಎಲ್ಲರ ಗಮನ ಸೆಳೆದರು.

ನಿರುಪಯುಕ್ತ ವಸ್ತುಗಳು ಎಂದು ಬಿಸಾಡುವ ಹಳೆಯ ಬಾಟಲಿಗಳು, ಪೆನ್ನು, ಬರೆದ ಕಾಗದಗಳು, ಕೆತ್ತಿದ ಪೆನ್ಸಿಲ್​ನ ಕಸ, ಗರಟೆಗಳು, ವಿವಿಧ ಧಾನ್ಯಗಳ ಹೊರಪದರಗಳು, ಶೇಂಗಾ ಸಿಪ್ಪೆ, ಪೇಪರ್​ಗಳು, ಐಸ್​ಕ್ರೀಮ್ ಕಪ್ಪುಗಳು, ಐಸ್​ ಕ್ರೀಮ್ ಚಮಚಗಳು, ಕಡ್ಡಿಗಳು, ಉರಿದ ನಂತರ ಉಳಿಯುವ ಬೆಂಕಿಕಡ್ಡಿ, ಬೆಂಕಿ ಪೊಟ್ಟಣ ಹೀಗೆ ಹತ್ತು ಹಲವು ವಸ್ತುಗಳನ್ನು ಉಪಯೋಗಿಸಿ ವಿದ್ಯಾರ್ಥಿಗಳು ತಮ್ಮ ಕ್ರಿಯಾಶೀಲತೆ ಮೂಲಕ ವಿವಿಧ ಮಾದರಿಗಳನ್ನು ತಯಾರಿಸಿದ್ದು, ವಿದ್ಯಾರ್ಥಿಗಳು ತಯಾರಿಸಿದ ವಿವಿಧ ಬಗೆಯ ವಸ್ತುಗಳನ್ನು ಗಮನಿಸಿದ ಶಿಕ್ಷಕರು, ಪಾಲಕರು ಹಾಗೂ ಇನ್ನುಳಿದ ತರಗತಿಯ ವಿದ್ಯಾರ್ಥಿಗಳು ಕಸದಿಂದ ಹೀಗೆಯೂ ಮಾಡಬಹುದೇ ಎಂದು ಆಶ್ಚರ್ಯಪಟ್ಟರು. ಶಾಲೆಯಲ್ಲಿ ಆಯೋಜನೆಗೊಂಡಿದ್ದ 'ಕಸದಿಂದ ರಸ' ಹಾಗೂ ಕ್ರಾಫ್ಟ್ ಕಾರ್ಯಾಗಾರದಲ್ಲಿ ಸುಮಾರು ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿವಿಧ ಬಗೆಯ ವಸ್ತುಗಳನ್ನು ತಯಾರಿಸಿ ಗಮನ ಸೆಳೆದರು.

ಕರಟಗಳಿಂದ ತಯಾರಿಸಿದ ಗೊಂಬೆಗಳು, ವಸ್ತ್ರದ ಮುಡೆಯಿಂದ ತಯಾರಿಸಿದ ಗೊಂಬೆಗಳು, ವಿವಿಧ ಪ್ರಾಣಿಗಳ ಮಾದರಿಗಳು, ಮನೆ, ವಾಚನಾಲಯ, ಹೂವುಗಳು, ವಾಟರ್ ಫಿಲ್ಟರ್ ಮಾದರಿ, ಎಟಿಎಂನ ಮಾದರಿ, ಟೇಬಲ್ ಖುರ್ಚಿ ಮಾದರಿ, ಸೈಕಲ್, ಹೂ ಬುಟ್ಟಿ, ಗರತಿಗಳಿಂದ ತಯಾರಿಸಿದ ಪೆನ್ನಿನ ಸ್ಟಾಂಡ್ ಗಳು, ಸೋಲಾರ್ ಮಾದರಿ, ಈ ಗ್ಲೂ ಕಟ್ಟಡಗಳು, ವಿವಿಧ ಅಲಂಕಾರಿಕ ವಸ್ತುಗಳು, ಪೂಜಾ ಸಾಮಗ್ರಿಗಳು, ಮೊಟ್ಟೆಯಿಂದ ತಯಾರಿಸಿದ ಡಾಲ್ ಗಳು, ಹೂ ಬುಟ್ಟಿಗಳು, ಮರದ ಮಾದರಿ ಮಕ್ಕಳ ಕೈಗಳಿಂದ ರಚನೆಯಾಗಿ ನೋಡುಗರನ್ನು ಆಕರ್ಷಿಸಿತು.

ಸಾವಿರಾರು ವಿದ್ಯಾರ್ಥಿಗಳು ಈ ವಸ್ತು ಪ್ರದರ್ಶನವನ್ನು ನೋಡಿ ಸಂತಸಪಟರು‌ ವಸ್ತುಗಳನ್ನು ತಯಾರಿಸಿದ ವಿದ್ಯಾರ್ಥಿಗಳು ವಸ್ತುಗಳ ತಯಾರಿಕೆಯ ಬಗ್ಗೆ ಸಂಪೂರ್ಣ ವಿವರಣೆ ನೀಡಿದರು. ಶಿಕ್ಷಕ ವೃಂದದವರು ಪಾಲಕರು ಹಾಗೂ ಶಾಲೆಗೆ ಭೇಟಿನೀಡಿದ ಕೆಲವು ಸಾರ್ವಜನಿಕರೂ ಈ ವಸ್ತುಪ್ರದರ್ಶನ ಕಂಡು ಸಂತಸ ವ್ಯಕ್ತಪಡಿಸಿದರು.

ಇದನ್ನೂ ಓದಿ: 'ರಸ್ತೆಬದಿ ಕಸ ಎಸೆಯಬೇಡಿ'.. ಪರಿಸರ ಜಾಗೃತಿಗಾಗಿ ರಾಷ್ಟ್ರೀಯ ಹೈವೇ ಬದಿ ನಿಂತು ಯುವಕನ ಏಕಾಂಗಿ ಹೋರಾಟ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.