ETV Bharat / state

ರಸ್ತೆ ಇದ್ದರೂ ಬರಲ್ಲ ಬಸ್.. ಕಿಲೋಮೀಟರ್‌ಗಟ್ಟಲೇ ಕಾಲ್ನಡಿಗೆಯಲ್ಲಿ ಸಾಗುವ ವಿದ್ಯಾರ್ಥಿಗಳು..

ದೇವಳಮಕ್ಕಿ ಗ್ರಾಮದಿಂದ ಶಿರ್ವೆ ಗ್ರಾಮದ ತನಕ ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯಡಿಯಲ್ಲಿ ಅಂದಾಜು 4 ಕೋಟಿ 35 ಲಕ್ಷ ರೂಪಾಯಿ ವೆಚ್ಚದಲ್ಲಿ ಹೊಸದಾಗಿ ಡಾಂಬರು ರಸ್ತೆ ನಿರ್ಮಾಣಗೊಂಡಿದೆ..

students-go-to-school-by-walking-in-karawara
ರಸ್ತೆ ಇದ್ದೂ ಬಾರದ ಬಸ್​ಗಾಗಿ ಕಾಲ್ನಡಿಗೆಯಲ್ಲಿ ಸಾಗುವ ವಿದ್ಯಾರ್ಥಿಗಳು
author img

By

Published : Feb 18, 2022, 4:17 PM IST

Updated : Feb 18, 2022, 4:34 PM IST

ಕಾರವಾರ : ಉತ್ತರ ಕನ್ನಡ ಜಿಲ್ಲೆ ಕಾರವಾರ ತಾಲೂಕಿನ ದೇವಳಮಕ್ಕಿ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಕುಗ್ರಾಮ ಶಿರ್ವೆಯ ವಿದ್ಯಾರ್ಥಿಗಳು ನಿತ್ಯ ಶಿಕ್ಷಣಕ್ಕಾಗಿ ದಟ್ಟ ಕಾಡಿನ ರಸ್ತೆಯಲ್ಲಿ ಹತ್ತಾರು ಕಿಲೋಮೀಟರ್ ಸಾಗಬೇಕಾದ ಅನಿವಾರ್ಯತೆ ಇದೆ.

ಈ ಕುರಿತಂತೆ ಗ್ರಾಮ ಪಂಚಾಯತ್‌ ಸದಸ್ಯ ಶ್ರೀಪಾದ ಗೌಡ ಅವರು ಮಾತನಾಡಿರುವುದು..

ಶಿರ್ವೆ ಗ್ರಾಮದಿಂದ ದೇವಳಮಕ್ಕಿಯ ಆದರ್ಶ ವಿದ್ಯಾಲಯದಲ್ಲಿ 18 ವಿದ್ಯಾರ್ಥಿಗಳು, ಕೆರವಡಿಯ ದುರ್ಗಾದೇವಿ ಪದವಿಪೂರ್ವ ಕಾಲೇಜಿನಲ್ಲಿ 9 ವಿದ್ಯಾರ್ಥಿಗಳು ಹಾಗೂ ಸಿದ್ದರ ಐಟಿಐದಲ್ಲಿ ಓರ್ವ ವಿದ್ಯಾರ್ಥಿ ವ್ಯಾಸಂಗ ಮಾಡುತ್ತಿದ್ದಾರೆ. ಕುಗ್ರಾಮವಾಗಿರುವ ಕಾರಣ ಹೆಚ್ಚು ವಾಹನಗಳೂ ಇಲ್ಲಿ ಓಡಾಟ ನಡೆಸುವುದಿಲ್ಲ. ಬಹುತೇಕ ಗ್ರಾಮಸ್ಥರು ಕೂಲಿಕಾರರಾಗಿರುವುದರಿಂದ ವಾಹನಗಳನ್ನೂ ಹೊಂದಿಲ್ಲ.

ಕಾಲ್ನಡಿಗೆಯಲ್ಲಿ ಶಾಲೆಗೆ ತೆರಳುತ್ತಿರುವ ವಿದ್ಯಾರ್ಥಿಗಳು

ದೇವಳಮಕ್ಕಿ ಗ್ರಾಮದಿಂದ ಶಿರ್ವೆ ಗ್ರಾಮದತನಕ ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯಡಿ ಅಂದಾಜು 4 ಕೋಟಿ 35 ಲಕ್ಷ ರೂಪಾಯಿ ವೆಚ್ಚದಲ್ಲಿ ಹೊಸದಾಗಿ ಡಾಂಬರು ರಸ್ತೆ ನಿರ್ಮಾಣಗೊಂಡಿದೆ. ಆದರೂ, ಇಲ್ಲಿಗೆ ಸಾರಿಗೆ ಸಂಸ್ಥೆ ಬಸ್ ಬಿಡುತ್ತಿಲ್ಲ.

ಇದರಿಂದಾಗಿ ಅನಿವಾರ್ಯವಾಗಿ ವಿದ್ಯಾರ್ಥಿಗಳು ಮುಂಜಾನೆ ಆರೇಳು ಗಂಟೆಗೆ ಮನೆಗಳಿಂದ ಕಾಲ್ನಡಿಗೆಯಲ್ಲಿ ಹೊರಟು ಕಿಲೋಮೀಟರ್‌ಗಟ್ಟಲೇ ದೂರದ ದೇವಳಮಕ್ಕಿಯ ಬಸ್ ನಿಲ್ದಾಣಕ್ಕೆ ತಲುಪಬೇಕಿದೆ. ಅಲ್ಲಿಂದ ತಮ್ಮ ಶಾಲೆ-ಕಾಲೇಜುಗಳಿಗೆ ಜ್ಞಾನಾರ್ಜನೆಗಾಗಿ ತೆರಳಬೇಕಿದೆ.

ಇನ್ನು ಈ ಹಿಂದೆ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ನೀಡುತ್ತಿದ್ದ ಉಚಿತ ಸೈಕಲ್‌ಗಳ ವಿತರಣೆಯನ್ನು ಕೂಡ ಸರ್ಕಾರ ನಾನಾ ಕಾರಣಗಳಿಂದ ನಿಲ್ಲಿಸಿಬಿಟ್ಟಿದೆ. ಹೀಗಾಗಿ, ವಿದ್ಯಾರ್ಥಿಗಳು ಅನಿವಾರ್ಯವಾಗಿ ಕಾಲ್ನಡಿಗೆಯಲ್ಲೇ ಸಾಗಬೇಕಾದ ಪರಿಸ್ಥಿತಿ ಈ ಶಿರ್ವೆಯಲ್ಲಿದೆ.

ಇನ್ನು ಈ ಬಗ್ಗೆ ಸಾರಿಗೆ ನಿಗಮದ ಅಧ್ಯಕ್ಷರ ಗಮನಕ್ಕೆ ತರುತ್ತಿದ್ದಂತೆ ತಕ್ಷಣ ಸ್ಪಂದನೆ ನೀಡಿದ್ದು, ಸಮಸ್ಯೆ ಬಗೆಹರಿಸಲು ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಎಲ್ಲಿಯೂ ವಿದ್ಯಾರ್ಥಿಗಳಿಗೆ ಸಮಸ್ಯೆಯಾಗದಂತೆ ನೋಡಿಕೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದು, ಬಹುತೇಕ ಹಳ್ಳಿಗಳಿಗೂ ಕೊರೊನಾ ಸಂದರ್ಭದಲ್ಲಿ ಬಂದಾಗಿದ್ದ ಸಾರಿಗೆ ವ್ಯವಸ್ಥೆಯನ್ನು ಮರಳಿ ಪ್ರಾರಂಭಿಸಲಾಗಿದೆ.‌

students-go-to-school-by-walking-in-karawara
ಕಾಲ್ನಡಿಗೆಯಲ್ಲಿ ವಿದ್ಯಾರ್ಥಿಗಳ ಪಯಣ

ವಿದ್ಯಾರ್ಜನೆಗಾಗಿ ವಿದ್ಯಾರ್ಥಿಗಳು ಮೂಲಸೌಕರ್ಯಗಳ ಕೊರತೆ ನಡುವೆಯೂ ಶಾಲಾ ಕಾಲೇಜುಗಳಿಗೆ ತೆರಳುತ್ತಿರುವುದು ಮೆಚ್ಚುವಂತದ್ದು. ಆದರೆ, ಇಂತಹ ಪ್ರದೇಶಗಳಿಗೆ ಮೂಲಸೌಕರ್ಯ‌‌ ಒದಗಿಸುವ ನಿಟ್ಟಿನಲ್ಲಿ ತಕ್ಷಣ ಸ್ಪಂದನೆ ನೀಡಿದ ಸಾರಿಗೆ ನಿಗಮದ ಅಧ್ಯಕ್ಷರ ಕಾರ್ಯ ಮೆಚ್ಚುವಂಥದ್ದು.

ಅದೇ ರೀತಿ ಜಿಲ್ಲೆಯ ಸಾರಿಗೆ ಘಟಕಗಳಲ್ಲಿ ಇರುವ ಇತರೆ ಸಮಸ್ಯೆಗಳ ಬಗ್ಗೆಯೂ ಗಮನ ಹರಿಸಿ ಈ ಮಕ್ಕಳ ವಿದ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕಿದೆ.

ಓದಿ: ಕಾಂಗ್ರೆಸ್ ಪ್ರತಿಭಟನೆ: ಸದಸ್ಯರನ್ನು ಸಸ್ಪಂಡ್ ಮಾಡಿ ಎಂದ ರಮೇಶ್ ಕುಮಾರ್, ಗರಂ ಆದ ಸ್ಪೀಕರ್, ಸಿಎಂ!

Last Updated : Feb 18, 2022, 4:34 PM IST

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.