ಶಿರಸಿ: ಪ್ರಸಕ್ತ ಸಾಲಿನ ಎಸ್ಸೆಎಸ್ಸೆಎಲ್ಸಿ ಪರೀಕ್ಷೆಯಲ್ಲಿ ಶಿರಶಿ ಶೈಕ್ಷಣಿಕ ಜಿಲ್ಲಾ ವ್ಯಾಪ್ತಿಯಲ್ಲಿ ಮೂವರು ವಿದ್ಯಾರ್ಥಿಗಳು ರಾಜ್ಯಕ್ಕೆ ಮೊದಲ ಸ್ಥಾನ ಗಳಿಸಿದ್ದಾರೆ. ಜಿಲ್ಲೆಯ 952 ವಿದ್ಯಾರ್ಥಿಗಳು ಎ+ ಗ್ರೇಡ್ ಪಡೆದುಕೊಂಡಿದ್ದಾರೆ.
ಜಿಲ್ಲೆಯ ಸಿದ್ದಾಪುರ ತಾಲೂಕಿನ ಪ್ರಶಾಂತಿ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಹೇಮಾ ಹೆಗಡೆ ಹಾಗೂ ಕಾನಸೂರಿನ ಕಾಳಿಕಾ ಭವಾನಿ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿಗಳಾದ ರೇಷ್ಮಾ ಹೆಗಡೆ ಮತ್ತು ಎಸ್.ಎಮ್.ಸುನಯ್ 625ಕ್ಕೆ 625 ಅಂಕ ಗಳಿಸಿ ರಾಜ್ಯಕ್ಕೆ ಮೊದಲ ಸ್ಥಾನ ಪಡೆದಿದ್ದಾರೆ.
ಶೈಕ್ಷಣಿಕ ಜಿಲ್ಲೆಯಲ್ಲಿ 5,137 ಬಾಲಕರು ಹಾಗೂ 4,893 ಬಾಲಕಿಯರು ಎಸ್ಎಸ್ಎಲ್ಸಿ ಪರೀಕ್ಷೆ ಬರೆದಿದ್ದರು. ಅವರಲ್ಲಿ 2,261 ವಿದ್ಯಾರ್ಥಿಗಳು ಎ ಗ್ರೇಡ್, 4,783 ವಿದ್ಯಾರ್ಥಿಗಳು ಬಿ ಗ್ರೇಡ್ ಹಾಗೂ 2,056 ವಿದ್ಯಾರ್ಥಿಗಳು ಸಿ ಗ್ರೇಡ್ನಲ್ಲಿ ಉತ್ತೀರ್ಣರಾಗಿದ್ದಾರೆ.
ಜಿಲ್ಲೆಯು ಗುಣಾತ್ಮಕತೆಯಲ್ಲಿ ಎ ಗ್ರೇಡ್ ಪಡೆದುಕೊಂಡಿದೆ. ಅದರಲ್ಲೂ ಹಿಂದುಳಿದ ತಾಲೂಕು ಎಂದು ಹಣೆಪಟ್ಟಿ ಹೊಂದಿರುವ ಜೋಯಿಡಾ ತಾಲೂಕಿನ ಎಲ್ಲಾ 18 ಶಾಲೆಗಳು ಎ ಗ್ರೇಡ್ ಪಡೆದಿರುವುದು ವಿಶೇಷವಾಗಿದೆ. ಜೊತೆಗೆ ಜಿಲ್ಲೆಯ 6 ತಾಲೂಕುಗಳು ಎ ಗ್ರೇಡ್ ಪಡೆದುಕೊಂಡಿವೆ. ಇನ್ನು154 ಶಾಲೆಗಳು ಎ ಗ್ರೇಡ್, 21 ಶಾಲೆಗಳು ಬಿ ಗ್ರೇಡ್ ಪಡೆದುಕೊಂಡಿದೆ.
ಓದಿ: SSLC ಫಲಿತಾಂಶ ಪ್ರಕಟ: ಬೇರೆಯವರಿಂದ ಪರೀಕ್ಷೆ ಬರೆಸಿದ್ದ ವಿದ್ಯಾರ್ಥಿನಿ ಡಿಬಾರ್, ಉಳಿದವರೆಲ್ಲರೂ ಪಾಸ್
ದ್ವಿತೀಯ : ಶಿರಸಿ ತಾಲೂಕಿನ ಮಾರಿಕಾಂಬಾ ಪ್ರೌಢಶಾಲೆಯ ವಿದ್ಯಾರ್ಥಿ ಸುಗಾವಿಯ ಪ್ರಜ್ವಲ ನಾಯ್ಕ 623 ಅಂಕ ಗಳಿಸಿ ರಾಜ್ಯಕ್ಕೆ ದ್ವಿತೀಯ ಸ್ಥಾನ ಗಳಿಸಿದ್ದಾರೆ.
ಸಾಧನೆ :
ಮಲೆನಾಡಿನಲ್ಲಿ ಸಹಜವಾಗಿರುವ ನೆಟ್ವರ್ಕ್ ಸಮಸ್ಯೆಯ ನಡುವೆಯೆ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ. ಆನ್ಲೈನ್ ಶಿಕ್ಷಣ ಪಡೆಯಲು ಸಾಕಷ್ಟು ಸಮಸ್ಯೆ ಉಂಟಾದರೂ ಮೂವರು ವಿದ್ಯಾರ್ಥಿಗಳು ಪ್ರಥಮ ಸ್ಥಾನ ಗಳಿಸಿದ್ದಾರೆ.