ETV Bharat / state

'ಜಾನಿ' ಸಂಕಷ್ಟದಿಂದ ಡಿಕೆಶಿ ಹೊರ ಬರಲಿ ಎಂದು ಇಡಗುಂಜಿಯಲ್ಲಿ ವಿಶೇಷ ಪೂಜೆ - Okkaliga association workers

ಜಾನಿ(ಜಾರಿ ನಿರ್ದೇಶನಾಲಯ) ಬಂಧನದಿಂದ ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಹೊರ ಬರಲಿ ಎಂದು ಹೊನ್ನಾವರ ತಾಲೂಕು ಒಕ್ಕಲಿಗರ ಸಂಘದ ಕಾರ್ಯಕರ್ತರು ಹಾಗೂ ಡಿಕೆಶಿ ಅಭಿಮಾನಿಗಳು ಇಡಗುಂಜಿ ಗಣಪತಿ ಸನ್ನಿದಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.

ಇಡಿ ಸಂಕಷ್ಟದಿಂದ ಡಿಕೆಶಿ ಹೊರ ಬರಲಿ ಎಂದು ಇಡಗುಂಜಿಯಲ್ಲಿ ವಿಶೇಷ ಪೂಜೆ
author img

By

Published : Sep 12, 2019, 5:50 PM IST

ಕಾರವಾರ: ಜಾರಿ ನಿರ್ದೇಶನಾಲಯದಿಂದ ಬಂಧನಕ್ಕೊಳಗಾಗಿ ತೀವ್ರ ವಿಚಾರಣೆ ಎದುರಿಸುತ್ತಿರುವ ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಬಿಡುಗಡೆಗಾಗಿ ಇಂದು ಪುರಾಣ ಪ್ರಸಿದ್ಧ ಇಡಗುಂಜಿ ಮಹಾಗಣಪತಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.

ಜಾನಿ ಸಂಕಷ್ಟದಿಂದ ಡಿಕೆಶಿ ಹೊರ ಬರಲಿ ಎಂದು ಇಡಗುಂಜಿಯಲ್ಲಿ ವಿಶೇಷ ಪೂಜೆ

ಹೊನ್ನಾವರ ತಾಲೂಕು ಒಕ್ಕಲಿಗರ ಸಂಘದ ಕಾರ್ಯಕರ್ತರು ಹಾಗೂ ಡಿಕೆಶಿ ಅಭಿಮಾನಿಗಳು ಇಡಗುಂಜಿ ಗಣಪತಿ ಸನ್ನಿದಾನದಲ್ಲಿ ಗಣಹೋಮ ಮಾಡಿ, ಮಹಾಮಂಗಳಾರತಿ ಪೂಜೆ ಸಲ್ಲಿಸಿ, ಡಿ ಕೆ ಶಿವಕುಮಾರ್ ಸಂಕಷ್ಟದಿಂದ ಹೊರ ಬರಲಿ ಎಂದು ಬೇಡಿಕೊಂಡರು.

ಬಳಿಕ ಮಾತನಾಡಿದ ಒಕ್ಕಲಿಗರ ಸಂಘದ ಅಧ್ಯಕ್ಷ ಕೃಷ್ಣಾ ಗೌಡ, ಜಾ.ನಿ ಮತ್ತು ಐಟಿಯಿಂದ ಡಿಕೆಶಿ ಅವರನ್ನು ಬಂಧಿಸಿ ತೀವ್ರ ವಿಚಾರಣೆ ನಡೆಸಲಾಗುತ್ತಿದೆ. ಆದರೆ ಇಂತಹ ಸಂಕಷ್ಟ ಎದುರಾದಾಗ ಗಣಪತಿ ಮೊರೆ ಹೋದರೆ ಸಂಕಷ್ಟ ನಿವಾರಣೆಯಾಗುತ್ತದೆ ಎನ್ನುವ ನಂಬಿಕೆಯಿಂದ ಮತ್ತು ಇಡಗುಂಜಿ ಗಣಪತಿ ನಿಂತಿರುವ ಬಾಲ ಗಣಪತಿ ಜೊತೆಗೆ ದ್ವಿಭುಜ ಗಣಪತಿಯಾಗಿರುವುದರಿಂದ ಇಡಗುಂಜಿ ಗಣಪತಿಗೆ ಪೂಜೆ ಸಲ್ಲಿಸಿದರೆ ಸಂಕಷ್ಟ ಶೀಘ್ರದಲ್ಲಿ ನಿವಾರಣೆಯಾಗಲಿದೆ ಎನ್ನುವ ಕಾರಣಕ್ಕೆ ವಿಶೇಷ ಪೂಜೆಯನ್ನ ಸಲ್ಲಿಸಲಾಗಿದೆ ಎಂದು ತಿಳಿದರು.

Intro:Body:ಡಿ.ಕೆ ಶಿವಕುಮಾರ್ ಪರವಾಗಿ ಇಡಗುಂಜಿಯಲ್ಲಿ ವಿಶೇಷ ಪೂಜೆ
ಕಾರವಾರ: ಇಡಿಯಿಂದ ಬಂಧನಕ್ಕೊಳಗಾಗಿ ತೀವ್ರ ವಿಚಾರಣೆ ಎದುರಿಸುತ್ತಿರುವ ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಬಿಡುಗಡೆಗಾಗಿ ಇಂದು ಪುರಾಣ ಪ್ರಸಿದ್ಧ ಇಡಗುಂಜಿ ಮಹಾಗಣಪತಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.
ಹೊನ್ನಾವರ ತಾಲೂಕು ಒಕ್ಕಲಿಗರ ಸಂಘ ಹಾಗೂ ಡಿ.ಕೆ ಶಿವಕುಮಾರ್ ಅಭಿಮಾನಿಗಳಿಂದ ಇಡಗುಂಜಿ ಗಣಪತಿ ಸನ್ನಿದಾನದಲ್ಲಿ ಗಣಹೋಮ ಮಾಡಿ ಡಿಕೆ ಶಿವಕುಮಾರ್ ಸಂಕಷ್ಟದಿಂದ ಹೊರ ಬರಲಿ ಎಂದು ಅಭಿಮಾನಿಗಳು ಹಾಗೂ ಒಕ್ಕಲಿಗರ ಸಂಘದ ಕಾರ್ಯಕರ್ತರು ಬೇಡಿಕೊಂಡರು.
ಇದಾದ ನಂತರ ದೇವಾಲಯದಲ್ಲಿ ಡಿ.ಕೆ ಶಿವಕುಮಾರ್ ಹೆಸರಿನಲ್ಲಿ ಮಹಾಮಂಗಳಾರತಿ ಪೂಜೆಯನ್ನು ಸಲ್ಲಿಸಿ ಆದಷ್ಟು ಶೀಘ್ರದಲ್ಲಿ ಇ.ಡಿ ಅಧಿಕಾರಿಗಳ ವಶದಿಂದ ಶಿವಕುಮಾರ್ ಹೊರ ಬರಲೆಂದು ಕಾರ್ಯಕರ್ತರು ಬೇಡಿಕೊಂಡರು.
ಬಳಿಕ ಮಾತನಾಡಿದ ತಾಲ್ಲೂಕಾ ಸಂಘದ ಅಧ್ಯಕ್ಷ ಕೃಷ್ಣಾ ಗೌಡ ಮಾತನಾಡಿ, ಇಡಿ ಮತ್ತು ಐಟಿಯಿಂದ ಡಿಕಿ ಶಿವಕುಮಾರ್ ಬಂಧಿಸಿ ತೀವ್ರ ವಿಚಾರಣೆ ನಡೆಸಲಾಗುತ್ತಿದೆ. ಆದರೆ ಇಂತಹ ಸಂಕಷ್ಟ ಎದುರಾದಾಗ ಗಣಪತಿ ಮೊರೆ ಹೋದರೆ ಸಂಕಷ್ಟ ನಿವಾರಣೆಯಾಗುತ್ತದೆ ಎನ್ನುವ ನಂಬಿಕೆಯಿಂದ ಮತ್ತು ಇಡಗುಂಜಿ ಗಣಪತಿ ನಿಂತಿರುವ ಬಾಲ ಗಣಪತಿ ಜೊತೆಗೆ ದ್ವಿಭುಜ ಗಣಪತಿಯಾಗಿರುವುದರಿಂದ ಇಡಗುಂಜಿ ಗಣಪತಿಗೆ ಪೂಜೆ ಸಲ್ಲಿಸಿದರೆ ಸಂಕಷ್ಟ ಶೀಘ್ರದಲ್ಲಿ ನಿವಾರಣೆಯಾಗಲಿದೆ ಎನ್ನುವ ಕಾರಣಕ್ಕೆ ವಿಶೇಷ ಪೂಜೆಯನ್ನ ಸಲ್ಲಿಸಲಾಗಿದೆ ಎಂದು ಹೇಳಿದರು.

ಬೈಟ್- ಕೃಷ್ಣಾ ಗೌಡ, ತಾಲ್ಲೂಕಾ ಒಕ್ಕಲಿಗ ಸಮಾಜದ ಅಧ್ಯಕ್ಷರು
Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.