ETV Bharat / state

ತಾಯಿಯ ಮರಣಾ ನಂತರ ನೇತ್ರದಾನ ಮಾಡಿ ಸಾರ್ಥಕತೆ ಮೆರೆದ ಮಗ - ಈಟಿವಿ ಭಾರತ ಕನ್ನಡ ನ್ಯೂಸ್

ಅನಾರೋಗ್ಯದಿಂದ ಸಾವನ್ನಪ್ಪಿದ ತಾಯಿಯ ನೇತ್ರದಾನ ಮಾಡುವ ಮೂಲಕ ಮಗ ಸಾರ್ಥಕತೆ ಮೆರೆದಿರುವ ಘಟನೆ ಉತ್ತರಕನ್ನಡ ಜಿಲ್ಲೆಯ ಭಟ್ಕಳದಲ್ಲಿ ನಡೆದಿದೆ.

son-donated-his-mothers-eyes-after-her-death-in-bhatkal
ತಾಯಿಯ ಮರಣ ನಂತರ ನೇತ್ರದಾನ ಮಾಡಿ ಸಾರ್ಥಕತೆ ಮೆರೆದ ಮಗ
author img

By

Published : Sep 1, 2022, 7:36 PM IST

ಭಟ್ಕಳ (ಉತ್ತರಕನ್ನಡ): ಅನಾರೋಗ್ಯದಿಂದ ಸಾವನ್ನಪ್ಪಿದ ತಾಯಿಯ ಕಣ್ಣುಗಳನ್ನು ದಾನ ಮಾಡುವ ಮೂಲಕ ಮಗ ಸಾರ್ಥಕತೆ ಮೆರೆದಿರುವ ಘಟನೆ ಜಿಲ್ಲೆಯ ಭಟ್ಕಳದಲ್ಲಿ ನಡೆದಿದೆ. ಇಲ್ಲಿನ ಶಿರಾಲಿ ಮತ್ತಿಗುಂಡಿ ನಿವಾಸಿ ಮಾಸ್ತಮ್ಮ ವೆಂಕಟಪ್ಪ ನಾಯ್ಕ(68) ನೇತ್ರದಾನ ಮಾಡಿದ ವೃದ್ಧೆಯಾಗಿದ್ದಾರೆ.

ಅನಾರೋಗ್ಯದ ಹಿನ್ನೆಲೆಯಲ್ಲಿ ಮಾಸ್ತಮ್ಮರನ್ನು ಮಗ ಮಂಜುನಾಥ ಆಗಸ್ಟ್ 21ರಂದು ಭಟ್ಕಳ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಮಾಸ್ತಮ್ಮಇಂದು ಸಾವನ್ನಪ್ಪಿದ್ದಾರೆ. ತಾಯಿಯ ಕಣ್ಣು ಇತರರಿಗೆ ಬೆಳಕಾಗಲಿ ಎಂಬ ಉದ್ದೇಶದಿಂದ ತನ್ನ ಕುಟುಂಬದವರ ಒಪ್ಪಿಗೆ ಪಡೆದು, ಮಗ ಮಂಜುನಾಥ ನಾಯ್ಕ ಭಟ್ಕಳ ಸರ್ಕಾರಿ ಆಸ್ಪತ್ರೆಯ ಮೂಲಕ ಉಡುಪಿಯ ಪ್ರಸಾದ ನೇತ್ರಾಲಯಕ್ಕೆ ಮಾಸ್ತಮ್ಮ ಅವರ ಕಣ್ಣುಗಳನ್ನು ದಾನ ಮಾಡಿದ್ದಾರೆ.

ತಾಯಿಯ ಮರಣ ನಂತರ ನೇತ್ರದಾನ ಮಾಡಿ ಸಾರ್ಥಕತೆ ಮೆರೆದ ಮಗ

ಚಲನಚಿತ್ರ ನಟ ಪವರ್ ಸ್ಟಾರ್ ಪುನೀತ ರಾಜ್ ಕುಮಾರ್ ಅವರು ನೇತ್ರದಾನ ಮಾಡಿ ರಾಜ್ಯದ ಜನತೆಗೆ ಪ್ರೇರಣೆಯಾಗಿದ್ದರು. ಅದಲ್ಲದೇ ಈ ಹಿಂದೆ ಭಟ್ಕಳದಲ್ಲಿ ಸ್ಪಂದನ ಚಾರಿಟಬಲ್ ಟ್ರಸ್ಟ್​​ ನಿಂದ ಬೃಹತ್ ನೇತ್ರದಾನ ಶಿಬಿರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಇದನ್ನೂ ಓದಿ : ಕಿವಿ ಸಮಸ್ಯೆಗೆ ಹೋದವಳು ಕೈ ಕಳೆದುಕೊಂಡಳು: ಜೀವನವೇ ಸರ್ವನಾಶವಾಯಿತಾ ?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.