ETV Bharat / state

ದರೋಡೆಗೆ ಹೊಂಚುಹಾಕಿದ್ದ 6 ಯುವಕರನ್ನ ಬಂಧಿಸಿದ ಶಿರಸಿ ಪೊಲೀಸರು

author img

By

Published : Sep 3, 2020, 10:24 PM IST

ಮಾರಕಾಸ್ತ್ರಗಳನ್ನು ಬಳಸಿಕೊಂಡು ದರೋಡೆ ನಡೆಸಲು ಹೊರಟಿದ್ದ ಯುವಕರ ಗುಂಪೊಂದನ್ನು ಶಿರಸಿ ಪೊಲೀಸರು ಬಂಧಿಸಿದ್ದು, ಬಂಧಿತರಿಂದ ಕೃತ್ಯಕ್ಕೆ ಬಳಸಲು ಇಟ್ಟುಕೊಂಡಿದ್ದ ವಸ್ತುಗಳು, ಬೈಕ್​ ಹಾಗೂ ಅಂದಾಜು 20 ಸಾವಿರ ಮೌಲ್ಯದ 912 ಗ್ರಾಂ. ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ.

sirasi poliice arrest 6 youths
ದರೋಡೆಗೆ ಹೊಂಚುಹಾಕಿದ್ದ 6 ಯುವಕರನ್ನ ಬಂಧಿಸಿದ ಶಿರಸಿ ಪೊಲೀಸರು

ಶಿರಸಿ(ಉತ್ತರಕನ್ನಡ): ಮಾರಕಾಸ್ತ್ರಗಳನ್ನು ಬಳಸಿಕೊಂಡು ದರೋಡೆ ನಡೆಸಲು ಹೊರಟಿದ್ದ ಯುವಕರ ಗುಂಪೊಂದನ್ನು ಶಿರಸಿ ಪೊಲೀಸರು ಬಂಧಿಸಿದ್ದಾರೆ.

ವಿದ್ಯಾ ನಗರದ ಮುರುಗೇಶ ಪೂಜಾರಿ (20), ಕಸ್ತೂರಬಾ ನಗರದ ಮಹಮ್ಮದ್ ಯಾಸೀನ್ (23), ಸವಣೂರಿನ ಮಯಾನಿ ಮೊಹಲ್ಲಾದ ಅಜ್ಮಿತ್ ಅಸ್ಲಾಂ (19), ಗುಲಾಮ್ ಮುಸ್ತಫಾ (19), ಗಾಂಧಿ ನಗರದ ಮರ್ದಾನ್ ಶಫಿಸಾಬ (19) ಹಾಗೂ ಮರಾಠಿಕೊಪ್ಪದ ಚರಣ್ ನಾಯ್ಕ (19) ಬಂಧಿತ ಆರೋಪಿಗಳು. ಇವರಲ್ಲಿ ಕೃತ್ಯದ ಮುಖ್ಯ ಆರೋಪಿಯಾಗಿದ್ದ ವಿದ್ಯಾ ನಗರದ ಮಂಜುನಾಥ ಅಲಿಯಾಸ್ ಮಿಂಟಾ ಮಾರುತಿ ಪೂಜಾರಿ ಪರಾರಿಯಾಗಿದ್ದಾನೆ‌.

ಈ ಯುವಕರು ಬಡಿಗೆ, ರಾಡ್, ಖಾರದ ಪುಡಿ, ಚಾಕುವುನೊಂದಿಗೆ ಯಲ್ಲಾಪುರ ರಸ್ತೆಯ ಸಹ್ಯಾದ್ರಿ ತಗ್ಗಿನಲ್ಲಿ ದರೋಡೆ ನಡೆಸಲು ಹೊಂಚು ಹಾಕುತ್ತಿದ್ದ ಸಂದರ್ಭದಲ್ಲಿ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ ಕೃತ್ಯಕ್ಕೆ ಬಳಸಲು ಇಟ್ಟುಕೊಂಡಿದ್ದ ವಸ್ತುಗಳು, ಬೈಕ್​ ಹಾಗೂ ಅಂದಾಜು 20 ಸಾವಿರ ಮೌಲ್ಯದ 912 ಗ್ರಾಂ. ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ. ಈ ಕುರಿತು ಕುಮಾರುಕಟ್ಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.