ಶಿರಸಿ: ನಗರದ ಪ್ರಾಣಿ ಪ್ರೇಮಿಯೋರ್ವ ವಿವಿಧ ತಳಿಯ ನಾಯಿ ಮರಿಗಳನ್ನು ಸಾಕುವ ಮೂಲಕ ತನ್ನ ಶ್ವಾನ ಪ್ರೀತಿ ಮೆರೆಯುತ್ತಿದ್ದು, ಅದರ ಸಂಪೂರ್ಣ ವರದಿ ಇಲ್ಲಿದೆ.
ಉತ್ತರ ಕನ್ನಡ ಜಿಲ್ಲೆ ಶಿರಸಿ ತಾಲೂಕಿನ ಹೀಪನಹಳ್ಳಿಯ ಪ್ರವೀಣ ಹೆಗಡೆ ವೃತ್ತಿಯಲ್ಲಿ ವೈದ್ಯರಾಗಿದ್ದು, ವಿವಿಧ ತಳಿಯ 20ಕ್ಕೂ ಅಧಿಕ ನಾಯಿ ಮರಿಗಳನ್ನು ತಮ್ಮ ಫಾರ್ಮ್ ಹೌಸ್ನಲ್ಲಿ ಸಾಕುತ್ತಿದ್ದಾರೆ. ಈ ಮೂಲಕ ಪ್ರಾಣಿ ಪ್ರೀತಿ ತೋರುತ್ತಿದ್ದಾರೆ. ಮಾರಾಟದ ಉದ್ದೇಶ ಹೊಂದಿರದ ಇವರು, ನಾಯಿ ಮರಿಗಳೊಂದಿಗೆ ಕಾಲ ಕಳೆದು ತಮ್ಮ ಶ್ವಾನ ಪ್ರೀತಿ ಮೆರೆಯುತ್ತಿದ್ದಾರೆ.
ಓದಿ: ನಿರಾಸೆ ಬಳಿಕ ಸುಂದರ ಬದುಕಿಗೆ ನೆರವಾಗಿದ್ದು 'ಶ್ವಾನ ಸಾಕಾಣಿಕೆ'...!
ಇವರ ಬಳಿ ರಾಟ್ ವ್ಹೀಲರ್, ಮುಧೋಳ, ನಿಯೋ ಪಾಲಿಟನ್ ಮಾಸ್ಟ್ರಿಫ್, ಅಮೆರಿಕನ್ ಬುಲ್, ಡೋಗೊ ಅರ್ಜೆಂಟೀನಾ, ಹರ್ಲಿ ಕ್ವೀನ್, ಬಾಕ್ಸರ್, ಗ್ರೇಡೆನ್ ನಂತಹ ದೇಶಿ-ವಿದೇಶಿ ತಳಿಗಳ ನಾಯಿಗಳಿವೆ.
ಮನೆಗೆ ಮುದ್ದಿನ ನಾಯಿಗಳು, ಜಮೀನಿಗೆ ಸೆಕ್ಯುರಿಟಿ ಗಾರ್ಡ್:
ಶಿರಸಿಯ ಕಬ್ಬೆ ಗ್ರಾಮದಲ್ಲಿ ವಿಶಾಲವಾದ ಫಾರ್ಮ್ ಹೌಸ್ ಹೊಂದಿರುವ ಪ್ರವೀಣ್ ಹೆಗಡೆ, ತಮ್ಮ ಜಮೀನಿನ ರಕ್ಷಣೆಗೂ ಸಹ ನಾಯಿಗಳನ್ನು ಬೆಳೆಸುತ್ತಿದ್ದಾರೆ. ಬೆಂಗಳೂರು, ಗೋವಾ, ಪುದುಚೇರಿ, ಚೆನ್ನೈ ಕೊಯಮತ್ತೂರುಗಳಿಂದ ನಾಯಿ ಮರಿಗಳನ್ನು ತರಿಸಿದ್ದಾರೆ.
ಮರಿಗಳ ಪಾಲನೆಗಾಗಿ ಒಂದು ತಿಂಗಳಿಗೆ ಲಕ್ಷಕ್ಕೂ ಅಧಿಕ ರೂ. ಖರ್ಚು ಮಾಡಿ ಬೆಳೆಸುತ್ತಿದ್ದು, ಅದಕ್ಕಾಗಿಯೇ ಕೆಲಸಗಾರರನ್ನು ನೇಮಕ ಮಾಡಲಾಗಿದೆ. ಒಂದೂವರೆ ತಿಂಗಳ ಮರಿಯಿಂದ, 1 ವರ್ಷದವರೆಗಿನ ನಾಯಿಯನ್ನು ಅವರು ಸಾಕುತ್ತಿದ್ದು, ಎಲ್ಲಾ ರೀತಿಯ ವ್ಯವಸ್ಥೆಗಳನ್ನು ಮಾಡಲಾಗಿದೆ.
ಓದಿ: ಬಿಎಸ್ಎಫ್ ಯೋಧರ ಜೊತೆ ಶ್ವಾನಗಳೂ ಮಾಡಿದ್ವು ಯೋಗ... ಹೇಗಿತ್ತು ಡಾಗ್ಸ್ ಯೋಗಾಯೋಗ!