ETV Bharat / state

ಉತ್ತರಕನ್ನಡ: ಮ್ಯಾಂಗನೀಸ್ ಲಾರಿ ಅಗ್ನಿಗಾಹುತಿ, ಹೊನ್ನಾವರದಲ್ಲಿ ಅಂಗಡಿಗಳಿಗೆ ತಗುಲಿದ ಬೆಂಕಿ

author img

By

Published : Jun 6, 2022, 9:09 PM IST

ಉತ್ತರಕನ್ನಡ ಜಿಲ್ಲೆಯಲ್ಲಿ ಸಂಭವಿಸಿದ ಪ್ರತ್ಯೇಕ ಬೆಂಕಿ ಅವಘಡಗಳಲ್ಲಿ ಮ್ಯಾಂಗನೀಸ್ ಲಾರಿ ಹಾಗೂ ನಾಲ್ಕು ಅಂಗಡಿಗಳು ಸುಟ್ಟು ಕರಕಲಾಗಿವೆ.

shops-caught-fire-in-honnavara
ಉತ್ತರಕನ್ನಡ: ಮ್ಯಾಂಗನೀಸ್ ಲಾರಿ ಅಗ್ನಿಗಾಹುತಿ, ಹೊನ್ನಾವರದಲ್ಲಿ ಅಂಗಡಿಗಳಿಗೆ ತಗುಲಿದ ಬೆಂಕಿ

ಕಾರವಾರ(ಉತ್ತರಕನ್ನಡ): ಚಲಿಸುತ್ತಿದ್ದ ಲಾರಿಯ ಬ್ಯಾಟರಿಯಲ್ಲಿ ಶಾರ್ಟ್ ಸರ್ಕ್ಯೂಟ್ ಆಗಿ ಬೆಂಕಿ ಹೊತ್ತಿಕೊಂಡ ಘಟನೆ ಯಲ್ಲಾಪುರ ತಾಲೂಕಿನ ಅರಬೈಲ ಘಟ್ಟದಲ್ಲಿ ನಡೆದಿದೆ. ಹೊಸಪೇಟೆಯಿಂದ ಮಂಗಳೂರಿಗೆ ಮ್ಯಾಂಗನೀಸ್ ಅದಿರು ಸಾಗಿಸುತ್ತಿದ್ದ ಲಾರಿ ಬೆಂಕಿಗೆ ಆಹುತಿಯಾಗಿದೆ.

ಕಿರವತ್ತಿ ಮೂಲದ ವ್ಯಕ್ತಿಯೊಬ್ಬರ ಮಾಲೀಕತ್ವದ ಲಾರಿ ಇದಾಗಿದೆ. ಕೂಡಲೇ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳದವರು ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಅದಾಗಲೇ ಲಾರಿ ಸುಟ್ಟು ಕರಕಲಾಗಿತ್ತು. ಘಟನೆಯಿಂದ ರಾಷ್ಟ್ರೀಯ ಹೆದ್ದಾರಿ 63ರ ಅರಬೈಲ್ ಘಟ್ಟದಲ್ಲಿ ಇನ್ನಿತರ ವಾಹನಗಳ ಸಂಚಾರಕ್ಕೆ ಅಡ್ಡಿಯುಂಟಾಗಿತ್ತು. ಈ ಕುರಿತು ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮ್ಯಾಂಗನೀಸ್ ಲಾರಿ ಅಗ್ನಿಗಾಹುತಿ

ಹೊನ್ನಾವರದಲ್ಲಿ ಬೆಂಕಿ ಅವಘಡ: ಅಂಗಡಿಯೊಂದಕ್ಕೆ ತಗುಲಿದ ಬೆಂಕಿ ಅಕ್ಕಪಕ್ಕದ ಇತರೆ ಅಂಗಡಿಗಳಿಗೂ ತಗುಲಿ ನಾಲ್ಕು ಅಂಗಡಿಗಳು ಸುಟ್ಟಿರುವ ಘಟನೆ ಹೊನ್ನಾವರ ಹೈವೇ ಸರ್ಕಲ್ ಬಳಿ ನಡೆದಿದೆ. ಹೈವೇ ಸರ್ಕಲ್ ಬಳಿ ಸೋಮವಾರ ನಸುಕಿನಜಾವ ಅಂಗಡಿಯೊಂದರಲ್ಲಿ ಕಾಣಿಸಿಕೊಂಡ ಬೆಂಕಿ ಬಳಿಕ ಮೂರು ಅಂಗಡಿಗಳಿಗೆ ವ್ಯಾಪಿಸಿದೆ.

ಮ್ಯಾಂಗನೀಸ್ ಲಾರಿ ಅಗ್ನಿಗಾಹುತಿ

ಘಟನೆಯಲ್ಲಿ ಗಣಪತಿ ಸೋಮಯ್ಯ ನಾಯ್ಕ ಎಂಬುವರ ಹೂವಿನ ಅಂಗಡಿ, ಗೋವಿಂದ ಶೆಟ್ಟಿಯವರ ತರಕಾರಿ ಅಂಗಡಿ ಹಾಗೂ ಮಹೇಶ ನಾಗಪ್ಪ ನಾಯ್ಕರವರ ಹಣ್ಣಿನ ಅಂಗಡಿಗಳು ಸಂಪೂರ್ಣ ಸುಟ್ಟು ಹೋಗಿದ್ದು, ತೀವ್ರ ನಷ್ಟ ಅನುಭವಿಸುವಂತಾಗಿದೆ. ಬೆಳಗಿನಜಾವ ಅಂಗಡಿ ಮುಚ್ಚಿದ್ದರಿಂದ ಸ್ಥಳದಲ್ಲಿ ಯಾರೂ ಇರಲಿಲ್ಲ. ವಿಷಯ ತಿಳಿದು ಅಗ್ನಿಶಾಮಕದಳವರು ಅಕ್ಕಪಕ್ಕ ಬೆಂಕಿ ಹರಡದಂತೆ ತಡೆದಿದ್ದಾರೆ. ಪಟ್ಟಣ ಪಂಚಾಯತ್ ಅಧ್ಯಕ್ಷ ಶಿವರಾಜ ಮೇಸ್ತ, ತಹಶಿಲ್ದಾರ್​​ ನಾಗರಾಜ ನಾಯ್ಕ ಹಾಗೂ ಪೊಲೀಸ್ ಇಲಾಖೆಯವರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ: ಓಮ್ನಿ-ಬಸ್​ ನಡುವೆ ಭೀಕರ ಅಪಘಾತ.. ಮೊಬೈಲ್​​ನಲ್ಲಿ ಸೆರೆಯಾಯ್ತು ಭಯಾನಕ ದೃಶ್ಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.