ETV Bharat / state

ಸಹಸ್ರಲಿಂಗದಲ್ಲಿ ಶಿವಲಿಂಗಗಳು ಕಣ್ಮರೆ: ಸಂರಕ್ಷಣೆಗೆ ಶಿವಭಕ್ತರು, ಸ್ಥಳೀಯರ ಒತ್ತಾಯ - Shalmala river in Sahasralinga

ಹದಿನೈದನೇ ಶತಮಾನದಲ್ಲಿ ಸೋದೆ ಅರಸರ ಕಾಲದಲ್ಲಿ ರಾಜ ಅರಸಪ್ಪ ನಾಯಕ ಅವರು ಸಂತಾನಕ್ಕಾಗಿ ಹರಕೆ ಕಟ್ಟಿಕೊಂಡಿದ್ದರು. ಶಿವಕೃಪೆಯ ಕಟಾಕ್ಷದಿಂದ ಅವರಿಗೆ ಸಂತಾನ ಪ್ರಾಪ್ತಿಯಾದ ಬಳಿಕ ದೈವಾಜ್ಞೆಯಂತೆ ಈ ಸ್ಥಳದಲ್ಲಿ ಸಹಸ್ರಲಿಂಗಗಳನ್ನು ಕೆತ್ತಿಸಿದ್ದರು ಎಂಬ ಪ್ರತೀತಿಯಿದೆ.

Shivalinga in Sahasralinga
ಸಹಸ್ರಲಿಂಗ ಕ್ಷೇತ್ರದಲ್ಲಿರುವ ಶಿವಲಿಂಗ
author img

By

Published : Jun 26, 2022, 9:04 AM IST

ಶಿರಸಿ: ಉತ್ತರಕನ್ನಡ ಜಿಲ್ಲೆಯ ಪವಿತ್ರ ಕ್ಷೇತ್ರಗಳ ಪೈಕಿ ಶಿರಸಿಯ ಸಹಸ್ರಲಿಂಗವೂ ಒಂದು.‌ ಶಾಲ್ಮಲಾ ನದಿಯಲ್ಲಿರುವ ಈ ಕ್ಷೇತ್ರಕ್ಕೆ ಬರುವ ಭಕ್ತಾಧಿಗಳು ಸಾವಿರಾರು ಲಿಂಗಗಳ ದರ್ಶನ ಪಡೆದು ಪುನೀತರಾಗುತ್ತಾರೆ. ಆದರೆ, ಇತ್ತೀಚೆಗೆ ಕ್ಷೇತ್ರದಲ್ಲಿ ಲಿಂಗಗಳೇ ಕಣ್ಮರೆಯಾಗುತ್ತಿವೆ. ಸಾವಿರ ಸಂಖ್ಯೆಯಲ್ಲಿದ್ದ ಲಿಂಗಗಳು ಪ್ರಸ್ತುತ ಬೆರಳೆಣಿಕೆಯಷ್ಟು ಮಾತ್ರ ಕಾಣತೊಡಗಿವೆ.

ಶಾಲ್ಮಲಾ ನದಿಯ ಎಕರೆಗಟ್ಟಲೆ ಪ್ರದೇಶದಲ್ಲಿ ವ್ಯಾಪಿಸಿಕೊಂಡಿದ್ದ ಕಲ್ಲುಗಳ ಮೇಲೆ ಸಾವಿರಾರು ಸಂಖ್ಯೆಯಲ್ಲಿ ಶಿವಲಿಂಗಗಳಿದ್ದವು. ಇವುಗಳು ಒಂದಕ್ಕಿಂತ ಒಂದು ವಿಭಿನ್ನ, ಅಷ್ಟೇ ಆಕರ್ಷಕ. ಈ ನದಿ ಒಟ್ಟು 290 ಕಿ.ಮೀ. ಹರಿಯುತ್ತಿದ್ದು, ಒಳಭಾಗದಲ್ಲೂ ಸಾಕಷ್ಟು ಲಿಂಗಗಳಿವೆ.

ಮಳೆಗಾಲದಲ್ಲಿ ರಭಸವಾಗಿ ಹರಿಯುವ ನದಿ ಹಲವು ಬಂಡೆಕಲ್ಲುಗಳನ್ನು ಕೊಚ್ಚಿಕೊಂಡು ಸಾಗಿದ್ದು ಹಾಗೂ ನೀರಿನ ರಭಸಕ್ಕೆ ಸವೆದು ಹೋಗಿ ಲಿಂಗಗಳು ಕಣ್ಮರೆಯಾಗಿರೋದು ಒಂದು ಕಾರಣವಾದ್ರೆ, ಇಲ್ಲಿಗೆ ಭೇಟಿ ನೀಡುವ ಕೆಲವು ಕಿಡಿಗೇಡಿ ಪ್ರವಾಸಿಗರು ಕೂಡಾ ದಾಂಧಲೆ ಎಬ್ಬಿಸಿ, ಮೋಜಿಗಾಗಿ ಕಲ್ಲುಗಳನ್ನು ಒಡೆದು ಹಾಕಿರುವ ದೂರುಗಳಿವೆ. ಸಣ್ಣ ಸಣ್ಣ ಲಿಂಗಗಳನ್ನು ಕೆಲವರು ಕೊಂಡೊಯ್ದಿರುವುದಾಗಿಯೂ ಮಾಹಿತಿಗಳಿವೆ.

2015–16ರಲ್ಲಿ ಸಮೀಕ್ಷೆ ನಡೆಸಿದಾಗ ಬೆರಳೆಣಿಕೆಯ ಶಿವಲಿಂಗಗಳು ಉಳಿದುಕೊಂಡಿರುವುದು ದೃಢಪಟ್ಟಿತ್ತು. ಆದರೆ, ಪ್ರಸ್ತುತ ಇವುಗಳ ಸಂಖ್ಯೆ ಮತ್ತಷ್ಟು ಕಡಿಮೆಯಾಗಿವೆ. ಹಿಂದಿನ ಸರ್ಕಾರ ಕ್ಷೇತ್ರದ ಅಭಿವೃದ್ದಿಗಾಗಿ ಒಂದಿಷ್ಟು ಹಣ ಮಿಸಲಿಟ್ಟಿದ್ದು, ಪ್ರವಾಸಿಗರಿಗಾಗಿ ಮೂಲಭೂತ ಸೌಕರ್ಯ ಒದಗಿಸಲಾಗಿದೆ. ಆದರೆ, ಶಿವಲಿಂಗಗಳ ರಕ್ಷಣೆಗೆ ಮಾತ್ರ ಈವರೆಗೆ ಯಾವುದೇ ಕ್ರಮವಾಗಿಲ್ಲ.

Nandi in Sahasralinga

ಹದಿನೈದನೇ ಶತಮಾನದಲ್ಲಿ ಸೋದೆ ಅರಸರ ಕಾಲದಲ್ಲಿ ರಾಜ ಅರಸಪ್ಪ ನಾಯಕ ಅವರು ಸಂತಾನಕ್ಕಾಗಿ ಹರಕೆ ಕಟ್ಟಿಕೊಂಡಿದ್ದರು. ಶಿವಕೃಪೆಯ ಕಟಾಕ್ಷದಿಂದ ಅವರಿಗೆ ಸಂತಾನ ಪ್ರಾಪ್ತಿಯ ಬಳಿಕ ದೈವಾಜ್ಞೆಯಂತೆ ಈ ಸ್ಥಳದಲ್ಲಿ ಸಹಸ್ರಲಿಂಗಗಳನ್ನು ಕೆತ್ತಿಸಿದ್ದರು ಎಂಬುದು ಪ್ರತೀತಿ. ಅಂದಿನಿಂದ ಇಂದಿನವರೆಗೂ ಈ ಸ್ಥಳಕ್ಕೆ ಪ್ರತೀ ವರ್ಷ ಬೇಸಿಗೆಗಾಲದ ಸಮಯದಲ್ಲಿ ಶಿವರಾತ್ರಿ ಹಾಗೂ ಸಂಕ್ರಾಂತಿಯಂದು ಹದಿನೈದರಿಂದ ಇಪ್ಪತ್ತು ಸಾವಿರ ಭಕ್ತರು ಭೇಟಿ ನೀಡಿ ಪೂಜೆ ಸಲ್ಲಿಸುತ್ತಾರೆ.

ಮಳೆಗಾಲದಲ್ಲಿ ಮಾತ್ರ ಈ ಸ್ಥಳ ಸಂಪೂರ್ಣವಾಗಿ ಶಾಲ್ಮಲಾ ನದಿಯಲ್ಲಿ ಮುಳುಗಿರುತ್ತದೆ. ಇಲ್ಲಿ ಮೇಲ್ಗಡೆ 8 ಕಿ.ಮೀ. ಹಾಗೂ ಕೆಳಗಡೆ 8 ಕಿ.ಮೀ.‌ ಸೇರಿ ಒಟ್ಟು 16 ಕಿ.ಮೀ.ಯಲ್ಲಿ ಸಹಸ್ರಲಿಂಗಗಳು ವ್ಯಾಪಿಸಿವೆ. ಮಕ್ಕಳಾಗದವರು ಕ್ಷೇತ್ರದಲ್ಲಿ ಹರಕೆ ಕಟ್ಟಿಕೊಂಡು ಸಂತಾನ ಪ್ರಾಪ್ತಿಯಾದ ಬಳಿಕ ಇಲ್ಲಿ ತೊಟ್ಟಿಲು ತಂದು ಪೂಜೆ ಮಾಡಿಕೊಂಡು ಹೋಗುತ್ತಾರೆ. ದೊಡ್ಡ ನಂದಿ ವಿಗ್ರಹ ಇರೋದ್ರಿಂದ ಸಹಸ್ರಲಿಂಗವನ್ನು ಬಂಡೆಬಸಪ್ಪ ಹೊಳೆ ಅಂತಲೂ ಕರೆಯುತ್ತಾರೆ.

Nandi and Shivalinga in Sahasralinga

ಇದನ್ನೂ ಓದಿ: ಉತ್ತರಾಖಂಡದ ಕೈಂಚಿ ಧಾಮ್‌ ಗೊತ್ತೇ? ಸ್ಟೀವ್‌ ಜಾಬ್ಸ್‌ ಬದುಕು ಬದಲಿಸಿತ್ತಂತೆ ಇಲ್ಲಿನ ಬಾಬಾರ ಆಶೀರ್ವಾದ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.