ಶಿರಸಿ: ಮಳೆಗಾಗಿ ಮತ್ತು ಲೋಕ ಕಲ್ಯಾಣಕ್ಕಾಗಿ ಉತ್ತರ ಕನ್ನಡದ ಶಿರಸಿಯ ಪ್ರಸಿದ್ಧ ಮಾರಿಕಾಂಬಾ ದೇವಸ್ಥಾನದಲ್ಲಿ ಪರ್ಜನ್ಯ ಜಪ ನಡೆಸಲಾಯಿತು.
ಮಾರಿಕಾಂಬಾ ದೇವಸ್ಥಾನದಲ್ಲಿ ಬೆಳಿಗ್ಗೆ 9.30ಕ್ಕೆ ದೇವರಿಗೆ ಪೂಜೆ ಸಲ್ಲಿಸಿ, ಅನಂತರ ಎದುರಿಗೆ ಇರುವ ತ್ರಯಂಬಕ ದೇವಸ್ಥಾನದಲ್ಲಿ 2 ಗಂಟೆಗಳ ಕಾಲ ಮಳೆ, ಬೆಳೆ ಸುಭಿಕ್ಷವಾಗಿ ಇರಲೆಂದು ಪ್ರಾರ್ಥಿಸಿ ವಿಶೇಷ ಪೂಜೆ ನಡೆಸಲಾಗಿದೆ. ಪೂಜೆಯಲ್ಲಿ ಮಾರಿಕಾಂಬಾ ದೇವಸ್ಥಾನದ ಧರ್ಮದರ್ಶಿಗಳು, ನೂರಾರು ಭಕ್ತರು ಭಾಗಿಯಾಗಿದ್ದರು.
ನೀರಿನ ಅಭಾವ ಹಿನ್ನೆಲೆ ಮುಜರಾಯಿ ಇಲಾಖೆ ಆದೇಶದ ಮೇರೆಗೆ ನಡೆದ ಪರ್ಜನ್ಯ ಜಪ ಮತ್ತು ಚಂಡಿಕಾ ಪಾರಾಯಣವನ್ನು ಶಾಸ್ತ್ರೋಕ್ತವಾಗಿ ನಡೆಸಿ ಲೋಕ ಕಲ್ಯಾಣಕ್ಕಾಗಿ ಪ್ರಾರ್ಥಿಸಲಾಗಿದೆ.