ಶಿರಸಿ: ಭಾರತ ಸರ್ಕಾರದ ವತಿಯಿಂದ ಸ್ವಚ್ಛ ಭಾರತ ಅಂಗವಾಗಿ ನೀಡಲಾಗುವ ಸ್ವಚ್ಛ ಸರ್ವೇಕ್ಷಣ್ ಅಭಿಯಾನದ ಪ್ರಶಸ್ತಿಯಲ್ಲಿ ಶಿರಸಿ ನಗರಸಭೆ ರಾಜ್ಯಕ್ಕೆ 3ನೇ ಸ್ಥಾನ ಪಡೆದಿದೆ.
ದಕ್ಷಿಣ ಭಾರತ ಮಟ್ಟದಲ್ಲಿಯೂ ಉತ್ತಮ ಸಾಧನೆ ಮಾಡಿರುವ ಶಿರಸಿ ನಗರಸಭೆ, 23ನೇ ಸ್ಥಾನದಲ್ಲಿದೆ. ರಾಜ್ಯದ 39 ನಗರಸಭೆಯಲ್ಲಿ 3ನೇ ಸ್ಥಾನ ಬಂದಿದ್ದು, ದಕ್ಷಿಣ ಭಾರತದ 189 ನಗರಸಭೆಯಲ್ಲಿ 23ನೇ ಸ್ಥಾನಗಳಿಸಿದೆ.
2019 ರಲ್ಲಿಯೂ ಉತ್ತಮ ಸಾಧನೆ ಮಾಡಿದ್ದ ಶಿರಸಿ ನಗರಸಭೆ, ರಾಜ್ಯಕ್ಕೆ 19 ಹಾಗೂ ದಕ್ಷಿಣ ಭಾರತಕ್ಕೆ 82ನೇ ಸ್ಥಾನ ಪಡೆದುಕೊಂಡಿತ್ತು. ಆದರೆ ಈ ಬಾರಿ ಹೆಚ್ಚಿನ ಸಾಧನೆ ಮಾಡಿದ್ದು, ಶಿರಸಿ ಕೀರ್ತಿಯನ್ನು ದಕ್ಷಿಣ ಭಾರತ ಮಟ್ಟಕ್ಕೆ ಕೊಂಡೊಯ್ದಿದೆ. ಶಿರಸಿ ನಗರಸಭೆಯ ಈ ಉನ್ನತ ಸಾಧನೆಯಲ್ಲಿ ಸ್ವಚ್ಛ ಭಾರತ ಅಭಿಯಾನದ ಪ್ರಮುಖ ಆರ್. ಎಮ್. ವೆರ್ಣೇಕರ ಅವರ ಪಾತ್ರ ದೊಡ್ಡದಿದ್ದು, ಪೌರ ಕಾರ್ಮಿಕರಿಂದ ಶಿರಸಿಯು ದೇಶ ಮಟ್ಟದಲ್ಲಿ ಗುರುತಿಸುವಂತೆ ಮಾಡಿದ್ದಾರೆ.