ETV Bharat / state

ವಿರೋಧಿಗಳಿಗೆ ನಡುಕ ಹುಟ್ಟಿಸಿದ ಹೆಬ್ಬಾರ್ ಸಮಾವೇಶ - ಮಾಜಿ ಶಾಸಕ ವಿ.ಎಸ್.ಪಾಟೀಲ್

ಅನರ್ಹ ಶಾಸಕ ಎಂಬ ಹಣೆಪಟ್ಟಿ ಕಟ್ಟಿಕೊಂಡು ಚುನಾವಣೆಗೆ ಧುಮುಕಿರುವ ಬಿಜೆಪಿ ಅಭ್ಯರ್ಥಿ ಶಿವರಾಮ ಹೆಬ್ಬಾರ್ ಸೋಮವಾರ ನಾಮಪತ್ರ ಸಲ್ಲಿಲಿದ್ದು, ಬೃಹತ್ ಸಮಾವೇಶ ನಡೆಸಿ ವಿರೋಧಿಗಳಿಗೆ ಟಾಂಗ್ ನೀಡಿದ್ದಾರೆ.

ವಿರೋದಿಗಳಿಗೆ ನಡುಕ ಹುಟ್ಟಿಸಿದ ಹೆಬ್ಬಾರ್ ಸಮಾವೇಶ
author img

By

Published : Nov 19, 2019, 3:35 AM IST

ಶಿರಸಿ: ಅನರ್ಹ ಶಾಸಕ ಎಂಬ ಹಣೆಪಟ್ಟಿ ಕಟ್ಟಿಕೊಂಡು ಚುನಾವಣೆಗೆ ಧುಮುಕಿರುವ ಬಿಜೆಪಿ ಅಭ್ಯರ್ಥಿ ಶಿವರಾಮ ಹೆಬ್ಬಾರ್ ಸೋಮವಾರ ನಾಮಪತ್ರ ಸಲ್ಲಿಲಿದ್ದು, ಬೃಹತ್ ಸಮಾವೇಶ ನಡೆಸಿ ವಿರೋಧಿಗಳಿಗೆ ಟಾಂಗ್ ನೀಡಿದ್ದಾರೆ.

ಯಲ್ಲಾಪುರ ಪಟ್ಟಣದ ವೈಟಿಎಸ್ಎಸ್ ಮೈದಾನದಲ್ಲಿ ನಾಮಪತ್ರ ಸಲ್ಲಿಕೆಯ ಸಭೆಯನ್ನು ಹೆಬ್ಬಾರ್ ಆಯೋಜಿಸಿದ್ದು, 10 ಸಾವಿರಕ್ಕೂ ಅಧಿಕ ಬೆಂಬಲಿಗರು ಸಭೆಯಲ್ಲಿ ಪಾಲ್ಗೊಂಡು ಇವರ ಮೇಲಿನ ಅಭಿಮಾನ ಪ್ರದರ್ಶಿಸಿದ್ದಾರೆ.

ರಾಜ್ಯ ಬಿಜೆಪಿ ನಾಯಕರಾದ ನಳೀನ್ ಕುಮಾರ್ ಕಟೀಲ್, ಕೋಟಾ ಶ್ರೀನಿವಾಸ ಪೂಜಾರಿ, ಸಂಸದ ಅನಂತ್ ಕುಮಾರ್ ಹೆಗಡೆ ಸೇರಿದಂತೆ ಅನೇಕರು ಈ ವೇಳೆ ಬೆಂಬಲ ನೀಡಿದರು. ‌

ವಿರೋಧಿಗಳಿಗೆ ನಡುಕ ಹುಟ್ಟಿಸಿದ ಹೆಬ್ಬಾರ್ ಸಮಾವೇಶ

ಹಿರಿಯರ ನಿರ್ಧಾರದಂತೆ ಎಲ್ಲ ಒಂದಾಗಿ ಚುನಾವಣೆ ಎದುರಿಸಿ ಹೆಬ್ಬಾರರನ್ನು ಗೆಲ್ಲುಸುತ್ತೇವೆ ಎಂದು ಮಾಜಿ ಶಾಸಕ ವಿ.ಎಸ್.ಪಾಟೀಲ್ ಇದೇ ವೇಳೆ ಹೇಳಿದರು. ಒಟ್ಟಾರೆಯಾಗಿ ನಾಮಪತ್ರ ಸಮಾವೇಶದಲ್ಲಿ ಹೆಬ್ಬಾರ್ ತಮ್ಮ ಶಕ್ತಿ ಪ್ರದರ್ಶನ ಮಾಡಿದ್ದು, ವಿರೋಧಿಗಳಿಗೆ ನಡುಕ ಹುಟ್ಟಿಸಿದ್ದಾರೆ. ಮಂಗಳವಾರದಿಂದ ಕ್ಷೇತ್ರದಾದ್ಯಂತ ಪ್ರಚಾರ ನಡೆಯಲಿದ್ದು, ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದ್ದಾರೆ.‌

Intro:ಶಿರಸಿ :
Intro :
ವಿರೋಧ ಪಕ್ಷಗಳಿಂದ ಅನರ್ಹ ಹಣೆಪಟ್ಟಿಕೊಂಡು ಚುನಾವಣೆಗೆ ಧುಮುಕಿರುವ ಮಾಜಿ ಶಾಸಕ ಶಿವರಾಮ ಹೆಬ್ಬಾರ್ ಸೋಮವಾರ ನಾಮಪತ್ರ ಸಲ್ಲಿಕೆಯ ಸಂದರ್ಭದಲ್ಲಿ ಬೃಹತ್ ಸಮಾವೇಶ ನಡೆಸಿ ವಿರೋಧಿಗಳಿಗೆ ಟಾಂಗ್ ನೀಡಿದ್ದಾರೆ. ೧೦ ಸಾವಿರಕ್ಕೂ ಅಧಿಕ ಬೆಂಬಲಿಗರು ಸಭೆಯಲ್ಲಿ ಪಾಲ್ಗೊಂಡು ಹೆಬ್ಬಾರರ ಮೇಲಿನ ಅಭಿಮಾನ ಪ್ರದರ್ಶಿಸಿದ್ದಾರೆ.
Body:V-1 :
ಯಲ್ಲಾಪುರ ಪಟ್ಟಣದ ವೈಟಿಎಸ್ಎಸ್ ಮೈದಾನದಲ್ಲಿ ನಾಮಪತ್ರ ಸಲ್ಲಿಕೆಯ ಸಭೆಯನ್ನು ಹೆಬ್ಬಾರ್ ಆಯೋಜಿಸಿದ್ದರು. ಸೋಮವಾರ ನಾಮಪತ್ರ ಸಲ್ಲಿಸಲು ಕೊನೆಯ ದಿನವಾದ ಕಾರಣ ಮಾಜಿ ಶಾಸಕ ಹೆಬ್ಬಾರ್ ಬಿಜೆಪಿಯ ಅಭ್ಯರ್ಥಿಯಾಗಿ ಉಮೇದುವಾರಿಕೆ ಸಲ್ಲಿಸಿದ್ದಾರೆ. ರಾಜ್ಯ ಬಿಜೆಪಿಯ ನಾಯಕರಾದ ನಳೀನ್ ಕುಮಾರ್ ಕಟೀಲ್, ಕೋಟಾ ಶ್ರೀನಿವಾಸ ಪೂಜಾರಿ, ಸಂಸದ ಹೆಗಡೆ ಸೇರಿದಂತೆ ಹಲವು ಶಾಸಕರು ನೈತಿಕ ಬೆಂಬಲ ನೀಡಿದರು. ‌

ಬೈಟ್ (೧) : ಶಿವರಾಮ ಹೆಬ್ಬಾರ್, ಬಿಜೆಪಿ ಅಭ್ಯರ್ಥಿ. ‌
V-2 :
ಒಗ್ಗಟ್ಟಿನ ಜಪ !
ಸಮಾವೇಶದ ಉದ್ದಕ್ಕೂ ಹೆಬ್ಬಾರ್ ಮತ್ತು ಬಿಜೆಪಿಗರು ಒಗ್ಗಟ್ಟಿನ ಮಂತ್ರ ಪಠಿಸಿದರು. ಯಲ್ಲಾಪುರ ವಿಧಾನಸಭಾ ಮುಖಂಡರಾದ ವಿ‌.ಎಸ್.ಪಾಟೀಲ್, ಎಲ್.ಟಿ.ಪಾಟೀಲ್, ದ್ಯಾಮಣ್ಣ ದೊಡ್ಮನಿ ಕರೆದುಕೊಂಡು ಹೋಗಿ ನಾಮಪತ್ರ ಸಲ್ಲಿಸಿದರು. ' ಹಿರಿಯರ ನಿರ್ಧಾರಂತೆ ಎಲ್ಲಾ ಒಂದಾಗಿ ಚುನಾವಣೆ ಎದುರಿಸಿ ಹೆಬ್ಬಾರರನ್ನು ಗೆಲ್ಲುಸುತ್ತೇವೆ ' ಎಂದು ಮಾಜಿ ಶಾಸಕ ವಿ.ಎಸ್.ಪಾಟೀಲ್ ಹೇಳಿದರು.

ಬೈಟ್ (೨) : ವಿ.ಎಸ್.ಪಾಟೀಲ್, ಮಾಜಿ ಶಾಸಕ.

Conclusion:V-3 :
ಒಟ್ಟಾರೆಯಾಗಿ ನಾಮಪತ್ರ ಸಮಾವೇಶದಲ್ಲಿ ಹೆಬ್ಬಾರ್ ತಮ್ಮ ಶಕ್ತಿ ಪ್ರದರ್ಶನ ಮಾಡಿದ್ದು, ವಿರೋಧಿಗಳಿಗೆ ನಡುಕ ಹುಟ್ಟಿಸಿದ್ದಾರೆ. ಮಂಗಳವಾರದಿಂದ ಕ್ಷೇತ್ರದಾದ್ಯಂತ ಪ್ರಚಾರ ನಡೆಯಲಿದ್ದು, ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದ್ದಾರೆ.‌
..........
ಸಂದೇಶ ಭಟ್ ಶಿರಸಿ.
ETV Bharat Logo

Copyright © 2025 Ushodaya Enterprises Pvt. Ltd., All Rights Reserved.