ETV Bharat / state

ಜೀಪಿನಡಿ ಸಿಲುಕಿ ಅಪ್ಪನ ಸಾವು-ಬದುಕಿನ ಹೋರಾಟ: ಪ್ರಾಣ ಉಳಿಸಿದ ಮಗಳಿಗೆ 'ಕೆಳದಿ ಚನ್ನಮ್ಮ ಶೌರ್ಯ ಪ್ರಶಸ್ತಿ' - ETv Bharat news

ಜೀಪಿನಡಿ ಸಿಲುಕಿ ಜೀವನ್ಮರಣದ ಹೋರಾಟ ನಡೆಸುತ್ತಿದ್ದ ತನ್ನ ತಂದೆಯನ್ನು ಬದುಕಿಸಲು ಬಾಲಕಿ ಸುಮಾರು ಎರಡು ಕಿಲೋಮೀಟರ್ ದೂರ ಓಡಿ ಹೋಗಿದ್ದಾಳೆ. ಈ ಮೂಲಕ ಜನರನ್ನು ಕರೆತಂದು ತಂದೆಯ ಪ್ರಾಣ ಉಳಿಸಿದ್ದಳು. ಬಾಲಕಿಯ ಸಮಯ ಪ್ರಜ್ಞೆಯನ್ನು ಸರ್ಕಾರ ಗುರುತಿಸಿದೆ.

Shaurya Award for Kaushalya of Siddapur
ಸಿದ್ದಾಪುರದ ಕೌಶಲ್ಯಳಿಗೆ ಶೌರ್ಯ ಪ್ರಶಸ್ತಿ
author img

By

Published : Nov 14, 2022, 11:09 AM IST

Updated : Nov 14, 2022, 1:23 PM IST

ಶಿರಸಿ: ಈ ಬಾರಿಯ ಕೆಳದಿ ಚೆನ್ನಮ್ಮ ಶೌರ್ಯ ಪ್ರಶಸ್ತಿಯನ್ನು ತನ್ನ ಅಪ್ಪನ ಪ್ರಾಣ ಉಳಿಸಿದ ಸಿದ್ದಾಪುರ ತಾಲೂಕಿನ ಕಾನಸೂರಿನ ಕೌಸಲ್ಯ ವೆಂಕಟರಮಣ ಹೆಗಡೆ ಎಂಬ ಬಾಲಕಿಗೆ ಸಮಾಜ ಕಲ್ಯಾಣ ಇಲಾಖೆ ಘೋಷಿಸಿದೆ.

ಮಗಳು ಅಪ್ಪನ ಪ್ರಾಣ ಉಳಿಸಿದ್ದೇಗೆ?: ಈ ಬಾಲಕಿ 2021ರ ಮಾರ್ಚ್ 15ರಂದು ತನ್ನ ತಂದೆ ವೆಂಕಟರಮಣ ಹೆಗಡೆ ಅವರೊಂದಿಗೆ ಸಮೀಪದ ಹಳ್ಳಿಯೊಂದರಲ್ಲಿ ನಿಗದಿಯಾಗಿದ್ದ ಮಂಗಳ ಕಾರ್ಯದ ಅಡುಗೆಗೆಂದು ಜೀಪಿನಲ್ಲಿ ಹೋಗುತ್ತಿದ್ದರು. ರಸ್ತೆ ಮಧ್ಯೆ ತಂದೆ ಚಲಾಯಿಸುತ್ತಿದ್ದ ಜೀಪು ಆಕಸ್ಮಿಕವಾಗಿ ಪಲ್ಟಿ ಹೊಡೆದಿದೆ. ವೆಂಕಟರಮಣ ಹೆಗಡೆ ಜೀಪಿನಡಿ ಸಿಲುಕಿಕೊಂಡಿದ್ದರು. ಈ ಸಂದರ್ಭದಲ್ಲಿ ಜೀಪಿನಲ್ಲಿದ್ದ ಕೌಸಲ್ಯ ಹೆಗಡೆ ಹಾಗೂ ಆಕೆಯ ಐದು ವರ್ಷದ ತಮ್ಮ ಇಬ್ಬರೂ ಸೇರಿ ತಂದೆಯನ್ನು ಬದುಕಿಸಲು ಹರಸಾಹಸಪಟ್ಟು ವಿಫಲವಾಗಿದ್ದರು.

ಅಪ್ಪನ ಪ್ರಾಣ ಉಳಿಸಿದ ಮಗಳಿಗೆ 'ಕೆಳದಿ ಚನ್ನಮ್ಮ ಶೌರ್ಯ ಪ್ರಶಸ್ತಿ'

ಜೀವ ಉಳಿಸಿಕೊಳ್ಳಲು ಹೋರಾಡುತ್ತಿದ್ದ ತನ್ನ ತಂದೆಯನ್ನು ಬದುಕಿಸಲು ಕೌಸಲ್ಯ ಸುಮಾರು ಎರಡು ಕಿಲೋಮೀಟರ್ ದೂರ ಓಡಿ ಹೋಗಿದ್ದಾಳೆ. ಜನರನ್ನು ಘಟನಾ ಸ್ಥಳಕ್ಕೆ ಕರೆತಂದು ತಂದೆಯ ಪ್ರಾಣ ಉಳಿಸಿದ್ದಾಳೆ. ಬಾಲಕಿಯ ಸಮಯ ಪ್ರಜ್ಞೆಯನ್ನು ಇದೀಗ ಸರ್ಕಾರ ಗುರುತಿಸಿದೆ. ಪ್ರತಿ ವರ್ಷ ನವೆಂಬರ್ 14ರಂದು ಸಾಹಸಮಯ ಪ್ರದರ್ಶನ ತೋರಿಸಿರುವ ಮಕ್ಕಳಿಗೆ ನೀಡುವ ಕೆಳದಿ ಚೆನ್ನಮ್ಮ ಶೌರ್ಯ ಪ್ರಶಸ್ತಿಯನ್ನು ಈ ಬಾರಿ ಬಾಲಕಿ ಕೌಸಲ್ಯಗೆ ನೀಡಲಾಗಿದೆ.

ಕೌಸಲ್ಯ ವೆಂಕಟರಮಣ ಹೆಗಡೆ ಕಾನಸೂರಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 7ನೇ ತರಗತಿ ಓದುತ್ತಿದ್ದಾಳೆ. ಸಣ್ಣ ವಯಸ್ಸಿನಲ್ಲಿಯೇ ವಿಶೇಷ ಸಾಹಸ ಮನೋಭಾವ ಪ್ರದರ್ಶಿಸಿ ಶೌರ್ಯ ಪ್ರಶಸ್ತಿ ಪಡೆದುಕೊಂಡ ಬಾಲಕಿಯ ಸಾಧನೆಗೆ ಕಾನಸೂರಿನ ಜನರು ಅಭಿನಂದನೆ ಸಲ್ಲಿಸಿದ್ದಾರೆ.

ಇದನ್ನೂ ಓದಿ: ಹಾದಿಯಲ್ಲಿ ಹೋಗೋರಿಗೆ ಕೊಟ್ಟಿಲ್ಲ.. ಕರ್ನಾಟಕ ರತ್ನ ಪ್ರಶಸ್ತಿಗೆ ಪುನೀತ್ ಅರ್ಹ ವ್ಯಕ್ತಿ: ಸಚಿವ ಹಾಲಪ್ಪ

Last Updated : Nov 14, 2022, 1:23 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.