ETV Bharat / state

ಭಟ್ಕಳದಲ್ಲಿ ಬೆಳ್ಳಂಬೆಳಗ್ಗೆ 3 ಅಂಗಡಿ, ಮನೆ ದರೋಡೆ: ಬುರ್ಖಾವನ್ನೂ ಬಿಡದ ಖದೀಮರು.. - ಬೆಳ್ಳಂಬೆಳಗ್ಗೆ ಸರಣಿ‌ ಕಳ್ಳತನ;

ಸರಣಿ ಕಳ್ಳತನದ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆದಿದ್ದು, ಮಾಹಿತಿ ಕಲೆಹಾಕಿದ್ದಾರೆ‌. ಈಗಾಗಲೇ ಸಿಸಿಟಿವಿ ದೃಶ್ಯಾವಳಿಗಳನ್ನು ಸಹ ಪಡೆದುಕೊಳ್ಳಲಾಗಿದ್ದು, ಇದರ ಸಹಾಯದಿಂದ ಕಳ್ಳರನ್ನು ಪತ್ತೆಹಚ್ಚಲು ಬಲೆ ಬೀಸಲಾಗಿದೆ.

serial theft in bhatkal, uttar kannada
ಭಟ್ಕಳದಲ್ಲಿ ಬೆಳ್ಳಂಬೆಳಗ್ಗೆ ಮೂರು ಅಂಗಡಿ, ಮನೆ ದರೋಡೆ: ಬುರ್ಖಾವನ್ನೂ ಬಿಡದ ಕದೀಮರು..
author img

By

Published : Sep 9, 2021, 11:05 AM IST

ಭಟ್ಕಳ(ಉತ್ತರ ಕನ್ನಡ): ಪಟ್ಟಣದಲ್ಲಿ ಮುಂಜಾನೆ ವೇಳೆ ಕಳ್ಳರು ಕೈಚಳಕ ತೋರಿದ್ದು, ಮೂರು ಅಂಗಡಿ ಹಾಗೂ ಒಂದು ಮನೆಯನ್ನು ದೋಚಿ ಪರಾರಿಯಾಗಿದ್ದಾರೆ. ಇಲ್ಲಿನ ಮಾರಿಕಟ್ಟಾ ಬಳಿ ಸರಣಿ ಕಳ್ಳತನ ‌ನಡೆದಿದ್ದು ನಗದು, ಚಿನ್ನಾಭರಣ ಸೇರಿದಂತೆ ಬೆಲೆಬಾಳುವ ವಸ್ತುಗಳನ್ನು ಕದ್ದೊಯ್ದಿರುವುದು ಜನತೆಯನ್ನು ಬೆಚ್ಚಿ ಬೀಳಿಸಿದೆ.

ಕಳ್ಳರು ಚಾಲಾಕಿತನದಿಂದ ಕಳ್ಳತ‌‌ನ ನಡೆಸಿದ್ದು, ಈ ಎಲ್ಲ ದೃಶ್ಯಾವಳಿಗಳು ಸಿಸಿ ಕೆಮೆರಾದಲ್ಲಿ ಸೆರೆಯಾಗಿವೆ. ಸಿಸಿ ಕ್ಯಾಮರಾ ದೃಶ್ಯಗಳ ಪ್ರಕಾರ ಕಳ್ಳರು ಬೆಳಗಿನ ಜಾವ 3.30ರ ವೇಳೆಗೆ ಕಳ್ಳತನ ನಡೆಸಿದ್ದಾಗಿ ತಿಳಿದು ಬಂದಿದೆ.

ಭಟ್ಕಳದಲ್ಲಿ ಬೆಳ್ಳಂಬೆಳಗ್ಗೆ ಮೂರು ಅಂಗಡಿ, ಮನೆ ದರೋಡೆ

ಪಟ್ಟಣದ ಮೂರು ಅಂಗಡಿಗಳಿಗೆ ಕನ್ನ ಹಾಕಿರುವ ಖದೀಮರು, ಬುರ್ಖಾ ಅಂಗಡಿಯಿಂದ ಸುಮಾರು 30 ಸಾವಿರ ರೂ. ರೂಪಾಯಿ ನಗದು, ಬುರ್ಖಾ ಮತ್ತು ಇತರ ವಸ್ತುಗಳನ್ನು ಕಳವು ಮಾಡಿದ್ದಾರೆ. ಇನ್ನೊಂದು ಅಂಗಡಿಯಿಂದ ಸುಮಾರು 10 ಸಾವಿರ ರೂ. ರೂಪಾಯಿ ನಗದು ಮತ್ತು ಕೆಲವು ವಸ್ತುಗಳನ್ನು ಕಳವು ಮಾಡಲಾಗಿದೆ.

ಬಳಿಕ ಮೂರನೇ ಅಂಗಡಿಯ ಬಾಗಿಲು ಮುರಿದು ಒಳ್ಳನುಗ್ಗಿದ ಕಳ್ಳರಿಗೆ ಏನೂ ಸಿಕ್ಕಿಲ್ಲ. ಹೀಗಾಗಿ, ಚಾಲಾಕಿಗಳು ಈ ಅಂಗಡಿಗಳ ಬಳಿಯೇ ಬೀಗ ಹಾಕಿದ್ದ ಮನೆಗೆ ನುಗ್ಗಿ, 10 ಸಾವಿರ ರೂ. ನಗದು, ಎರಡು ಚಿನ್ನದ ಸರ, ಮೂರು ಉಂಗುರಗಳು ಸೇರಿದಂತೆ ಆಭರಣಗಳನ್ನು ಕದ್ದು ತೆರಳಿದ್ದಾರೆ.

ಅಂಗಡಿ ಶೆಟರ್​​ ಮುರಿದ ಕಳ್ಳರು

ಕಳ್ಳರು ಕಬ್ಬಿಣದ ಕಂಬಿಯ ಸಹಾಯದಿಂದ ಅಂಗಡಿಯ ಶಟರ್‌ಗಳನ್ನು ಮುರಿದು ದೋಚಿದ್ದು, ಬಾಗಿಲಿನ ಬೀಗವನ್ನು ಒಡೆದು ಮನೆಯೊಳಗೆ ಪ್ರವೇಶಿಸಿದ್ದಾರೆ ಎಂದು ತಿಳಿದು ಬಂದಿದೆ. ಕೆಲವು ಸಿಸಿ ಕ್ಯಾಮರಾಗಳ ದಿಕ್ಕನ್ನು ಕಳ್ಳರು ಬದಲಾಯಿಸಿದ್ದಾರಾದರೂ, ಕೆಲವು ಕ್ಯಾಮರಾಗಳು ಕಳ್ಳತನವನ್ನು ಸೆರೆಹಿಡಿಯುವಲ್ಲಿ ಯಶಸ್ವಿಯಾಗಿವೆ.

ಸ್ಥಳಕ್ಕಾಗಮಿಸಿ ಪರಿಶೀಲಿಸಿದ ಪೊಲೀಸರು

ಸರಣಿ ಕಳ್ಳತನದ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆದಿದ್ದು, ಮಾಹಿತಿ ಕಲೆಹಾಕಿದ್ದಾರೆ‌. ಈಗಾಗಲೇ ಸಿಸಿಟಿವಿ ದೃಶ್ಯಾವಳಿಗಳನ್ನು ಸಹ ಪಡೆದುಕೊಳ್ಳಲಾಗಿದ್ದು, ಇದರ ಸಹಾಯದಿಂದ ಕಳ್ಳರನ್ನು ಪತ್ತೆಹಚ್ಚಲು ಬಲೆ ಬೀಸಲಾಗಿದೆ. ಮಾರಿಕಟ್ಟಾದ ಹಲವು ಸ್ಥಳಗಳಲ್ಲಿ ಸಿಸಿಟಿವಿ ಕ್ಯಾಮರಾಗಳನ್ನು ಪೊಲೀಸರು ಅಳವಡಿಸಿದ್ದು, ಕಳ್ಳರನ್ನು ಆದಷ್ಟು ಬೇಗ ಪತ್ತೆ ಮಾಡಬಹುದು ಎಂದು ಸ್ಥಳೀಯರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: Gang Rape Case: ಏಳನೇ ಆರೋಪಿ ಹತ್ತು ದಿನ ಪೊಲೀಸ್ ವಶಕ್ಕೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.