ETV Bharat / state

ನಾವು ಮೋದಿ ಮಾತಿನಂತೆ ನಡೆಯುತ್ತಿದ್ದೇವೆ... ಮಕ್ಕಳ ಪರಿಸರ ಕಾಳಜಿ ಕಂಡು ಬೆರಗಾದ ಜನ!

ಈ ಬಾರಿ ಸುರಿದ ಭೀಕರ ಮಳೆಗೆ ಹಲವಾರು ಗ್ರಾಮಗಳು ನಲುಗಿ ಹೋಗಿವೆ. ರಣಭಿಕರ ಮಳೆಗೆ ತುತ್ತಾದ ಗ್ರಾಮಗಳ ಪೈಕಿ ಗಂಗಾವಳಿಯೂ ಒಂದು. ಇದನ್ನು ಮನಗಂಡ ಹೆಗ್ಗಾರ ಗ್ರಾಮದ ಚಿಕ್ಕ ಮಕ್ಕಳು, ಸ್ವಚ್ಛತಾ ಕಾರ್ಯದಲ್ಲಿ ತೊಡಗಿಕೊಂಡು ಗ್ರಾಮವನ್ನು ಸ್ವಚ್ಛಗೊಳಿಸಿದ್ದಾರೆ,

ಇತರರಿಗೆ ಮಾದರಿಯಾದ ಮಕ್ಕಳು
author img

By

Published : Sep 17, 2019, 1:52 PM IST

ಶಿರಸಿ: ಕಳೆದ ತಿಂಗಳು ಸುರಿದ ಭಾರೀ ಮಳೆಗೆ ಬಲಿಯಾಗಿದ್ದ ಗ್ರಾಮವೊಂದರಲ್ಲಿ ಮಕ್ಕಳು ಸ್ವಚ್ಛತಾ ಆಂದೋಲನ ಹಮ್ಮಿಕೊಂಡು ಇತರರಿಗೆ ಮಾದರಿಯಾಗಿದ್ದಾರೆ.

ಉತ್ತರ ಕನ್ನಡ ಜಿಲ್ಲೆ ಅಂಕೋಲಾ ತಾಲೂಕಿನ ಗಡಿ ಪ್ರದೇಶವಾದ ಹೆಗ್ಗಾರ ಗ್ರಾಮದ ಚಿಕ್ಕ ಮಕ್ಕಳು, ಸ್ವಚ್ಛತಾ ಕಾರ್ಯದಲ್ಲಿ ತೊಡಗಿಸಿಕೊಂಡು ಸ್ವಚ್ಛ ಭಾರತ್ ಆಂದೋಲನಕ್ಕೆ ತಮ್ಮ ಕಿರು ಕಾಣಿಕೆ ನೀಡಿದ್ದಾರೆ.

ಇತರರಿಗೆ ಮಾದರಿಯಾದ ಮಕ್ಕಳು

ಹೆಗ್ಗಾರ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಆರನೇ ತರಗತಿಯ ವಿದ್ಯಾರ್ಥಿ ತೇಜಸ್ವಿ ಗಾಂವ್ಕರ, ತನ್ನ ಸಹಪಾಠಿ ಸಂಕೇತ ಪಟಗಾರ, ದರ್ಶನ ಸಿದ್ದಿ, ವಿನಯ್ ಭಟ್ ಜೊತೆಗೂಡಿ ಭಾನುವಾರದ ರಜಾ ದಿನದಂದು ಗಂಗಾವಳಿ ನೆರೆ ಪೀಡಿತ ಪ್ರದೇಶವಾದ ಹೆಗ್ಗಾರ ಗ್ರಾಮದ ಬೀದಿಗಳನ್ನು ಸ್ವಚ್ಛಗೊಳಿಸಿದ್ದಾರೆ. ಬೀದಿಯಲ್ಲಿ ಬಿದ್ದಿದ್ದ ಪ್ಲಾಸ್ಟಿಕ್ ಮತ್ತಿತರ ತ್ಯಾಜ್ಯಗಳನ್ನು ಚೀಲಗಳಲ್ಲಿ ತುಂಬಿ ಸೈಕಲ್​​ನಲ್ಲಿ ಹೇರಿಕೊಂಡು ಬೀದಿಯ ಕೊನೆಯಲ್ಲಿ ಒಟ್ಟುಗೂಡಿಸಿ ಬೆಂಕಿ ಹಚ್ವಿ ಚೊಕ್ಕ ಮಾಡಿದ್ದಾರೆ.

ಮಕ್ಕಳ ಸ್ವಚ್ಛತಾ ಕಾರ್ಯ ಕಂಡ ಊರವರು ಆಶ್ಚರ್ಯಚಕಿತರಾಗಿ ಶಿಕ್ಷಕರೇನಾದರೂ ಈ ರೀತಿ ಅಸೈನ್ಮೆಂಟ್ ಕೊಟ್ಟಿರಬಹುದೇ ಎಂದು ಪ್ರಶ್ನಿಸಿದ್ದಾರೆ. ಅದೇನೂ ಇಲ್ಲ, ನಾವು ಪ್ರಧಾನಮಂತ್ರಿಗಳ ಮಾತಿನಂತೆ ನಡೆಯುತ್ತಿದ್ದೇವೆ. ಸುಮಾರು ಎರಡು ಕಿಲೋ ಮೀಟರ್ ವ್ಯಾಪ್ತಿಯ ಬೀದಿ ಬದಿಯ ಪ್ಲಾಸ್ಟಿಕ್ ಹೆಕ್ಕಿ ಸ್ವಚ್ಛಗೊಳಿಸಿದ್ದೇವೆ ಎಂದು ಮಾಹಿತಿ ನೀಡಿದರು.

Intro:ಶಿರಸಿ :
ಕಳೆದ ತಿಂಗಳು ಸುರಿದ ಭಾರೀ ಮಳೆಗೆ ಬಲಿಯಾಗಿದ್ದ ಗ್ರಾಮವೊಂದರಲ್ಲಿ ಮಕ್ಕಳು ಸ್ವಚ್ಚತಾ ಆಂದೋಲನ ಹಮ್ಮಿಕೊಂಡು ಎಲ್ಲರಿಗೂ ಮಾದರಿಯಾಗಿದ್ದಾರೆ. ಉತ್ತರಕನ್ನಡ ಜಿಲ್ಲೆ ಅಂಕೋಲಾ ತಾಲುಕಿನ ಗಡಿ ಪ್ರದೇಶವಾದ ಹೆಗ್ಗಾರ ಗ್ರಾಮದ ಚಿಕ್ಕ ಮಕ್ಕಳು ಸ್ವಚ್ಚತಾ ಕಾರ್ಯದಲ್ಲಿ ತೊಡಗಿಸಿಕೊಂಡು ಸ್ವಚ್ಚ ಭಾರತ್ ಆಂದೋಲನಕ್ಕೆ ತಮ್ಮ ಕಿರು ಕಾಣಿಕೆಯನ್ನು ಅರ್ಪಿಸುತ್ತಿದ್ದಾರೆ.

ಹೆಗ್ಗಾರ ಗ್ರಾಮದ ಸರಕಾರೀ ಶಾಲೆಯಲ್ಲಿ ಆರನೇ ತರಗತಿಯ ವಿದ್ಯಾರ್ಥಿ ತೇಜಸ್ವಿ ಗಾಂವ್ಕರ , ತನ್ನ ಸಹಪಾಠಿ ಸಂಕೇತ ಪಟಗಾರ, ದರ್ಶನ ಸಿದ್ದಿ, ವಿನಯ್ ಭಟ್ ಜೊತೆಗೂಡಿ ರವಿವಾರದ ರಜಾದಿನದಂದು ಗಂಗಾವಳಿ ನೆರೆ ಪೀಡಿತ ಪ್ರದೇಶವಾದ ಹೆಗ್ಗಾರ ಗ್ರಾಮದ ಬೀದಿಗಳನ್ನು ಸ್ವಚ್ಚಗೊಳಿಸಿದ್ದಾರೆ.

Body:ಬೀದಿಯಲ್ಲಿ ಬಿದ್ದಿದ್ದ ಪ್ಲಾಸ್ಟಿಕ್ ಮತ್ತಿತರ ತ್ಯಾಜ್ಯಗಳನ್ನು ತಾವು ಮನೆಯಿಂದ ತಂದ ಚೀಲಗಳಲ್ಲಿ ತುಂಬಿ ಸಹಪಾಠಿ ದರ್ಶನ್ ಸಿದ್ದಿಯ ಸೈಕಲ್ ನಲ್ಲಿ ಹೇರಿಕೊಂಡು ಬೀದಿಯ ಕೊನೆಯಲ್ಲಿ ಒಟ್ಟುಗೂಡಿಸಿ ಬೆಂಕಿ ಹಚ್ವಿ ಚೊಕ್ಕಗೊಳಿಸಿದ್ದಾರೆ.

ಮಕ್ಕಳ ಸ್ವಚ್ಚತಾ ಕಾರ್ಯ ಕಂಡ ಊರವರು ಆಶ್ಚರ್ಯಚಕಿತರಾಗಿ ಶಿಕ್ಷಕರೇನಾದರೂ ಈ ರೀತಿ ಅಸೈನ್ಮೆಂಟ್ ಕೊಟ್ಟಿರಬಹುದೇ ? ಎಂದು ಪ್ರಶ್ನಿಸಿದರು. ಅದೇನೂ ಇಲ್ಲ , ನಾವು ಪ್ರಧಾನ ಮಂತ್ರಿಗಳ ಮಾತಿನಂತೆ ನಡೆಯುತ್ತಿದ್ದೇವೆ, ಸುಮಾರು ಎರಡು ಕಿಲೊ ಮೀಟರ್ ವ್ಯಾಪ್ತಿಯ ಬೀದಿ ಬದಿಯ ಪ್ಲಾಸ್ಟಿಕ್ ಹೆಕ್ಕಿ ಸ್ವಚ್ಚಗೊಳಿಸಿದ್ದೇವೆ ಎಂದು ಮಾಹಿತಿ ನೀಡಿದವ ಟೀಂ ಲೀಡರ್ ತೇಜಸ್ವಿ.

ಬೈಟ್ (೧) : ತೇಜಸ್ವಿ, ವಿದ್ಯಾರ್ಥಿ.
.........
ಸಂದೇಶ ಭಟ್ ಶಿರಸಿ. Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.