ETV Bharat / state

ಕರಾವಳಿಯಲ್ಲಿ ಕಡಲು ಪ್ರಕ್ಷುಬ್ಧ... ಪ್ರವಾಸಿಗರಿಗೆ ಎಚ್ಚರಿಕೆ! - undefined

ಭಾರಿ ಮಳೆಯ ಹಿನ್ನೆಲೆ ಮುಂಜಾಗೃತ ಕ್ರಮವಾಗಿ ಜಿಲ್ಲಾಡಳಿತ ಕಾರವಾರದಲ್ಲಿನ ಕಡಲತೀರಗಳಲ್ಲಿ ಹೈ ಅಲರ್ಟ್ ಘೋಷಿಸಿದ್ದು, ಅಪಾಯದ ಪ್ರದೇಶಗಳಲ್ಲಿ ಕೆಂಪು ಬಾವುಟಗಳನ್ನು ನೆಟ್ಟು ನೀರಿಗಿಳಿಯದಂತೆ ಸೂಚನೆ ನೀಡಿದೆ.

ಪ್ರವಾಸಿಗರಿಗೆ ಎಚ್ಚರಿಕೆ
author img

By

Published : Jul 1, 2019, 9:47 PM IST

ಕಾರವಾರ: ಕರಾವಳಿಯಲ್ಲಿ ಕಳೆದೊಂದು ವಾರದಿಂದ ಸುರಿಯುತ್ತಿರುವ ಮಳೆಗೆ ಕಡಲು ಪ್ರಕ್ಷುಬ್ಧವಾಗಿದ್ದು, ಪ್ರವಾಸಿಗರಿಗೆ ಸಮುದ್ರಕ್ಕಿಳಿಯದಂತೆ ರೆಡ್ ಅಲರ್ಟ್ ಘೋಷಿಸಲಾಗಿದೆ.

ಪ್ರವಾಸಿ ತಾಣಗಳಿಂದಲೇ ಗುರುತಿಸಿಕೊಂಡಿರುವ ಉತ್ತರ ಕನ್ನಡ ಜಿಲ್ಲೆಯಲ್ಲಿ ಇಲ್ಲಿನ ಕಡಲತೀರಗಳು ಪ್ರವಾಸಿಗರಿಗೆ ಅಚ್ಚುಮೆಚ್ಚು. ಈ ಕಾರಣದಿಂದಲೇ ಜಿಲ್ಲೆಯ ಪ್ರವಾಸಿ ತಾಣಗಳಿಗೆ ಭೇಟಿ ನೀಡುವ ಪ್ರವಾಸಿಗರು, ಕಡಲತೀರಕ್ಕೆ ಬಾರದೇ ಹೋಗುವುದಿಲ್ಲ. ಆದರೆ ಈ ಬಾರಿ ತಡವಾಗಿ ಆರಂಭವಾದ ಮಳೆ ಕಳೆದೊಂದು ವಾರದಿಂದ ಅಬ್ಬರಿಸುತ್ತಿದ್ದು, ಬಹುತೇಕ ನದಿಗಳು ತುಂಬಿ ಹರಿಯುತ್ತಿವೆ. ಇನ್ನು ಕಡಲಿನಲ್ಲಿ ಅಲೆಗಳ ಅಬ್ಬರ ಅಪಾಯದ ಮಟ್ಟವನ್ನು ತಲುಪಿವೆ.

ಕಾರವಾರದಲ್ಲಿನ ಕಡಲತೀರಗಳಲ್ಲಿ ಹೈ ಅಲರ್ಟ್ ಘೋಷಣೆ

ಮಳೆಗಾಲದಲ್ಲಿ ಸಾಮಾನ್ಯವಾಗಿ ಕಡಲು ಪ್ರಕ್ಷುಬ್ದಗೊಳ್ಳುವುದರಿಂದ ಪ್ರವಾಸಕ್ಕೆ ಬಂದವರು, ಕಡಲ ಅಲೆಗಳಿಗೆ ಆಕರ್ಷಿತರಾಗಿ ನೀರಿಗೆ ಇಳಿಯುತ್ತಾರೆ. ಈ ವೇಳೆ ಅದೆಷ್ಟೋ ಜನರು ಅಪಾಯಕ್ಕೆ ಸಿಲುಕಿ ಪ್ರಾಣವನ್ನು ಕಳೆದುಕೊಂಡ ಉದಾಹರಣೆಗಳಿವೆ. ಈ ಕಾರಣದಿಂದ ಮುಂಜಾಗೃತ ಕ್ರಮವಾಗಿ ಜಿಲ್ಲಾಡಳಿತ ಕಾರವಾರದ ರವೀಂದ್ರನಾಥ ಟ್ಯಾಗೋರ್​ ಕಡಲತೀರ, ಓಂ ಬೀಚ್, ಕುಡ್ಲೇ ಬೀಚ್, ಹೊನ್ನಾವರದ ಇಕೋ ಬೀಚ್, ಅಂಕೊಲಾದ ನದಿಭಾಗ್ ಸೇರಿದಂತೆ ಇತರೆ ಕಡಲತೀರಗಳಲ್ಲಿ ಹೈ ಅಲರ್ಟ್ ಘೋಷಿಸಿದ್ದು, ಅಪಾಯದ ಪ್ರದೇಶಗಳಲ್ಲಿ ಕೆಂಪು ಬಾವುಟಗಳನ್ನು ನೆಟ್ಟು ನೀರಿಗಿಳಿಯದಂತೆ ಸೂಚನೆ ನೀಡಿದೆ.

ಬೇಸಿಗೆ ಕಾಲದಲ್ಲಿ ಕಾರವಾರದ ರವೀಂದ್ರನಾಥ ಟ್ಯಾಗೋರ್ ಕಡಲತೀರದಲ್ಲಿ ಪ್ರವಾಸಿಗರು ತುಂಬಿ ತುಳುಕುತ್ತಾರೆ. ಅಲ್ಲದೆ ಪ್ರವಾಸಿಗರನ್ನು ರಂಜಿಸಲೆಂದೇ ಅಡ್ವೆಂಚರ್ ಸ್ಪೋರ್ಟ್ಸ್ ನಡೆಯುತ್ತದೆ. ಆದರೆ ಇದೀಗ ಮಳೆ ಹಾಗೂ ಕಡಲಬ್ಬರಕ್ಕೆ ಎಲ್ಲವನ್ನು ಬಂದ್ ಮಾಡಿದ್ದು, ಜಾಗೃತಿ ಮೂಡಿಸಲಾಗುತ್ತಿದೆ.

Intro:ಕರಾವಳಿಯಲ್ಲಿ ಕಡಲು ಪ್ರಕ್ಷುಬ್ಧ...ಪ್ರವಾಸಿಗರಿಗೆ ಎಚ್ಚರಿಕೆ !
ಕಾರವಾರ: ಕರಾವಳಿಯಲ್ಲಿ ಕಳೆದೊಂದು ವಾರದಿಂದ ಸುರಿಯುತ್ತಿರುವ ಮಳೆಗೆ ಕಡಲು ಉಬ್ಬೇರಿದ್ದು, ಪ್ರವಾಸಿಗರಿಗೆ ಸಮುದ್ರಕ್ಕಿಳಿಯದಂತೆ ರೆಡ್ ಅಲರ್ಟ್ ಘೋಷಿಸಲಾಗಿದೆ.
ಹೌದು, ಪ್ರವಾಸಿ ತಾಣಗಳಿಂದಲೇ ಗುರುತಿಸಿಕೊಂಡಿರುವ ಉತ್ತರಕನ್ನಡ ಜಿಲ್ಲೆಯಲ್ಲಿ ಇಲ್ಲಿನ ಕಡಲತೀರಗಳು ಪ್ರವಾಗರಿಗೆ ಅಚ್ಚುಮೆಚ್ಚು. ಈ ಕಾರಣದಿಂದಲೇ ಜಿಲ್ಲೆಯ ಪ್ರವಾಸಿ ತಾಣಗಳಿಗೆ ಭೇಟಿ ನೀಡುವ ಪ್ರವಾಸಿಗರು ಕಡಲತೀರಕ್ಕೆ ಬಾರದೇ ಹೋಗುವುದಿಲ್ಲ.
ಆದರೆ ಈ ಭಾರಿ ತಡವಾಗಿ ಆರಂಭವಾದ ಮಳೆ ಕಳೆದೊಂದು ವಾರದಿಂದ ಅಬ್ಬರಿಸುತ್ತಿದ್ದು, ಜಿಲ್ಲೆಯಾಂದ್ಯಂತ ಉತ್ತಮ ಮಳೆಯಾಗಿದೆ. ಇದರಿಂದ ಬಹುತೇಕ ನದಿಗಳು ತುಂಬಿ ಹರಿಯತೊಡಗಿದ್ದು, ಕಡಲಿನಲ್ಲಿ ಅಲೆಗಳ ಅಬ್ಬರ ಅಪಾಯದ ಮಟ್ಟವನ್ನು ತಲುಪಿದೆ.
ಮಳೆಗಾಲದಲ್ಲಿ ಸಾಮಾನ್ಯವಾಗಿ ಕಡಲು ಪ್ರಕ್ಷುಬ್ದಗೊಳ್ಳುವುದರಿಂದ ಪ್ರವಾಸಕ್ಕೆ ಬಂದವರು, ಇಲ್ಲವೆ ಇನ್ನಿತರ ಕಾರಣಗಳಿಗೆ ಬಂದವರು ಕಡಲ ಅಲೆಗಳಿಗೆ ಆಕರ್ಷಿತರಾಗಿ ನೀರಿಗೆ ಇಳಿಯುತ್ತಾರೆ. ಈ ವೇಳೆ ಅದೆಷ್ಟೊ ಜನರು ಅಪಾಯಕ್ಕೆ ಸಿಲುಕಿ ಪ್ರಾಣವನ್ನು ಕಳೆದುಕೊಂಡ ಉದಾಹರಣೆಗಳಿದೆ.
ಈ ಕಾರಣದಿಂದ ಮುಂಜಾಗೃತ ಕ್ರಮವಾಗಿ ಜಿಲ್ಲಾಡಳಿತ ಕಾರವಾರದ ರವೀಂದ್ರನಾಥ ಟ್ಯಾಗೋರ ಕಡಲತೀರ, ಓಂ ಬೀಚ್, ಕುಡ್ಲೇ ಬೀಚ್, ಹೊನ್ನಾವರದ ಇಕೋ ಬೀಚ್, ಅಂಕೊಲಾದ ನದಿಭಾಗ್ ಸೇರಿದಂತೆ ಇತರೆ ಕಡಲತೀರಗಳಲ್ಲಿ ಹೈ ಅಲರ್ಟ್ ಘೋಷಿಸಿದ್ದು, ಅಪಾಯದ ಪ್ರದೇಶಗಳಲ್ಲಿ ಕೆಂಪು ಬಾವುಟಗಳನ್ನು ನೆಟ್ಟು ನೀರಿಗಿಳಿಯದಂತೆ ಸೂಚನೆ ನೀಡಿದೆ.
ಇನ್ನು ಮಳೆ ಜೋರಾಗಿರುವುದರಿಂದ ಅಲೆ ಕೂಡ ಅಬ್ಬರಿಸುತ್ತಿದೆ. ಗಾಳಿ ವಿಫರಿತವಾಗಿ ಬೀಸುತ್ತಿದ್ದು, ಕಡಲತೀರದಲ್ಲಿ ನಿಲ್ಲಲು ಸಾಧ್ಯವಾಗುತ್ತಿಲ್ಲ.ಅಲ್ಲದೆ ಇಲ್ಲಿ ಲೈಪ್ ಗಾರ್ಡ್ ಸಿಬ್ಬಂದಿ ಕಡಲಿಗೆ ಇಳಿಯದಂತೆ ಎಚ್ಚರಿಸುತ್ತಿದ್ದು, ಬೆಳಗಾವಿಯಿಂದ ಬಂದ ನಮಗೆ ಸಮುದ್ರಕ್ಕೆ ಇಳಿಯಲು ಸಾಧ್ಯವಾಗದೆ ಇರುವುದು ನಿರಾಸೆಯಾಗಿದೆ ಎನ್ನುತ್ತಾರೆ ಮಂಜುನಾಥ.
ಇನ್ನು ಬೇಸಿಗೆ ವೇಳೆ ಕಾರವಾರದ ರವೀಂದ್ರನಾಥ ಟ್ಯಾಗೋರ್ ಕಡಲತೀರದಲ್ಲಿ ಪ್ರವಾಸಿಗರು ತುಂಬಿ ತುಳುಕುತ್ತಾರೆ. ಅಲ್ಲದೆ ಪ್ರವಾಸಿಗರನ್ನು ರಂಜಿಸುವುದಕ್ಕೊಸ್ಕರ ಅಡ್ವೆಂಚರ್ ಸ್ಪೋರ್ಟ್ಸ್ ನಡೆಯುತ್ತದೆ. ಆದರೆ ಇದೀಗ ಮಳೆ ಹಾಗೂ ಕಡಲಬ್ಬರಕ್ಕೆ ಎಲ್ಲವನ್ನು ಬಂದ್ ಮಾಡಿದ್ದು, ಜೋಪಾನ ಮಾಡಿಡಲಾಗುತ್ತದೆ.
ಇನ್ನು ಕಡಲತೀರದ ಸೌಂದರ್ಯ ಸವಿಯಲು ಹರಿಹರದಿಂದ ಆಗಮಿಸಿದ್ದ ರಾಮು ಮಾತನಾಡಿ, ಕಡಲಿನಲ್ಲಿ ಅಲೆ ಅಬ್ಬರ ಇದ್ದು, ನೀರಿಗೆ ಇಳಿಯಲು ಸಾಧ್ಯವಾಗುತ್ತಿಲ್ಲ.‌ ಅಲ್ಲದೆ ಅಪಾಯಕಾರಿಯಾಗಿರುವುದರಿಂದ ಇಳಿಯುವುದು ಸೂಕ್ತವಲ್ಲ. ಸ್ಪೋರ್ಟ್ಸ್ ಆಕ್ಟಿವಿಟಿಸ್ ಕೂಡ ಬಂದ್ ಆಗಿವೆ. ಇದರಿಂದ ಸ್ವಲ್ಪಮಟ್ಟಿನ ನೀರಾಸೆಯಾಗಿದೆ ಎಂದು ಹೇಳಿದರು.
ಒಟ್ಟಿನಲ್ಲಿ ಮಳೆ ಜೋರಾಗುತ್ತಿದ್ದಂತೆ ಕಡಲು ಅಬ್ಬರಿಸುತ್ತಿದ್ದು, ಅಪಯಾದ ಗಂಟೆಯಾಗಿ ಪರಿಣಮಿಸಿದೆ. ಇದೀಗ ಪ್ರವಾಸಕ್ಕೆಂದು ಬರುವವರಿಗೆ ಕೇವಲ ಸೌಂದರ್ಯ ಕಣ್ತುಂಬಿಕೊಳ್ಳಲು ಸಾಧ್ಯವಿದ್ದು, ನೀರಿಗಿಳಿಯದೆ ಮುಂಜಾಗೃತೆ ಕ್ರಮ ವಹಿಸುವುದು ಅವಶ್ಯವಾಗಿದೆ.

Body:ಕ

Conclusion:ಕ

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.