ETV Bharat / state

ಕಾರವಾರದಲ್ಲಿ ಕುಸಿದು ಬಿದ್ದ ಶಾಲಾ ಕಟ್ಟಡ: ತಪ್ಪಿದ ಭಾರೀ ದುರಂತ

ಕಾರವಾರದ ಬಾಡ ಗ್ರಾಮದ ಸರ್ಕಾರಿ ಹಿರಿಯ ಮಾದರಿ ಪ್ರಾಥಮಿಕ ಶಾಲೆಯ ಮೇಲ್ಛಾವಣಿಯೊಂದು ಸಂಪೂರ್ಣ ಕುಸಿದು ಬಿದ್ದಿದ್ದು, ಅದೃಷ್ಟವಶಾತ್ ಅನಾಹುತ ತಪ್ಪಿದೆ.

ಕುಸಿದು ಬಿದ್ದ ಶಾಲಾ ಕಟ್ಟಡ
author img

By

Published : Aug 25, 2019, 5:48 PM IST

ಕಾರವಾರ: ದುರಸ್ತಿಗೆ ತಲುಪಿದ್ದ ಶಾಲಾ ಕೊಠಡಿಯ ಮೇಲ್ಛಾವಣಿಯೊಂದು ಸಂಪೂರ್ಣ ಕುಸಿದು ಬಿದ್ದಿದ್ದು, ಅದೃಷ್ಟವಶಾತ್ ಸಂಭವಿಸಬಹುದಾದ ಅನಾಹುತವೊಂದು ತಪ್ಪಿದೆ. ಈ ಘಟನೆ ನಡೆದಿದ್ದು ಕಾರವಾರದ ಬಾಡ ಗ್ರಾಮದ ಸರ್ಕಾರಿ ಹಿರಿಯ ಮಾದರಿ ಪ್ರಾಥಮಿಕ ಶಾಲೆಯಲ್ಲಿ.

ಈ ಶಾಲೆಯನ್ನು 1865ರಲ್ಲಿ ಪ್ರಾರಂಭಿಸಲಾಗಿದ್ದು, ಈಗ ಕುಸಿದು ಬಿದ್ದ ಕಟ್ಟಡವನ್ನು ಸುಮಾರು 25 ವರ್ಷಗಳ ಹಿಂದೆ ನಿರ್ಮಿಸಲಾಗಿತ್ತು. ಈ ಕಟ್ಟಡಗಳ ನಿರ್ವಹಣೆ ಸರಿಯಿಲ್ಲದ ಕಾರಣ ಕೊಠಡಿ ದುರಸ್ತಿಗೆ ಬಂದಿತ್ತು. ಆದ್ದರಿಂದ ಮಕ್ಕಳಿಗೆ ಆ ಕೊಠಡಿಯಲ್ಲಿ ಪಾಠ ಮಾಡುತ್ತಿರಲಿಲ್ಲ. ಆದರೆ ಅಪರೂಪಕ್ಕೊಮ್ಮೆ ವ್ಯಾಯಾಮ ಸೇರಿದಂತೆ ಇತರೆ ಚಟುವಟಿಕೆಗಳಿಗಾಗಿ ಮಕ್ಕಳು ತೆರಳುತ್ತಿದ್ದರು.

ಕುಸಿದು ಬಿದ್ದ ಶಾಲಾ ಕಟ್ಟಡ

ಶಾಲೆಯಲ್ಲಿ 1ರಿಂದ 7ನೇ ತರಗತಿಯವರೆಗೆ 30 ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದರು. ಶಾಲಾ ಕೊಠಡಿಯ ಮೇಲ್ಛಾವಣಿ ಹಾಳಾದ ಬಗ್ಗೆ 2017ರಿಂದ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಆದರೆ ಈವರೆಗೂ ಸರಿಪಡಿಸುವ ಕೆಲಸವಾಗಿರಲಿಲ್ಲ. ಸದ್ಯ ಇರುವ ಕೊಠಡಿಗಳ ಮೇಲ್ಛಾವಣಿ ಕೂಡ ಹಾಳಾಗಿದೆ ಎನ್ನುತ್ತಾರೆ ಶಾಲಾ ಮುಖ್ಯ ಶಿಕ್ಷಕಿ ಸಂಗೀತಾ ಪಿ ನಾಗ್ವೇಕರ್.

ಈ ಬಗ್ಗೆ ಮಾತನಾಡಿರುವ ಸ್ಥಳೀಯರು, ಭಾನುವಾರವಾಗಿರುವ ಕಾರಣ ಶಾಲಾ ಮಕ್ಕಳು ಶಾಲೆಗೆ ಬಾರದಿದ್ದರಿಂದ ಬಹುದೊಡ್ಡ ಅನಾಹುತ ತಪ್ಪಿದೆ. ಶಾಲೆ ದುರಸ್ತಿಗೆ ತಲುಪಿರುವ ಬಗ್ಗೆ ಹಲವು ಬಾರಿ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಅಲ್ಲದೆ ಮೂರು ಬಾರಿ ಮನವಿ ಪತ್ರ ಕೂಡ ಸಲ್ಲಿಸಲಾಗಿದೆ. ಆದರೆ ಯಾರೂ ಕೂಡ ಗಮನಹರಿಸಿಲ್ಲ. ನಮ್ಮ ಮಕ್ಕಳ ಜತೆ ಅಧಿಕಾರಿಗಳು ಚೆಲ್ಲಾಟವಾಡುತ್ತಿದ್ದಾರೆ. ಇನ್ನಾದರು ಎಚ್ಚೆತ್ತುಕೊಳ್ಳಬೇಕು ಎಂದು ಎಚ್ಚರಿಸಿದ್ದಾರೆ.

ಅಷ್ಟೇ ಅಲ್ಲದೆ, ಶಾಲೆಯ ಅಡುಗೆ ಕೋಣೆಯಲ್ಲಿಯೂ ಕೂಡ ನೀರು ಸೋರುತ್ತಿದೆ. ನಿರ್ವಹಣೆ ಇಲ್ಲದ ಕಾರಣ ಶಾಲೆಯಲ್ಲಿದ್ದ ಲಕ್ಷಾಂತರ ರೂ. ವೆಚ್ಚದ ಕಂಪ್ಯೂಟರ್ ಧೂಳು ಹಿಡಿಯುತ್ತಿದೆ. ಶಾಲೆಯ ಇನ್ನುಳಿದ ಕೊಠಡಿಗಳು ಶಿಥಿಲಗೊಂಡಿದ್ದು, ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮಕೈಗೊಳ್ಳಬೇಕಾದ ಅಗತ್ಯತೆ ಇದೆ.

Intro:ಕಾರವಾರ: ದುರಸ್ತಿಗೆ ತಲುಪಿದ್ದ ಶಾಲಾ ಕೊಠಡಿಯ ಮೇಲ್ಚಾವಣಿಯೊಂದು ಸಂಪೂರ್ಣ ಕುಸಿದುಬಿದ್ದಿದ್ದು, ಅದೃಷ್ಟವಶಾತ್ ಶಾಲೆಗೆ ರಜೆ ಇದ್ದ ಹಿನ್ನೆಲೆಯಲ್ಲಿ ಸಂಭವಿಸಬಹುದಾದ ಬಹುದೊಡ್ಡ ಅನಾಹುತವೊಂದು ತಪ್ಪಿರುವ ಘಟನೆ ಕಾರವಾರದ ಬಾಡದಲ್ಲಿ ಇಂದು ನಡೆದಿದೆ.
ಇಲ್ಲಿನ ಸರ್ಕಾರಿ ಹಿರಿಯ ಮಾದರಿ ಪ್ರಾಥಮಿಕ ಶಾಲೆಯ ಕ್ರೀಡಾ ಭವನದ ಕೊಠಡಿಯ ಮೆಲ್ಚಾವಣಿ ಸಂಪೂರ್ಣ ಇಂದು ಬೆಳಿಗ್ಗೆ ಕುಸಿದುಬಿದ್ದಿದೆ. ಇದರಿಂದ ಗೊಡೆ ಕೂಡ ಬಿದ್ದಿದ್ದು, ಹಂಚು, ರೀಪು, ಪಕಾಸಿಗಳು ಸಂಪೂರ್ಣ ಹಾನಿಯಾಗಿದೆ.
ಶಾಲೆಯನ್ನು ೧೮೬೫ ರಲ್ಲಿ ಪ್ರಾರಂಭಿಸಲಾಗಿದ್ದು, ಈಗ ಕುಸಿದು ಬಿದ್ದ ಕಟ್ಟಡವನ್ನು ಸುಮಾರು ೨೫ ವರ್ಷಗಳ ಹಿಂದೆ ನಿರ್ಮಿಸಲಾಗಿತ್ತು. ಆದರೆ ನಿರ್ವಹಣೆ ಇಲ್ಲದ ಕಾರಣ ಕೊಠಡಿ ದುರಸ್ತಿಗೆ ಬಂದಿತ್ತು. ಈ ಕಾರಣದಿಂದ ಮಕ್ಕಳಿಗೆ ಆ ಕೊಠಡಿಯಲ್ಲಿ ಪಾಠ ಮಾಡುತ್ತಿರಲಿಲ್ಲ. ಆದರೆ ಅಪರೂಪಕ್ಕೊಮ್ಮೆ ವ್ಯಾಯಾಮ ಸೇರಿದಂತೆ ಇತರೆ ಚಟುವಟಿಕೆಗಳಿಗಾಗಿ ಮಕ್ಕಳು ತೆರಳುತ್ತಿದ್ದರು. ಶಾಲೆಯಲ್ಲಿ ೧ ರಿಂದ ೭ ರವರೆಗೆ ೩೦ ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದು, ಶಾಲಾ ಕೊಠಡಿಯ ಮೆಲ್ಚಾವಣಿ ಹಾಳಾದ ಬಗ್ಗೆ ೨೦೧೭ ರಿಂದ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಆದರೆ ಈವರೆಗೂ ಸರಿಪಡಿಸುವ ಕೆಲಸವಾಗಿಲ್ಲ. ಸದ್ಯ ಇರುವ ಕೊಠಡಿಗಳ ಮೆಲ್ಚಾವಣಿ ಕೂಡ ಹಾಳಾಗಿದೆ ಎನ್ನುತ್ತಾರೆ ಶಾಲಾ ಮುಖ್ಯಾಧ್ಯಾಪಕಿ ಸಂಗೀತಾ ಪಿ ನಾಗ್ವೇಕರ್
ಇನ್ನು ಭಾನುವಾರವಾಗಿರುವ ಕಾರಣ ಶಾಲಾಮಕ್ಕಳು ಬಾರದೇ ಬಹುದೊಡ್ಡ ಅನಾಹುತ ತಪ್ಪಿದೆ. ಶಾಲೆ ದುರಸ್ತಿಗೆ ತಲುಪಿರುವ ಬಗ್ಗೆ ಕಳೆದ ಹಲವು ಭಾರಿ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಅಲ್ಲದೆ ಮೂರು ಭಾರಿ ಮನವಿ ಕೂಡ ಸಲ್ಲಿಸಲಾಗಿದೆ. ಆದರೆ ಯಾರೂ ಕೂಡ ಗಮನ ಹರಿಸಿಲ್ಲ. ನಮ್ಮ ಮಕ್ಕಳ ಜತೆ ಅಧಿಕಾರಿಗಳು ಚೆಲ್ಲಾಟವಾಡುತ್ತಿದ್ದಾರೆ. ಇನ್ನಾದರು ಎಚ್ಚೆತ್ತುಕೊಳ್ಳಬೇಕು. ಈಗಿರುವ ಹಳೆಯ ಕಟ್ಟಡವನ್ನು ತೆರವುಗೊಳಿಸಿ ಸೂಕ್ತ ವ್ಯವಸ್ಥೆ ಕಲ್ಪಿಸುವವರೆಗೂ ಶಾಲೆಯನ್ನು ನಡೆಸಲು ಬಿಡುವುದಿಲ್ಲ ಎಂದು ಸ್ಥಳೀಯರು ಎಚ್ಚರಿಸಿದ್ದಾರೆ.
ಒಟ್ಟಿನಲ್ಲಿ ಶಾಲೆ ರಜೆ ಇರುವ ಕಾರಣ ಸಂಭವಿಸಬಹುದಾದ ಬಹುದೊಡ್ಡ ಅನಾಹುತ ತಪ್ಪಿದೆ. ಆದರೆ ಶಾಲೆಯ ಅಡುಗೆ ಕೋಣೆಯಲ್ಲಿಯೂ ಕೂಡ ನೀರು ಸೋರುತ್ತಿದ್ದು, ಗೋಡೆಗಳು ನೆನೆದಿವೆ. ನಿರ್ವಹಣೆ ಇಲ್ಲದ ಕಾರಣ ಶಾಲೆಯಲ್ಲಿದ್ದ ಲಕ್ಷಾಂತರ ರೂ ವೆಚ್ಚದ ಕಂಪ್ಯೂಟರ್ ದೂಳು ಹಿಡಿಯುತ್ತಿದೆ. ಶಾಲೆಯ ಇನ್ನುಳಿದ ಕೊಠಡಿಗಳು ಶಿಥಿಲಗೊಂಡಿದ್ದು, ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮಕೈಗೊಳ್ಳಬೇಕಾದ ಅಗತ್ಯತೆ ಇದೆ.

ಬೈಟ್ ೧ ಸಂಗೀತಾ ಪಿ. ನಾಗ್ವೇಕರ್, ಶಾಲಾ ಮುಖ್ಯ ಶಿಕ್ಷಕಿ

ಬೈಟ್ ೨ ಮನೋಜ್ ಬಾಂದೇಕರ್, ನಗರಸಭೆ ಸದಸ್ಯ

ಬೈಟ್ ೩ ರಾಘು ನಾಯ್ಕ., ಸ್ಥಳೀಯರು

Body:ಕ

Conclusion:ಕ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.