ETV Bharat / state

ಮರಳು ಕೊರತೆಯಿಂದ ಹಿಂದೆ ಬಿದ್ದ ಅಭಿವೃದ್ಧಿ ಕಾಮಗಾರಿ: ಜಲಾಶಯದ ಮರಳು ತೆಗೆಯಲು ಪ್ಲಾನ್​

ಕಾರವಾರದಲ್ಲಿ ಮರಳು ಕೊರತೆಯಿಂದಾಗಿ ಅಭಿವೃದ್ಧಿ ಕಾಮಗಾರಿಗಳು ನೆನೆಗುದಿಗೆ - ಮರಳಿನ ಪೂರೈಕೆಗಾಗಿ ಜಿಲ್ಲಾಡಳಿತ ಪರ್ಯಾಯ ಮಾರ್ಗ ಹುಡುಕಲು ಸಿದ್ಧತೆ - ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿಕೆ

sand-shortage-in-karwar
ಕಾರವಾರದಲ್ಲಿ ಮರಳು ಕೊರತೆ
author img

By

Published : Feb 4, 2023, 6:42 AM IST

ಮರಳು ಕೊರತೆ ಬಗ್ಗೆ ಸಚಿವರ ಹೇಳಿಕೆ

ಕಾರವಾರ(ಉತ್ತರ ಕನ್ನಡ): ಯಾವುದೇ ಮನೆ, ಕಟ್ಟಡ ಅಥವಾ ಅಭಿವೃದ್ಧಿ ಕಾರ್ಯಗಳನ್ನ ಮಾಡಲು ಮರಳು ಅತ್ಯಗತ್ಯವಾಗಿದೆ. ಆದರೆ ಕರಾವಳಿ ನಗರಿ ಕಾರವಾರದಲ್ಲಿ ಮರಳು ಸಿಗುವುದೇ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ರಾಷ್ಟ್ರೀಯ ಹಸಿರು ಪೀಠವು ಕರಾವಳಿ ನಿಯಂತ್ರಣ ವಲಯದಲ್ಲಿ ಮರಳುಗಾರಿಕೆ ನಿಷೇಧ ಹೇರಿರುವುದರಿಂದಾಗಿ ಅಭಿವೃದ್ಧಿ ಕಾರ್ಯಗಳೂ ಸಹ ಕುಂಠಿತವಾಗಿದ್ದು ಜನರು ಮರಳಿಗಾಗಿ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಇದೀಗ ಜಿಲ್ಲಾಡಳಿತ ಮರಳಿನ ಬೇಡಿಕೆ ಪೂರೈಕೆಗಾಗಿ ಪರ್ಯಾಯ ಮಾರ್ಗ ಹುಡುಕಲು ಮುಂದಾಗಿದೆ.

ಕರಾವಳಿ ನಗರಿ ಉತ್ತರಕನ್ನಡ ಜಿಲ್ಲೆಯ ಕರಾವಳಿಯಲ್ಲಿ ಮರಳುಗಾರಿಕೆ ಬಂದ್ ಆಗಿರೋದು ದೊಡ್ಡ ದೊಡ್ಡ ಕಾಮಗಾರಿಗಳಿಗೆ ಅಡ್ಡಿಯುಂಟು ಮಾಡಿದೆ. ಜಿಲ್ಲೆಯ ಬಹುತೇಕ ಎಲ್ಲ ತಾಲೂಕುಗಳಿಗೆ ಕರಾವಳಿ ಭಾಗದ ನದಿಗಳಲ್ಲಿ ತೆಗೆದ ಮರಳನ್ನೇ ಅಭಿವೃದ್ದಿ ಚಟುವಟಿಕೆಗಳಿಗೆ ಬಳಸಲು ಸಾಗಾಟ ಮಾಡಲಾಗುತ್ತಿತ್ತು. ಆದರೆ ಚೆನ್ನೈನ ರಾಷ್ಟ್ರೀಯ ಹಸಿರು ಪೀಠವು ಸಿಆರ್‌ಝೆಡ್ ವಲಯದಲ್ಲಿ ತೆಗೆದ ಮರಳನ್ನು ಮಾರಾಟ ಮಾಡದಂತೆ ಆದೇಶಿಸಿದ್ದ ಪರಿಣಾಮ ಜಿಲ್ಲಾಡಳಿತ ಮರಳುಗಾರಿಕೆ ಬಂದ್ ಮಾಡಿದೆ. ಇದರಿಂದಾಗಿ ಅಭಿವೃದ್ದಿ ಚಟುವಟಿಕೆಗಳು ಮರಳು ಸಿಗದೇ ಪರದಾಡುವಂತಾಗಿದ್ದು ಜನಸಾಮಾನ್ಯರಿಗೂ ಸಹ ಸಾಕಷ್ಟು ಸಮಸ್ಯೆ ಉಂಟಾಗಿದೆ.

ಜಲಾಶಯ ಹಿನ್ನೀರಿನ ಮರಳು: ಈ ನಿಟ್ಟಿನಲ್ಲಿ ಪರ್ಯಾಯ ಮಾರ್ಗದ ಚಿಂತನೆಯಲ್ಲಿರುವ ಜಿಲ್ಲಾಡಳಿತ ಕರಾವಳಿ ನಿಯಂತ್ರಣ ವಲಯ ವ್ಯಾಪ್ತಿ ಹೊರತುಪಡಿಸಿ ಒಳನಾಡು ನದಿ ಪ್ರದೇಶ, ಜಲಾಶಯದ ಹಿನ್ನೀರಿನ ಪ್ರದೇಶದಲ್ಲಿ ಲಭ್ಯವಿರುವ ಮರಳನ್ನು ತೆಗೆಯಲು ಇರುವ ಸಾಧ್ಯತೆಗಳ ಕುರಿತು ಪರಿಶೀಲಿಸಲು ಮುಂದಾಗಿದೆ. ಇದರಿಂದ ಹಸಿರು ಪೀಠದ ಆದೇಶ ಉಲ್ಲಂಘಿಸದೇ ಅಗತ್ಯವಿರುವ ಮರಳು ಪೂರೈಕೆ ಸಾಧ್ಯವಾಗಲಿದ್ದು, ಈ ಕುರಿತು ಇರುವ ಸಾಧ್ಯತೆಗಳನ್ನು ಪರಿಶೀಲಿಸಿ ಕ್ರಮ ಕೈಗೊಳ್ಳೋದಾಗಿ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ತಿಳಿಸಿದ್ದಾರೆ.

ಇನ್ನು, ಉತ್ತರಕನ್ನಡ ಜಿಲ್ಲೆಯು ಬಹುತೇಕ ಸಿಆರ್‌ಝೆಡ್ ವ್ಯಾಪ್ತಿಯಲ್ಲಿ ಸಿಗುವ ಮರಳಿನ ಮೇಲೆ ಅವಲಂಭಿತವಾಗಿದೆ. ಇದೀಗ ಹಸಿರು ಪೀಠ ನೀಡಿರುವ ಆದೇಶದಿಂದಾಗಿ ಜಿಲ್ಲೆಯಾದ್ಯಂತ ಮರಳು ಪೂರೈಕೆಯಲ್ಲಿ ವ್ಯತ್ಯಯವಾಗಿದ್ದು ಸರ್ಕಾರದ ವಿವಿಧ ಅಭಿವೃದ್ಧಿ ಯೋಜನೆಗಳು ಸೇರಿದಂತೆ ಜನಸಾಮಾನ್ಯರ ಮನೆ, ಕಟ್ಟಡ ಕಾಮಗಾರಿಗಳಿಗೂ ಸಾಕಷ್ಟು ತೊಂದರೆ ಉಂಟಾಗುತ್ತಿದೆ. ಇನ್ನು, ಹಲವೆಡೆ ನಿರ್ಮಾಣ ಕಾಮಗಾರಿಗಳಿಗೆ ಎಂಸ್ಯಾಂಡ್‌ ಬಳಕೆ ಮಾಡಲಾಗುತ್ತದೆಯಾದ್ರೂ ಕರಾವಳಿ ಪ್ರದೇಶವಾಗಿರುವುದರಿಂದ ಉತ್ತರಕನ್ನಡ ಜಿಲ್ಲೆಯಲ್ಲಿ ಇದರ ಬಳಕೆ ಸಾಧ್ಯವಿಲ್ಲ. ಹೀಗಾಗಿ ಆದಷ್ಟು ಶೀಘ್ರದಲ್ಲಿ ಕರಾವಳಿ ನಿಯಂತ್ರಣ ವಲಯ ವ್ಯಾಪ್ತಿ ಹೊರತುಪಡಿಸಿರುವ ಪ್ರದೇಶಗಳಲ್ಲಿ ಮರಳು ದಿಬ್ಬಗಳನ್ನ ಗುರುತಿಸಿ ಅವುಗಳನ್ನಾದ್ರೂ ಮರಳಿನ ಬೇಡಿಕೆ ಪೂರೈಕೆಗೆ ಒದಗಿಸಬೇಕು ಎಂದು ಮಾಜಿ ಶಾಸಕ ಸತೀಶ್ ಸೈಲ್ ಆಗ್ರಹಿಸಿದ್ದಾರೆ.

ಜಿಲ್ಲೆಯಲ್ಲಿ ಎದುರಾಗಿರುವ ಮರಳಿನ ಅಭಾವ ನೀಗಿಸಲು ಜಿಲ್ಲಾಡಳಿತ ಪರ್ಯಾಯ ಮಾರ್ಗಕ್ಕೆ ಮುಂದಾಗಿರೋದು ನಿಜಕ್ಕೂ ಉತ್ತಮ ಬೆಳವಣಿಗೆಯೇ. ಆದರೆ ಮುಂದೆ ನಾಲ್ಕೈದು ತಿಂಗಳಲ್ಲಿ ಮಳೆಗಾಲ ಎದುರಾಗಲಿರುವುದರಿಂದ ಆದಷ್ಟು ಶೀಘ್ರದಲ್ಲಿ ಮರಳು ಪೂರೈಕೆಗೆ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರ ಮನವಿ ಮಾಡಿದ್ದಾರೆ.

ಇದನ್ನೂ ಓದಿ: ವಾಹನಗಳ ದಂಡ ಪಾವತಿಯಲ್ಲಿ ಶೇ 50ರಷ್ಟು ಡಿಸ್ಕೌಂಟ್‌: ಒಂದೇ ದಿನ ಸಂಗ್ರಹವಾದ ಮೊತ್ತ ಎಷ್ಟು ಗೊತ್ತೇ?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.