ಕಾರವಾರ: ಭಾರಿ ಮಳೆಯಿಂದಾಗಿ ಭಟ್ಕಳದಲ್ಲಿನ ನೂರಾರು ಅಂಗಡಿಗಳಲ್ಲಿ ಲಕ್ಷಾಂತರ ಬೆಲೆಯ ವಸ್ತುಗಳು ಹಾನಿಗೊಳಗಾಗಿದೆ. ಕೆಲವು ವಸ್ತುಗಳು ಬಳಕೆಗೆ ಬಾರದ ಕಾರಣ ಬಿಸಾಡಿದರೆ, ಬಟ್ಟೆ, ಬ್ಯಾಗ್, ಗೃಹಬಳಕೆ ವಸ್ತುಗಳನ್ನು ವ್ಯಾಪಾರಸ್ಥರು ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ಜನ ಕೂಡಾ ಮುಗ್ಗಿಬಿದ್ದು ಕಡಿಮೆ ಬೆಲೆಗೆ ಸಿಗುವ ವಸ್ತುಗಳನ್ನು ಖರೀದಿಸಿದರು.
ಭಾರಿ ಮಳೆಗೆ ನೂರಾರು ಮನೆಗಳು ಮುಳುಗಡೆಯಾಗಿ ಕೋಟ್ಯಂತರ ರೂ. ಹಾನಿಯಾಗಿದೆ. ಈ ಮನೆಗಳಿಗೆ ಸರ್ಕಾರ ಪರಿಹಾರ ನೀಡುತ್ತದೆ. ಆದರೆ, ಅಂಗಡಿ ಮುಂಗಟ್ಟುಗಳಿಗೆ ವಿಮೆ ಮಾಡಿಸಿದಲ್ಲಿ ಮಾತ್ರ ಅವರಿಗೆ ಪರಿಹಾರ ನೀಡಲಾಗುತ್ತದೆ. ಆದರೆ, ಭಟ್ಕಳದಲ್ಲಿ ಬಹುತೇಕ ವಾಣಿಜ್ಯ ಮಳಿಗೆಗಳಲ್ಲಿ ವಿಮೆ ಮಾಡಿಸಿಲ್ಲ.
ನೆರೆ ನೀರಿನಿಂದ ಬಟ್ಟೆ, ಬುಕ್ ಸ್ಟಾಲ್, ಮೊಬೈಲ್ ಶಾಪ್ ಹೀಗೆ ಹಲವು ಮಳಿಗೆಗಳಲ್ಲಿ ವಸ್ತುಗಳನ್ನು ಮರಳಿ ಮಾರಾಟ ಮಾಡಲು ಸಾಧ್ಯವಿಲ್ಲದ ಕಾರಣ ವಸ್ತುಗಳನ್ನು ಅರ್ಧಕ್ಕಿಂತ ಕಡಿಮೆ ಬೆಲೆಯಲ್ಲಿ ಮಾರಾಟ ಮಾಡಲಾಗುತ್ತಿದೆ. ಮುಖ್ಯಮಂತ್ರಿಗಳು ಅಂಗಡಿ ಮುಂಗಟ್ಟುಗಳಿಗೂ ಪರಿಹಾರ ನೀಡುವುದಾಗಿ ತಿಳಿಸಿದ್ದರಾದರೂ ನೀರಿನಲ್ಲಿ ಮುಳುಗಿದ ವಸ್ತುಗಳು ಮರು ಮಾರಾಟಕ್ಕೆ ಸಾಧ್ಯವಿಲ್ಲದ ಕಾರಣ ಕಡಿಮೆ ಬೆಲೆಗೆ ಮಾರಾಟ ಮಾಡಲಾಗುತ್ತಿದೆ. ಇನ್ನು ಕೆಲವು ಹಾಗೆಯೇ ಎಸೆಯಬೇಕಾದ ಸ್ಥಿತಿ ಎದುರಾಗಿದೆ.
ಇದನ್ನೂ ಓದಿ: ಚಲಿಸುತ್ತಿದ್ದ ಕಾರಿನ ಮೇಲೆ ಬಿದ್ದ ಆಲದ ಮರ: ತಂದೆ-ಮಗ ದಾರುಣ ಸಾವು