ಕಾರವಾರ: ಸರ್ಕಾರಿ ಹಾಗೂ ಖಾಸಗಿ ವಾಹನಗಳಿಗೆ ಕಾನೂನು ಬಾಹಿರವಾಗಿ ಅಳವಡಿಸಿದ್ದ ಸ್ಪಾಟ್ ಲೈಟ್, ನಂಬರ್ ಪ್ಲೇಟ್, ಸೈಲೆನ್ಸರ್ ಪೈಪ್ಗಳನ್ನ ಕಾರವಾರ ಪ್ರಾದೇಶಿಕ ಸಾರಿಗೆ ಇಲಾಖೆ ಅಧಿಕಾರಿಗಳು ತೆರವು ಮಾಡಿ ವಶಕ್ಕೆ ಪಡೆದಿದ್ದಾರೆ.
ಕಾರವಾರದಲ್ಲಿ ಕೆಲ ದಿನಗಳಿಂದ ಕಾನೂನು ಬಾಹಿರವಾಗಿ ಸರ್ಕಾರಿ ವಾಹನಗಳು ಸೇರಿದಂತೆ ಖಾಸಗಿ ವಾಹನಗಳು ಸ್ಪಾಟ್ ಲೈಟ್ ಹಾಕಿಕೊಂಡು ಓಡಾಡುತ್ತಿದ್ದವು. ಇದು ಎದುರು ಬರುವ ಸವಾರರಿಗೆ ತೊಂದರೆಯಾಗಿ ಹಲವು ಅಪಘಾತಗಳಿಗೂ ಕಾರಣವಾಗಿತ್ತು. ಅಲ್ಲದೆ ಬೈಕ್ಗಳಲ್ಲಿ ಕರ್ಕಶ ಶಬ್ಧ ಬರುವಂತಹ ಸೈಲೆನ್ಸರ್ಗಳನ್ನು ಹಾಗೂ ಚಿತ್ರ ವಿಚಿತ್ರ ನಂಬರ್ ಪ್ಲೇಟ್ಗಳನ್ನು ಅಳವಡಿಸಿದ್ದ ಸುಮಾರು 500ಕ್ಕೂ ಹೆಚ್ಚು ವಾಹನಗಳನ್ನು ಕಳೆದ ಕೆಲ ದಿನಗಳಿಂದ ಅಧಿಕಾರಿಗಳು ತಪಾಸಣೆ ನಡೆಸಿ ಜಪ್ತಿ ಮಾಡಿದ್ದಾರೆ.
ಇನ್ನು ಇಂದು ಕಾರವಾರ ಪ್ರಾದೇಶಿಕ ಸಾರಿಗೆ ಕಚೇರಿಗೆ ಆಗಮಿಸಿದ ಬೆಳಗಾವಿ ವಿಭಾಗೀಯ ಜಂಟಿ ಆಯುಕ್ತ ಪುರುಷೋತ್ತಮ್ ಎದುರೇ ಸರ್ಕಾರಿ ವಾಹನದಲ್ಲಿ ಅಳವಡಿಸಿದ್ದ ಸ್ಪಾಟ್ ಲೈಟ್ ಜಪ್ತಿ ಮಾಡಲಾಯಿತು. ಬಳಿಕ ಮಾಹಿತಿ ನೀಡಿದ ಆರ್ಟಿಒ ಅಧಿಕಾರಿಗಳು, ಕಳೆದ ಕೆಲ ದಿನಗಳಿಂದ ನಿರಂತರ ತಪಾಸಣೆ ನಡೆಸಿ ಕಾನೂನು ಬಾಹಿರವಾಗಿ ಅಳವಡಿಸಿಕೊಂಡ ಬೋರ್ಡ್, ಸೈಲೆನ್ಸರ್ ವಶಕ್ಕೆ ಪಡೆಯಲಾಗಿದೆ ಎಂದು ತಿಳಿಸಿದರು. ಈ ವೇಳೆ ಆರ್ಟಿಒ ಆನಂದ್ ಪಾರ್ತನಳ್ಳಿ, ಇನ್ಸ್ಪೆಕ್ಟರ್ ರವಿ ಬಿಸರಳ್ಳಿ ಇದ್ದರು.